ವಿಜಯಪುರ : ಐತಿಹಾಸಿಕ ಗುಮ್ಮಟ ನಗರಿಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ನಾಡಿನ ಪ್ರತಿಷ್ಠಿತ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮೂರು ದಿನ ನಡೆದ `ಎಜುಕೇಷನ್ ಎಕ್ಸಪೋ-2024’ಗೆ ಅದ್ಭುತ ಸ್ಪಂದನೆ ಸಿಕ್ಕಿತು.
ಇಲ್ಲಿನ ಸಂಗನಬಸವ ಸಮುದಾಯ ಭವನದಲ್ಲಿ ಜ.29 ರಂದು ಆರಂಭಗೊಂಡಿದ್ದ ಎಕ್ಸಪೋ ಬುಧವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಬರದ ನಾಡೆಂಬ ಹಣೆಪಟ್ಟಿ ಹೊತ್ತಿರುವ ವಿಜಯಪುರದ ಶೈಕ್ಷಣಿಕ ಬರ ನೀಗಿಸುವ ನಿಟ್ಟಿನಲ್ಲಿ ಮೇಳ ಯಶಸ್ವಿಯಾಗಿದ್ದು, ಇಂಥ ಮೇಳಗಳು ಇನ್ನಷ್ಟು ಹೆಚ್ಚಾಗಬೇಕು,ಇದರಿಂದ ಶಿಕ್ಷಣ ಸಂಸ್ಥೆಗಳಿಗೆ ಅಲೆದಾಡುವುದು ತಪ್ಪಲಿದೆ ಎಂದು ಮೇಳಕ್ಕೆ ಆಗಮಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು. ಅದರಲ್ಲೂ ಚಾಣಕ್ಯ ಕರಿಯರ್ ಅಕಾಡೆಮಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಂಡೋಪತಂಡವಾಗಿ ಆಗಮಿಸಿದ್ದು ಮೇಳದ ಕಳೆ ಹೆಚ್ಚಿಸಿತು. ವಿಜಯಪುರ, ಬಾಗಲಕೊಟೆ, ಧಾರವಾಡ ಸೇರಿ ವಿವಿಧೆಡೆಯ 32 ಶಿಕ್ಷಣ ಸಂಸ್ಥೆಗಳನ್ನು ಒಂದೇ ಸೂರಿನಡಿ ಸೇರಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ರಾಂತಿ ಮಾಡಲಾಗಿದೆ ಎಂದು ಶಿಕ್ಷಣಾಸಕ್ತರು ಹೆಮ್ಮೆ ವ್ಯಕ್ತಪಡಿಸಿದರು.
ಮೂರು ದಿನ ನಡೆದ ಉಪನ್ಯಾಸ, ಸಂವಾದ, ಚರ್ಚಾಗೋಷ್ಠಿಗಳಿಂದ ಅನೇಕರು ವಿಜ್ಞಾನದಾಹ ತೀರಿಸಿಕೊಂಡರು. ಸಂಗೀತ, ಚಿತ್ರಕಲೆ, ಹಾಸ್ಯ, ವಿಜ್ಞಾನ ವಸ್ತು ಪ್ರದರ್ಶನ ಹೀಗೆ ಉಪಯುಕ್ತ ಕಾರ್ಯಕ್ರಮಗಳು ಜನಮನಸೂರೆಗೊಂಡವು. ಆರೋಗ್ಯ ಉಚಿತ ಶಿಬಿರದಿಂದ ಸಾಕಷ್ಟು ಜನರಿಗೆ ಪ್ರಯೋಜನವಾಯಿತು. ಇಂಥ ಕಾರ್ಯಾಗಾರ ಮತ್ತೆ ಮತ್ತೆ ನಡೆಯಲಿ ಎಂದು ವಿದ್ಯಾರ್ಥಿಗಳು ಆಶಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + six =
Remember me
