ಬೆಂಗಳೂರು:ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕ್ಲಬ್ (ಸಿಎಲ್-4), ಹೋಟೆಲ್ ಮತ್ತು ಗೃಹ (ಸಿಎಲ್-7) ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್-9)ಗಳಲ್ಲಿ ಮೇ 8ರಿಂದ 17ರವರೆಗೆ ಪಾರ್ಸೆಲ್ ಮೂಲಕ ಮದ್ಯ ಮಾರಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಈಗಾಗಲೇ ದಾಸ್ತಾನು ಮಾಡಿರುವ ಮದ್ಯ ಹಾಗೂ ಬಿಯರ್ ಖಾಲಿ ಆಗುವವರೆಗೂ ಮಾತ್ರವೇ ಕಾರ್ಯ ನಿರ್ವಹಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಆದರೆ, ಹೊಸದಾಗಿ ತಂಪು ಪಾನೀಯ ನಿಗಮದಿಂದ, ಡಿಪೋಗಳಿಂದ ಮದ್ಯ ಖರೀದಿಸುವಂತಿಲ್ಲ ಎಂದು ಅಬಕಾರಿ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿತಬ್ಲಿಘ್ ಸಂಪರ್ಕ ತಂದ ಕಂಟಕ: ತಹಸೀಲ್ದಾರ್, ಡಿಎಚ್‌ಒ ಸೇರಿ ಹಲವು ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್!
ರಾಜ್ಯದಲ್ಲಿ 3552 ಸಿಎಲ್-9, 1037 ಸಿಎಲ್ -7 ಹಾಗೂ 232 ಸಿಎಲ್-4 ಮದ್ಯದಂಗಡಿಗಳಿವೆ. 46 ದಿನಗಳ ಬಳಿಕ ಮದ್ಯ ಮಾರಾಟಕ್ಕೆ ಅನುಮೋದನೆ ನೀಡಲಾಗಿದೆ. ಈ ಅಂಗಡಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಯರ್ ದಾಸ್ತಾನು ಮಾಡಲಾಗಿತ್ತು. 6 ತಿಂಗಳ ಅವಧಿ ಮೀರಿದರೆ ಬಿಯರ್ ನಾಶಪಡಿಸಬೇಕಾಗುತ್ತದೆ. ಆದ್ದರಿಂದ, ಆ ಮದ್ಯಗಳನ್ನು ಮಾರಾಟ ಮಾಡಲು ಅನುಮತಿ ನೀಡುವಂತೆ ವೈನ್ ಮರ್ಚೆಂಟ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ವೈನ್ ಶಾಪ್ (ಸಿಎಲ್ 2) ಹಾಗೂ ಎಂಎಸ್‌ಐಎಲ್ ( ಸಿಎಲ್-11ಸಿ) ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ ಶುಕ್ರವಾರ 147 ಕೋಟಿ ರೂ. ಮದ್ಯ ವಹಿವಾಟು ನಡೆದಿದೆ. 131 ಕೋಟಿ ರೂ. ಮೌಲ್ಯದ 2.96 ಲಕ್ಷ ಬಾಕ್ಸ್ ಐಎಂಎಲ್ ಲಿಕ್ಕರ್ ಹಾಗೂ 16 ಕೋಟಿ ರೂ. ಮೊತ್ತದ 93 ಸಾವಿರ ಬಿಯರ್ ಬಾಕ್ಸ್ ಮಾರಾಟವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
PHOTOS: ಕರೊನಾ ವೈರಸ್ ಇದ್ರೆ ಕೂಡ್ಲೇ ತಿಳಿಸುತ್ತಂತೆ ಈ ಸ್ಮೆಲ್ ಕ್ಯಾಮೆರಾ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
