ಬೆಂಗಳೂರು:ಇಲ್ಲೊಬ್ಬ ತನ್ನ ಮೊಮ್ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿ ಸಿಕ್ಕಿಬಿದ್ದು, ಕೊನೆಗೆ 20 ವರ್ಷಗಳ ಶಿಕ್ಷೆಗೆ ಗುರಿಯಾದ ಪ್ರಸಂಗವೊಂದು ನಡೆದಿದೆ. ಬೆಂಗಳೂರಿನ ಫಾಸ್ಟ್​ ಟ್ರ್ಯಾಕ್​ ಸ್ಪೆಷಲ್ ಕೋರ್ಟ್ಸ್​ ನ್ಯಾಯಾಧೀಶರು ಈ ಆದೇಶವನ್ನು ಹೊರಡಿಸಿದ್ದಾರೆ.
ಬೆಂಗಳೂರು ಕುಮಾರಸ್ವಾಮಿ ಬಡಾವಣೆಯ ಎರಡನೇ ಹಂತದ 70 ವರ್ಷದ ಎಂ.ಎ.ರಮೇಶ್ ಶಿಕ್ಷೆಗೊಳಗಾದ ವ್ಯಕ್ತಿ. ಈತನಿಗೆ ಕಲಂ 4(ಬಿ) ಫೋಕ್ಸೊ ಕಾಯ್ದೆ ಪ್ರಕಾರ 20 ವರ್ಷ ಸೆರೆವಾಸ ಮತ್ತು ರೂ. 50 ಸಾವಿರ ದಂಡ, ಕಲಂ 8 ಫೋಕ್ಸೊ ಕಾಯ್ದೆಯನ್ವಯ 3 ವರ್ಷ ಸೆರೆವಾಸ ಮತ್ತು ರೂ. 50 ಸಾವಿರ ದಂಡ, ಕಲಂ 12 ಪೋಕ್ಸೊ ಕಾಯ್ದೆ ಅನ್ವಯ 1 ವರ್ಷ ಸೆರೆವಾಸ ಮತ್ತು ರೂ. 25 ಸಾವಿರ ದಂಡ ಮತ್ತು ಕಲಂ 506 ಐಪಿಸಿ ಅನ್ವಯ ಅಪರಾಧಕ್ಕೆ 1 ವರ್ಷ ಕಾರಾಗೃಹ ಶಿಕ್ಷೆ ಮತ್ತು ರೂ. 5 ಸಾವಿರ ದಂಡ ಹಾಗೂ ಕಲಂ 67(ಎ) ಐ.ಟಿ. ಕಾಯ್ದೆ ಅಡಿ ಅಪರಾಧಕ್ಕೆ 6 ತಿಂಗಳು ಸಾಧಾರಣ ಸಜೆ ಮತ್ತು ರೂ. 5 ಸಾವಿರ ದಂಡ ಮತ್ತು ನೊಂದ ಬಾಲಕಿಗೆ 7 ಲಕ್ಷ ರೂ. ಪರಿಹಾರ ಹಣವನ್ನು ಡಿಎಲ್ಎಸ್ಎನಿಂದ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಫಾಸ್ಟ್​ ಟ್ರ್ಯಾಕ್​ ಸ್ಪೆಷಲ್ ಕೋರ್ಟ್ಸ್​ ನ್ಯಾಯಾಧೀಶೆ ಕೆ.ಎನ್​.ರೂಪ ಈ ಆದೇಶ ನೀಡಿದ್ದು, ಸರ್ಕಾರಿ ಅಭಿಯೋಜಕಿ ಪಿ.ಕೃಷ್ಣವೇಣಿ ವಾದ ಮಂಡಿಸಿರುತ್ತಾರೆ.
ಪ್ರಕರಣ ವಿವರ:ಆರೋಪಿಯು ಮೊಮ್ಮಗಳು 3ನೇ ತರಗತಿಯಿಂದ 8ನೇ ತರಗತಿಗೆ ಬರುವವರೆಗೂ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಗಾಗ ಮೊಬೈಲ್​ಫೋನ್​ನಲ್ಲಿ ಅಶ್ಲೀಲ ಸಿನಿಮಾಗಳನ್ನು ತೋರಿಸಿ ಲೈಂಗಿಕವಾಗಿ ಪ್ರಚೋದಿಸಿ ದೌರ್ಜನ್ಯವೆಸಗಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ತಂದೆಯನ್ನು ಸಾಯಿಸುತ್ತೇನೆಂದು ಮೊಮ್ಮಗಳಿಗೆ ಪ್ರಾಣ ಬೆದರಿಕೆ ಹಾಕಿ ಅಪರಾಧ ಎಸಗಿದ್ದಾನೆಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿ ವಿರುದ್ಧ ಕುಮಾರಸ್ವಾಮಿ ಬಡಾವಣೆ ಪೋಲಿಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾಗಿದೆ ಎಂದು ಘೋಷಿಸಿ, ಶಿಕ್ಷೆ ವಿಧಿಸಿ ಆದೇಶಿಸಿರುತ್ತದೆ.
ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು ಪರಾರಿಯಾದ ದಂಪತಿ; ಕೋಟಿಗಟ್ಟಲೆ ರೂ. ವಂಚನೆ, ಪೊಲೀಸರಿಗೆ ದೂರು

ಪೊಲೀಸರೆದುರೇ ಮಾರಕಾಸ್ತ್ರ ಝಳಪಿಸಿ ದಾದಾಗಿರಿ; ಒಳ್ಳೇ ಮಾತಲ್ಲಿ ಹೇಳಿದ್ರೂ ಕೇಳದವನಿಗೆ ಶೂಟ್ ಮಾಡಿ ಬೆಂಡೆತ್ತಿದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 9 =
Remember me
