ತಿಪಟೂರು:ಜಗತ್ತಿನಲ್ಲಿ ಎಂತೆಂಥ ಕಟುಕರು ಇರ್ತಾರೆ ನೋಡಿ. ಕೈ ತುತ್ತು ಕೊಟ್ಟು ಪ್ರೀತಿಯಿಂದ ಸಾಕಿ ಸಲುಹಿದ ಮೊಮ್ಮಗನೇ ಅಜ್ಜಿಯ ತಲೆಯನ್ನ ಕಲ್ಲಿನಿಂದ ಜಜ್ಜಿ ಕೊಂದಿರುವವ ಘಟನೆ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ.
ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್ ಬಳಿಯ ಕಿಬ್ಬನಹಳ್ಳಿ ಪಾಳ್ಯದಲ್ಲಿ ಶುಕ್ರವಾರ ತಡರಾತ್ರಿ ಮನೆಯಲ್ಲೇ ವೃದ್ಧೆ ಲಲಿತಮ್ಮ(75) ಕೊಲೆಯಾಗಿದ್ದಾರೆ. ಈಕೆಯ ಮೊಮ್ಮಗ ಪುನೀತ್ ಕುಮಾರ್(25) ಕೊಲೆ ಆರೋಪಿ. ಅಜ್ಜಿಯನ್ನ ಕೊಂದು ಗೋಬರ್ ಗ್ಯಾಸ್ ಗುಂಡಿಯಲ್ಲಿ ಹಾಕಿರುವುದು ಬೆಳಕಿಗೆ‌ ಬಂದಿದೆ.ಇದನ್ನೂ ಓದಿರಿರಸ್ತೆಯಲ್ಲಿ ಫೋಟೋ ಇಟ್ಟು ಬಿಕ್ಕಿಬಿಕ್ಕಿ ಅತ್ತರು, ರಕ್ತ ಹರಿದ ಸ್ಥಳದಲ್ಲೇ ಕಣ್ಣೀರ ಧಾರೆ… ಮನಕಲಕುತ್ತೆ ಈ ದೃಶ್ಯ
ಅಜ್ಜಿಯ ಹೆಸರಿನಲ್ಲಿ ಟ್ರ್ಯಾಕ್ಟರ್ ಖರೀದಿಸಿದ್ದ ಪುನೀತ್, ಸಾಲ ತೀರಿಸಲು ಪರದಾಡುತ್ತಿದ್ದ. ಕೊನೆಗೆ ಟ್ರ್ಯಾಕ್ಟರ್ ಮಾರಲು ತೀರ್ಮಾನಿಸಿದ ಪುನೀತ್​, ಸಹಿ ಮಾಡುವಂತೆ ಅಜ್ಜಿಗೆ ಪೀಡಿಸಿದ್ದ. ಇದಕ್ಕೆ ಒಪ್ಪದ ಅಜ್ಜಿ, ಸಹಿ ಮಾಡಲು ನಿರಾಕರಿಸಿದ್ದರು. ಇದೇ ವಿಚಾರವಾಗಿ ಸಿಟ್ಟಿಗೆದ್ದ ಮೊಮ್ಮಗ, ತಡರಾತ್ರಿ ಮನೆಯಲ್ಲೇ ಅಜ್ಜಿ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಪುನೀತ್​ಗೆ ತಂದೆ-ತಾಯಿ ಇಲ್ಲ. ಹಾಗಾಗಿ ಅಜ್ಜಿ ಮನೆಯಲ್ಲೇ ಆತ ವಾಸವಿದ್ದ. ಕೆಬಿ ಕ್ರಾಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆಯಲ್ಲಿ ಫೋಟೋ ಇಟ್ಟು ಬಿಕ್ಕಿಬಿಕ್ಕಿ ಅತ್ತರು, ರಕ್ತ ಹರಿದ ಸ್ಥಳದಲ್ಲೇ ಕಣ್ಣೀರ ಧಾರೆ… ಮನಕಲಕುತ್ತೆ ಈ ದೃಶ್ಯ

ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ! ಸಲ್ಲಾಪದ ವೇಳೆ ವರಸೆ ಬದಲು, ಬೆಸ್ತುಬಿದ್ದವ ಮಾಡಿದ್ದೇನು?

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:10 + 19 =
Remember me
