ಬೆಂಗಳೂರು:ನವೋದ್ಯಮ, ನಾವೀನ್ಯತೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಜಾರಿಗೊಳಿಸಿ ‘ಎಲಿವೇಟ್ ಕರ್ನಾಟಕ’ ಕಾರ್ಯಕ್ರಮವು ಈ ವಲಯಕ್ಕೆ ಹೊಸ ಆಯಾಮ ನೀಡಿದೆ. ಪ್ರಸಕ್ತ ವರ್ಷ 100 ಸ್ಟಾರ್ಟಪ್‌ಗಳಿಗೆ ಅನುದಾನ ನೀಡುವ ಉದ್ದೇಶವಿದೆ ಎಂದು ಮಾಹಿತಿ, ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿಕಾಸಸೌಧದಲ್ಲಿ ಶನಿವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಶ್ವದರ್ಜೆಯ ನವೋದ್ಯಮ ವಾತಾವರಣ ಸೃಷ್ಟಿಸಲು ರಾಜ್ಯ ಸರ್ಕಾರ ಹಲವು ಬಗೆಯ ಹೂಡಿಕೆ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡಿದೆ ಎಂದರು.
ಐಡಿಯಾ2 ಪಿಒಸಿ- ಎಲಿವೇಟ್ ಯೋಜನೆಯಡಿ ನವೋದ್ಯಮಗಳನ್ನು ಗುರುತಿಸಲು, ಪೋಷಿಸಲು, ಹಣಕಾಸು ಅಥವಾ ಮಾರ್ಗದರ್ಶನ, ಮೂಲ ಮಾದರಿ ಮಾರುಕಟ್ಟೆ ಲಭ್ಯತೆ, ಅಭಿವೃದ್ಧಿ, ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವಕಾಶ ಮುಂತಾದವುಗಳನ್ನು ಒದಗಿಸಲಾಗುತ್ತದೆ.
ಹೊಸ ತಂತ್ರಜ್ಞಾನ, ವಿಶಿಷ್ಟ ಆಲೋಚನೆಯುಳ್ಳ ನವೋದ್ಯಮಗಳಿಗೆ ಬೆಂಬಲಿಸಿ, ಮಾರುಕಟ್ಟೆ ಅಭಿವೃದ್ಧಿ ಮತ್ತು ವಿಸ್ತರಿಸಲು ಆರಂಭಿಕ ಹಂತದ ಆರ್ಥಿಕ ನೆರವು ನೀಡಲಾಗುತ್ತದೆ. ಗರಿಷ್ಠ 50 ಲಕ್ಷ ರೂ.ವರೆಗೆ ಸಹಾಯಾನುದಾನ ಒದಗಿಸಲಿದ್ದು, ಇದಕ್ಕಾಗಿ ಪ್ರಸಕ್ತ ಬಜೆಟ್ 20 ಕೋಟಿ ರೂ. ಮೀಸಲಿರಿಸಿ 100 ನವೋದ್ಯಮಗಳಿಗೆ ನೆರವು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಅರ್ಜಿ ಸಲ್ಲಿಸುವ ನವೋದ್ಯಮಗಳ ನೋಂದಣಿ ಪ್ರಕ್ರಿಯೆ ನ.23 ರಿಂದ ಡಿ.23ರವರೆಗೆ ನಡೆಯಲಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿತ ಮೌಲ್ಯಮಾಪನ ಸಮಿತಿಯು ವಿವಿಧ ಸಂಸ್ಥೆಗಳು, ನವೋದ್ಯಮ ವಿಷನ್ ಗ್ರೂಪ್ ಅಧ್ಯಕ್ಷರನ್ನು ಒಳಗೊಂಡಿದ್ದು, ಪಾರದರ್ಶಕವಾಗಿ ವಿಜೇತರನ್ನು ಆಯ್ಕೆ ಮಾಡಲಿದೆ ಎಂದು ತಿಳಿಸಿದರು.
ಆನ್‌ಲೈನ್ ಮುಖೇನ ಏಕಗವಾಕ್ಷಿ ವ್ಯವಸ್ಥೆಯಡಿ ಈ ಪ್ರಕ್ರಿಯೆ ನಿರ್ವಹಿಸಲಾಗುವುದು. ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡವರ ದತ್ತಾಂಶ ಸಮರ್ಪಕತೆ ಪರಿಶೀಲನೆ, ಎರಡನೇ ಹಂತದಲ್ಲಿ ಪ್ರಸ್ತುತಪಡಿಸಿದ ಪರಿಕಲ್ಪನೆಯ ಮೌಲ್ಯಮಾಪನ, ಮೂರನೇ ಹಂತದಲ್ಲಿ ಮಲ್ಟಿ ಸಿಟಿ ಪಿಚಿಂಗ್ ಹಾಗೂ ನಾಲ್ಕನೇ ಅಂತಿಮ ಹಂತದ ಪ್ರಕ್ರಿಯೆ ಮುಂದಿನ ೆಬ್ರವರಿಯೊಳಗೆ ನಡೆದು, ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ನವೋದ್ಯಮ, ಆವಿಷ್ಕಾರಗಳಿಗೆ ಒತ್ತಾಸೆ ನೀಡಲೆಂದು 2016ರಲ್ಲಿ ಎಲಿವೇಟ್ ಯೋಜನೆ ಆರಂಭಿಸಿದಾಗ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಈ ಪ್ರಯೋಗದ ಯಶಸ್ಸು ಗಮನಿಸಿದವರು ಮುಕ್ತ ಕಂಠದಿಂದ ಸ್ವಾಗತಿಸಿರುವುದು ಗಮನಾರ್ಹ.
ಕರೊನಾ ಹಾವಳಿಯಿಂದಾಗಿ ಮಧ್ಯದಲ್ಲಿ ಎರಡು ವರ್ಷ ನೆರವು ನೀಡಲಾಗಿಲ್ಲ. ಕಳೆದ ಏಳು ವರ್ಷ (2016 ರಿಂದ 2023)ಗಳ 874 ನವೋದ್ಯಮಗಳಿಗೆ 200 ಕೋಟಿ ರೂ. ಅನುದಾನದ ನೆರವು ವಿತರಿಸಲಾಗಿದೆ.
ಈ ಪೈಕಿ ಶೇ.30ರಷ್ಟು ಮಹಿಳೆಯರಿರುವ ನವೋದ್ಯಮಗಳಾಗಿವೆ. ಅಲ್ಲದೆ, ಉನ್ನತಿ ಕಾರ್ಯಕ್ರಮ ಮೂಲಕ ಪರಿಶಿಷ್ಟ ಜಾತಿ, ಪಂಗಡಗಳ 91 ನವೋದ್ಯಮಗಳು ತಲೆ ಎತ್ತಿವೆ. ಕಲ್ಯಾಣ ಕರ್ನಾಟಕ ಸೇರಿ ಬೆಂಗಳೂರಿನಾಚೆ ನವೋದ್ಯಮಗಳು ಶೇಕಡ 24ರಷ್ಟಿವೆ ಎಂದು ಗಮನಸೆಳೆದರು.
ರಾಜ್ಯದಲ್ಲಿ ನೋಂದಾಯಿತ 15 ಸಾವಿರ ಸೇರಿ 25 ಸಾವಿರ ನವೋದ್ಯಮಗಳಿವೆ. ಜಾಗತಿಕವಾಗಿ 8ನೇ ಸ್ಥಾನದಲ್ಲಿದ್ದು, ಮುಂದಿನ 2-3 ವರ್ಷಗಳೊಳಗೆ ಐದನೇ ಸ್ಥಾನ ಪಡೆಯುವ ಗುರಿಯಿದೆ. ರಾಷ್ಟ್ರೀಯ ನೀತಿ ಆಯೋಗದ ಸೂಚ್ಯಂಕದ ಪ್ರಕಾರ ರಾಜ್ಯ ನಂಬರ್ ಒನ್ ಆಗಿದೆ. ಇವುಗಳ ಒಟ್ಟು ಮೌಲ್ಯ 1,582.54 ಕೋಟಿ ರೂ. (190 ಬಿಲಿಯನ್ ಡಾಲರ್)ಗಳಾಗಿದೆ ಎಂಬ ಮಾಹಿತಿ ನೀಡಿದರು.
ಪರಿಣತ ಸಂಸ್ಥೆಗಳು, ಹೆಸರಾಂತ ಉದ್ಯಮಗಳಿಂದ ಮಾರ್ಗದರ್ಶನ, ಸರ್ಕಾರದಿಂದ ಅನುದಾನದ ಜತೆಗೆ ಪೋಷಣೆ, ಮಾರುಕಟ್ಟೆ, ಕಾರ್ಯಜಾಲ ಲಭ್ಯತೆ ನೀಡುವ ವಿಶಿಷ್ಟ ಪ್ರಯೋಗವು ದೇಶದಲ್ಲೇ ಮೊದಲು ಎಂದು ಪ್ರಿಯಾಂಕ್ ಖರ್ಗೆ ಹೇಳಿಕೊಂಡರು. ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ದರ್ಶನ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − one =
Remember me
