ವಿಜಯಪುರ:ಕಷ್ಟ ಪಟ್ಟು ಬೆಳೆದ ಬೆಳೆ ಫಲವತ್ತಾಗಿದೆ. ಬಂಡವಾಳವನ್ನು ಲಾಭ ಸಮೇತ ಹಿಂಪಡೆಯಬಹುದು ಎಂದು ಪ್ರತಿಯೊಬ್ಬ ರೈತನೂ ಯೋಚಿಸಿರುತ್ತಾನೆ. ಆದರೆ ಕೆಲವೊಮ್ಮೆ ಅಂದುಕೊಂಡಂತೆ ಆಗುವುದಿಲ್ಲ. ರೈತ ಬೆವರು ಹರಿಸಿ ಬೆಳೆದ ಬೆಳೆ ಇನ್ಯಾರದ್ದೋ ಪಾಲಾಗಿ ಬಿಡುತ್ತದೆ. ಅದರಲ್ಲೂ ಭೂಮಿಯಲ್ಲಿ ಫಲವತ್ತಾದ ಬೆಳೆ ಇರುವಂತಹ ಸಂದರ್ಭದಲ್ಲಿ ರೈತರು ಹೆಚ್ಚಿನ ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಲ್ಲದೇ ಹೋದರೆ ಬೆಳೆ ಸಂಪೂರ್ಣವಾಗಿ ಕಳ್ಳರ ಪಾಲಾಗಿ ಬಿಡುತ್ತದೆ.
ಈ ಹಿಂದೆಯೂ ಸಾಕಷ್ಟು ವರದಿಗಳಾಗಿವೆ. ಅಡಿಕೆ, ಕಾಳು ಮೆಣಸು, ಈರುಳ್ಳಿ ಮುಂತಾದವುಗಳು ಕಳ್ಳತನವಾಗಿರುವುದು. ಇದೀಗ ಕಳ್ಳರು ಜಮೀನಿನಲ್ಲಿದ್ದ ಹಸಿ ಮೆಣಸಿಕಕಾಯಿಗಳನ್ನು ಕಳ್ಳತನ ಮಾಡಿದ್ದಾರೆ. ಇದರಿಂದ ತೊಂದರೆಗೊಳಗಾದ ರೈತ ಚಿಂತಿಸುವಂತಾಗಿದೆ.
ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ಪಟ್ಟಣದ ಕೊರವಾರ ಗ್ರಾಮದಲ್ಲಿ ಶಂಕರಗೌಡ ಹೊಸಗೌಡರ ಎಂಬುವವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಹಸಿ ಮೆಣಸಿನಕಾಯಿ ಬೆಳೆದಿದ್ದರು. ಸದ್ಯ ಕಳ್ಳರು ಇವರ ಜಮೀನಿನಲ್ಲಿ ಬೆಳೆದಿದ್ದ ಹಸಿ ಮೆಣಸಿನಕಾಯಿಗಳನ್ನು ಗಿಡದಿಂದಲೇ ಕೊಯ್ದು ಕದ್ದೊಯ್ದಿದ್ದಾರೆ. ಸುಮಾರು 5 ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಹಸಿ ಮೆಣಸಿನಕಾಯಿ ಕಳ್ಳರ ಪಾಲಾಗಿದೆ. ಸದ್ಯ ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
