ಹುಬ್ಬಳ್ಳಿ:ರಾಷ್ಟ್ರೀಯ ಯುವ ಜನೋತ್ಸವ ಹಿನ್ನೆಲೆ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಇಂದು ಮಧ್ಯಾಹನ 3.25ಕ್ಕೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದ ಮೋದಿ ಅವರು ಏರ್‌ಪೋರ್ಟ್ ಮುಂಭಾಗಕ್ಕೆ 3.36ಕ್ಕೆ ಬಂದರು. ಕಾರಿನಿಂದ ಹೊರ ಬಂದ ಅವರು ನೆರೆದಿದ್ದ ಜನಸ್ತೋಮದತ್ತ ಕೈಬೀಸಿದರು. ಬಳಿಕ 10 ನಿಮಿಷ ಕಾರಿನಲ್ಲಿ ಸಾಗಿದ ಅವರು ಮಂಜುನಾಥ ನಗರ ವಾಟರ್ ಟ್ಯಾಂಕ್ ಹತ್ತಿರ 3.46ರ ಸುಮಾರಿಗೆ ಮತ್ತೆ ಕಾರಿನಿಂದ ಇಳಿದು ಜನರತ್ತ ಕೈಬೀಸಿದರು.
ಬಳಿಕ ಕಾರಿನಿಂದ ಹೊರನಿಂತು ಸರಿಸುಮಾರು ಒಂದು ತಾಸು ರೋಡ್ ಶೋ ನಡೆಸಿದರು. ದಾರಿಯ ಇಕ್ಕೆಲಗಳಲ್ಲೂ ಮೋದಿ ಅವರನ್ನ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದ ಜನರತ್ತ ಪ್ರಧಾನಿಗಳು ಕೈಬೀಸಿದರು.
ಒಂದು ಕ್ಷಣವೂ ದಣಿಯದೇ ಸತತ ಒಂದು ಗಂಟೆ ಕಾಲ ಅವರು ಕಾರಿನಿಂದ ಹೊರ ನಿಂತು ಜನರತ್ತ ಕೈಬೀಸಿದ್ದು ವಿಶೇಷವಾಗಿತ್ತು. ದಾರಿಯುದ್ದಕ್ಕೂ ಜನರು ಮೋದಿ ಅವರತ್ತ ಪುಷ್ಪವೃಷ್ಟಿಗೈದು ಮೋದಿ ಮೋದಿ… ಎಂದು ಘೋಷಣೆ ಕೂಗಿದರು. 3.36 ಗಂಟೆಗೆ ಏರ್‌ಪೋರ್ಟ್‌ನಿಂದ ಸಾಗಿದ ರೋಡ್ ಶೋ ಹುಬ್ಬಳ್ಳಿ ರೈಲ್ವೆ ಮೈದಾನಕ್ಕೆ 4.46ಕ್ಕೆ ತಲುಪಿತು.
6 ಐಪಿಎಸ್ ಅಧಿಕಾರಿಗಳ ವರ್ಗಾವಣೆ‌: ತಿಂಗಳು ತುಂಬುವ ಮುನ್ನವೇ 2 ಬಾರಿ ಆರ್​.ಚೇತನ್​ ವರ್ಗಾವಣೆ

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅಸ್ತು! ಪಕ್ಷ ಸ್ಥಾಪನೆ ಬೆನ್ನಲ್ಲೇ ರೆಡ್ಡಿಗೆ ಬಿಗ್​ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
