ತುಮಕೂರು:ಜೆಡಿಎಸ್​ನ ಪಂಚರತ್ನ ರಥಯಾತ್ರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಯಶಸ್ವಿ ಯಾತ್ರೆ ಮುಗಿಸಿದ ಖುಷಿಯೊಂದಿಗೆ ಜೆಡಿಎಸ್​ನ ಪಂಚರತ್ನ ರಥಯಾತ್ರೆಯು ಇಂದು(ಗುರುವಾರ) ತುಮಕೂರು ಪ್ರವೇಶಿಸಿದೆ. ಪಂಚರತ್ನ ರಥಯಾತ್ರೆಗೆ ತುಮಕೂರು ನಗರದಾದ್ಯಂತ ಅದ್ದೂರಿ ಸ್ವಾಗತ ಸಿಕ್ಕಿದೆ.
ತುಮಕೂರು ನಗರ ಕ್ಷೇತ್ರದಲ್ಲಿ ರಥಯಾತ್ರೆ ಪ್ರಾರಂಭಿಸುವ ಮುನ್ನ ಸಿದ್ಧಗಂಗಾ ಮಠಕ್ಕೆ ತೆರಳಿದ ಎಚ್​ಡಿಕೆ, ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​ಡಿಕೆ, ಶುಭಘಳಿಗೆ, ಶುಭಮಹೂರ್ತದಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ 11 ಕ್ಷೇತ್ರಕ್ಕೆ 11 ಕ್ಷೇತ್ರವನ್ನೂ ಗೆಲ್ಲುವ ವಿಶ್ವಾಸವಿದೆ. ಅತಂತ್ರ ಪರಿಸ್ಥಿತಿ ಉದ್ಭವಿಸಲ್ಲ. ಬಿಜೆಪಿ ಮತ್ತು ಕಾಂಗ್ರೆಸ್​ನ ಸಹವಾಸ ಮಾಡೋಲ್ಲ. ಸ್ವತಂತ್ರ ಬಲದಿಂದ ಸರ್ಕಾರ ರಚನೆ ಮಾಡ್ತೀವಿ ಎಂದರು.

ಯಾವ ಪಕ್ಷದಲ್ಲಿ ಯಾರನ್ನು ಸೆರಿಸಿಕೊಳ್ಳುತ್ತಾರೆ, ಯಾರನ್ನು ಕಳುಹಿಸ್ತಾರೆ ಎಂಬುದು ನನಗೆ ಬೇಡದ ವಿಚಾರ. ನನ್ನ ಗುರಿ ಇರೋದು ಪಂಚರತ್ನ ಯಾತ್ರೆ ಮೂಲಕ ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ಕೊಡೋದು. ತುಮಕೂರು ನಗರ ಕ್ಷೇತ್ರದಲ್ಲಿ ಜೆಡಿಎಸ್​ ಟಿಕೆಟ್ ಯಾರಿಗೆ ಎಂಬ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತ ಗೋವಿಂದರಾಜು ಅವರು ಒಳ್ಳೆಯ ಕೆಲಸ ಮಾಡಿಕೊಂಡು ಬಂದಿದ್ದಾರೆ‌. ಗೋವಿಂದರಾಜುಗೆ ಟಿಕೆಟ್ ಕೊಡೋದು ಕನ್ಫರ್ಮ್​ ಆಗಿದೆ. ಇದರ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಎಚ್​ಡಿಕೆ ಸ್ಪಷ್ಟಪಡಿಸಿದರು.
ತುಮಕೂರು ನಗರದ ಉಪ್ಪಾರಹಳ್ಳಿಯಲ್ಲಿ ಪಂಚರತ್ನ ರಥಯಾತ್ರೆಯ ರೋಡ್ ಶೋ.#ಪಂಚರತ್ನ_ರಥಯಾತ್ರೆ#ತುಮಕೂರುpic.twitter.com/jfcCw8jW9L
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy)December 1, 2022

ಶಾಮಿಯಾನದ ಕಂಬ ಮುಟ್ಟಿದ ವಿದ್ಯಾರ್ಥಿ ಸಾವು: ಈಜು ಸ್ಪರ್ಧೆಗೆ ರಾಮನಗರಕ್ಕೆ ಆಗಮಿಸಿದ್ದವ ದುರಂತ ಅಂತ್ಯ

ಕನ್ನಡ ಧ್ವಜ ಹಾರಿಸಿದ ಕನ್ನಡ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಮರಾಠಿ ಪುಂಡರ ವಿರುದ್ಧ ಎಚ್​ಡಿಕೆ ಆಕ್ರೋಶ

ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನನ್ನು ಹಿಂಬಾಲಿಸಿದ ಪೊಲೀಸರಿಗೆ ಶಾಕ್​! ಆತನ ಕೈಯಲ್ಲಿತ್ತು ಲಕ್ಷ ಲಕ್ಷ ಹಣ, ಕೆಜಿಗಟ್ಟಲೆ ಬಂಗಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 3 =
Remember me
