ಬೀದರ್:ಇತ್ತೀಚಿನ ವರ್ಷಗಳಲ್ಲಿ ನೂರು ವರ್ಷ ಪೂರೈಸುವುದೇ ಅಪರೂಪ. ಅಂಥದ್ದರಲ್ಲಿ, ಶತಾಯುಷಿಯಾದವರಿಗೆ ಹೊಸ ಹಲ್ಲು ಚಿಗುರೊಡೆದರೆ? ಇದೊಂಥರಾ ವಿಶೇಷ ಅಲ್ಲವೇ? ಬೀದರ್ ಜಿಲ್ಲೆಯಲ್ಲೂ ಇಂಥದ್ದೇ ಒಂದು ವಿಶೇಷ ಕಂಡುಬಂದಿದೆ.
ಇದನ್ನೂ ಓದಿ:ಪ್ರಚಾರದಲ್ಲಿ ಸುಂಟರಗಾಳಿ ಎಬ್ಬಿಸಲು ಬಿಜೆಪಿ ಪ್ಲ್ಯಾನ್; ಆಂಧ್ರ, ತೆಲಂಗಾಣ ಗಡಿ ಜಿಲ್ಲೆಗಳಲ್ಲಿ ಪವನ್ ಕಲ್ಯಾಣ್ ಗರ್ಜನೆ ನಿರೀಕ್ಷೆ | ಅಖಾಡದಲ್ಲಿ ತಾರೆಯರ ಮಿಂಚು
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮದ ಶತಾಯುಷಿ ಗಂಗಮ್ಮ ಗುರಪ್ಪ ಕಣ್ಣೂರ್ ಜನವಾಡ್ ಎಂಬ ಅಜ್ಜಿಗೆ ಹೊಸ ಹಲ್ಲು ಮೂಡಿದೆ. ಇಷ್ಟು ಇಳಿ ವಯಸ್ಸಿನಲ್ಲಿ ಹೊಸದಾಗಿ ಹಲ್ಲು ಚಿಗುರೊಡೆದರೆ ಅಂಥವರಿಗೆ ಈ ಭಾಗದಲ್ಲಿ ತೊಟ್ಟಿಲೋತ್ಸವ ಮಾಡಲಾಗುತ್ತದೆ.
105 ವರ್ಷ ವಯಸ್ಸು ತುಂಬಿರುವ ಗಂಗಮ್ಮ ಅವರಿಗೆ ತೊಟ್ಟಿಲೋತ್ಸವ ಮಾಡಿ ಗೌರವಿಸಲಾಯಿತು. ಸಂಬಂಧಿಕರು ಹಾಗೂ ಪರಿಚಿತರು ಅಜ್ಜಿಯನ್ನು ಚಿಕ್ಕಮಗುವಿನಂತೆ ತೊಟ್ಟಿಲಲ್ಲಿ ಕೂರಿಸಿ ತೊಟ್ಟಿಲು ತೂಗಿದರು. ಅಜ್ಜಿಯ ತಲೆ ಮೇಲೆ ಗುಲಾಬಿ ಹೂವಿನ ದಳಗಳ ಮಳೆ ಸುರಿಸಿದರು. ಈ ಸಂದರ್ಭದಲ್ಲಿ ಹಾರಕೂಡದ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಣ್ಣೂರ ಜನವಾಡ ಪರಿವಾರದವರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸೋಲಾರ್ ಚಾಲಿತ ಉಳುಮೆ ಯಂತ್ರ; ರೈತಸ್ನೇಹಿ ಯಂತ್ರ ಸಿದ್ಧಪಡಿಸಿದ ವಿದ್ಯಾರ್ಥಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 2 =
Remember me
