ಬೆಂಗಳೂರು:ರಾಜ್ಯದಲ್ಲಿ ಲಾಕ್​ಡೌನ್ ವಿನಾಯಿತಿ ಮುಂದುವರಿಸಿರುವ ಸರ್ಕಾರ ಹಸಿರು ವಲಯದ (ಕರೊನಾ ಸೋಂಕು ಮುಕ್ತ) 9 ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಿಸುವುದಕ್ಕೆ ಹಸಿರು ನಿಶಾನೆ ತೋರಿದೆ. ನಿಯಂತ್ರಿತ (ಕಂಟೇನ್ಮೆಂಟ್) ವಲಯ ಹೊರತುಪಡಿಸಿ, ಕೇಂದ್ರದ ಕ್ರೋಡೀಕೃತ ಹಾಗೂ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ವಿನಾಯಿತಿ ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರನ್ವಯ 9 ಜಿಲ್ಲೆಗಳ ಗ್ರಾಮೀಣ ಪ್ರದೇಶದ ( ಜಿಲ್ಲಾ ಕೇಂದ್ರದ ಹೊರಗಿರುವ) ಉದ್ಯಮಗಳ ಕಾರ್ಯಾಚರಣೆಗೆ ಅನುಮತಿ ಸಿಕ್ಕಂತಾಗಿದೆ.
ಯಾವ್ಯಾವ ಜಿಲ್ಲೆಗಳು?
* ಚಾಮರಾಜನಗರ * ಕೋಲಾರ * ಹಾಸನ *ಚಿಕ್ಕಮಗಳೂರು * ಶಿವಮೊಗ್ಗ  * ಹಾವೇರಿ * ಕೊಪ್ಪಳ * ರಾಯಚೂರು * ಯಾದಗಿರಿ
ಏನು ಮಾಡಬೇಕು?:ಕೈಗಾರಿಕೆ, ಕಂಪನಿ ಮಾಲೀಕರು ಅಥವಾ ಮುಖ್ಯಸ್ಥರು ಕೈಗಾರಿಕೆ ಪ್ರಾರಂಭಕ್ಕೆ ಅನುಮತಿ ಕೋರಿ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೈಗಾರಿಕಾ ಇಲಾಖೆ ಆಯುಕ್ತರು, ನಿರ್ದೇಶಕರು ಅಥವಾ ಸಂಬಂಧಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸಲ್ಲಿಸಬೇಕು. ಜತೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವ ಬಗ್ಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಡಬೇಕು. ನಂತರ ಸಂಬಂಧಿಸಿದ ಅಧಿಕಾರಿ ಗೊತ್ತುಪಡಿಸಿದ ಅನುಬಂಧದಲ್ಲಿ ದೃಢೀಕರಣ ಪತ್ರ ನೀಡಿದ ಬಳಿಕ ಉದ್ಯಮ, ತಯಾರಿಕಾ ಘಟಕ ಕಾರ್ಯಾಚರಣೆಗೆ ಅವಕಾಶ ಲಭಿಸುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 1 =
Remember me
