ಆಯನೂರು: ತನ್ನ ಮೊಮ್ಮಗಳು ಮೃತಪಟ್ಟಿದ್ದು ಅವಳ ಉಳಿತಾಯ ಖಾತೆಯಲ್ಲಿ ಇರುವ ಹಣವನ್ನು ತನಗೆ ಕೊಡಬೇಕು ಎಂದು ಬ್ಯಾಂಕ್ ಅಧಿಕಾರಿಗಳನ್ನು ಪೀಡಿಸುತ್ತಿದ್ದ ಅಜ್ಜಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ.
ಇಲ್ಲಿನ ಕೆನರಾ ಬ್ಯಾಂಕ್ ಶಾಖೆಗೆ ಇತ್ತೀಚೆಗೆ ಬಂದಿದ್ದ ಅಜ್ಜಿ, ‘‘ನನ್ನ ಮೊಮ್ಮಗಳು ತೀರಿಕೊಂಡಿದ್ದಾಳೆ. ಅವಳ ಖಾತೆಯಲ್ಲಿನ ಹಣವನ್ನು ಕಷ್ಟದಲ್ಲಿರುವ ನನಗೆ ಕೊಡಿ. ಆ ಖಾತೆಗೆ ನಾಮಿನಿಯಾಗಿರುವ ನನ್ನ ಮಗನ ಆಕ್ಷೇಪವೂ ಇದಕ್ಕೆ ಇಲ್ಲ’’ ಎಂದು ಹೇಳಿದ್ದಳು.
ಹಾಗೆ ಹಣ ಕೊಡುವುದಕ್ಕೆ ಬರುವುದಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಎಷ್ಟೇ ಹೇಳಿದರೂ ಆಕೆ ಒಪ್ಪಿರಲಿಲ್ಲ. ಮೊಮ್ಮಗಳ ಮರಣ ಪ್ರಮಾಣಪತ್ರವನ್ನೂ ತಂದು ತೋರಿಸಿದ್ದಳು. ಆಗಲೂ ಬ್ಯಾಂಕಿನವರು ಒಪ್ಪದಿದ್ದಾಗ ಅಜ್ಜಿ ಆತ್ಮಹತ್ಯೆಯ ನಾಟಕವನ್ನೂ ಆಡಿದ್ದಳು.
ಇದನ್ನೂ ಓದಿಕ್ವಾರಂಟೈನ್‌ನಿಂದ ತಪ್ಪಿಸಿಕೊಂಡಿದ್ದ ಗರ್ಭಿಣಿಗೆ ಏನಾಯ್ತು ನೋಡಿ…
ಆದರೀಗ ಅಜ್ಜಿಯ ನೈಜ ಬಣ್ಣ ಬಯಲಾಗಿದೆ. ಆಕೆಯ ಮೊಮ್ಮಗಳು ತನ್ನ ತಾಯಿಯ ಜತೆ ಮಂಗಳವಾರ ಬ್ಯಾಂಕಿಗೆ ಹಾಜರಾಗಿದ್ದಾಳೆ. ಮೊಮ್ಮಗಳ ಖಾತೆಯಲ್ಲಿನ ಹಣ ಪಡೆಯಲು ಮಂಗಳವಾರ ಅಜ್ಜಿ ಬ್ಯಾಂಕಿಗೆ ಬಂದಿದ್ದ ಸಂದರ್ಭದಲ್ಲೇ ಇವರಿಬ್ಬರೂ ಹಾಜರಾಗಿ ಅಜ್ಜಿಯ ಬಣ್ಣ ಬಯಲು ಮಾಡಿದ್ದಾರೆ.
ತನ್ನ ಖಾತೆಯಲ್ಲಿರುವ ಹಣವನ್ನು ಅಜ್ಜಿಗೆ ಕೊಡಬೇಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿರುವ ಮೊಮ್ಮಗಳು, ಜೀವಂತ ಇರುವಾಗಲೇ ಮರಣ ಪ್ರಮಾಣ ಪತ್ರ ನೀಡಿದವರ ವಿರುದ್ಧ ದೂರು ದಾಖಲು ಮಾಡುತ್ತೇನೆ ಎಂದೂ ಎಚ್ಚರಿಸಿದ್ದಾಳೆ.
ಈ ಸಮಸ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. 10ನೇ ತರಗತಿವರೆಗೆ ಅಜ್ಜಿಯ ಜತೆಗಿದ್ದ ಮೊಮ್ಮಗಳಿಗೆ ಬಾಲ್ಯವಿವಾಹ ಮಾಡಲು ಅಜ್ಜಿ ಯತ್ನಿಸಿದ್ದಳು ಎನ್ನಲಾಗಿದೆ. ಆದ್ದರಿಂದ ಮೊಮ್ಮಗಳು ಅಜ್ಜಿಯನ್ನು ಬಿಟ್ಟು ಹೋಗಿ ಬೇರೆ ಊರಿನಲ್ಲಿದ್ದ ಅಮ್ಮನ ಜತೆಗೆ ನೆಲೆಸಿದ್ದಳು. ಇದು ಅಜ್ಜಿಯ ಸಿಟ್ಟಿಗೆ ಕಾರಣ ಎನ್ನಲಾಗಿದೆ.
VIDEO| ನಿನ್ನೆ ದೇವೇಗೌಡರ ಜತೆ ಡಿಕೆಶಿ ಭೋಜನ; ಇವತ್ತು ಎಚ್‌ಡಿಕೆ ಜತೆ ಡಿಕೆ ಸುರೇಶ್ ಕ್ಷೇತ್ರ ಪ್ರವಾಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
