ಬೆಂಗಳೂರು :ಕರೊನಾತಂಕದ ನಡುವೆ ಬಿರುಸಿನ ಪ್ರಚಾರ, ತುರುಸಿನ ಪೈಪೋಟಿ ಕಂಡ ಪಂಚಾಯಿತಿ ಕದನ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ. ಎರಡೂ ಹಂತಗಳಲ್ಲಿ ಒಟ್ಟು 5,728 ಗ್ರಾಮ ಪಂಚಾಯಿತಿಗಳ 82,616 ಸ್ಥಾನಗಳಿಗೆ ನಡೆದ ಚುನಾವಣೆಗೆ 2,22,814 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾರ ಪ್ರಭು ನೀಡಿದ ಆದೇಶ ಏನೆಂದು ಗೊತ್ತಾಗಲಿದೆ. ಈ ಮಧ್ಯೆ ಒಟ್ಟು 8,074 ಉಮೇದುವಾರರು ಅವಿರೋಧವಾಗಿ ಆಯ್ಕೆಯಾಗಿದ್ದರೆ, ನಾಮಪತ್ರ ಸಲ್ಲಿಕೆಯಾಗದೆ ಒಟ್ಟು 648 ಸ್ಥಾನಗಳು ಖಾಲಿ ಉಳಿದಿವೆ.
ಮತದಾನ ಪ್ರಮಾಣ ಹೀಗಿತ್ತು..
ಮೊದಲ ಹಂತದಲ್ಲಿ 3,019 ಗ್ರಾ.ಪಂ.ಗಳ 43,238 ಸ್ಥಾನಗಳಿಗೆ ಶೇ.82.13 ಹಾಗೂ ಎರಡನೇ ಹಂತದಲ್ಲಿ 2,709 ಗ್ರಾ.ಪಂ.ಗಳ 39,378 ಸ್ಥಾನಗಳಿಗೆ ಶೇ.80.71 ಮತದಾನವಾಗಿದೆ.
ಫಲಿತಾಂಶ ವಿಳಂಬ ಸಾಧ್ಯತೆ:ಗ್ರಾ.ಪಂ. ಚುನಾವಣೆಯ ಮತಗಳ ಎಣಿಕೆ ಕಾರ್ಯ ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಪ್ರಾರಂಭವಾಗಲಿದ್ದು, ಆಯಾ ಜಿಲ್ಲಾ ಆಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ, ಉಳಿದೆಡೆ ಮತಪತ್ರಗಳನ್ನು ಬಳಸಲಾಗಿದೆ. ಅಲ್ಲದೆ, ಕರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಿರುವ ಹಿನ್ನೆಲೆಯಲ್ಲಿ ಮತಗಳ ಎಣಿಕೆ ಪೂರ್ಣಗೊಳ್ಳುವುದು, ಫಲಿತಾಂಶದ ಸ್ಪಷ್ಟ ಚಿತ್ರಣ ಲಭಿಸುವುದು ತಡವಾಗಲಿದೆ.
ಇದನ್ನೂ ಓದಿ:ಮದುವೆ ದಿನವೇ ಮುಟ್ಟಾಗಿದ್ದಳಾಕೆ
ಪಕ್ಷಗಳ ಬಲಾಬಲ ಬಹಿರಂಗ :ಚುನಾವಣೆ ನಡೆದ ಒಟ್ಟು ಸ್ಥಾನಗಳಲ್ಲಿ ಶೇ.80 ಪಕ್ಷದ ಬೆಂಬಲಿಗರನ್ನು ಗೆಲ್ಲಿಸುವ ಛಲದ ಜತೆಗೆ ವ್ಯವಸ್ಥಿತ ಕಾರ್ಯತಂತ್ರ ರೂಪಿಸಲಾಗಿದೆ. ಹೀಗಾಗಿ ನಿರೀಕ್ಷಿತ ಫಲಿತಾಂಶವೇ ಬರಲಿದೆ ಎಂಬ ಉಮೇದಿ ಆಡಳಿತಾರೂಡ ಬಿಜೆಪಿಯದ್ದಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಹಿನ್ನಡೆಯಾಗಿದ್ದರೂ ಕಾಂಗ್ರೆಸ್ ಬುನಾದಿ ಭದ್ರವಾಗಿದೆ. ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರ ಪಡೆ ದೊಡ್ಡದಾಗಿದ್ದು, ಮೇಲುಗೈ ನಿಶ್ಚಿತವೆಂಬ ಆತ್ಮವಿಶ್ವಾಸ ಕಾಂಗ್ರೆಸ್​ನಲ್ಲಿದ್ದರೆ, ಇತಿಮಿತಿಯೊಳಗೆ ಗಮನಾರ್ಹ ಸಾಧನೆ ಮಾಡಲಿದ್ದೇವೆ ಲೆಕ್ಕಾಚಾರ ಜೆಡಿಎಸ್ ನಾಯಕರದಾಗಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಎಣಿಕೆಗೂ ಮುನ್ನವೇ ಅಂಚೆ ಮತಪತ್ರಗಳು ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
