ಬೆಂಗಳೂರು:ಶಿವಮೊಗ್ಗ ನಗರ-ಚೆನ್ನೈ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುವ ಎಕ್ಸ್​ಪ್ರೆಸ್ ರೈಲು ಸೇವೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಹಸಿರು ನಿಶಾನೆ ತೋರಿದರು. ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಮುಖ್ಯಸ್ಥರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಪರೆನ್ಸ್ ಮೂಲಕ ಸಿಎಂ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದರು.
ಈ ವೇಳೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಸಿ. ಅಂಗಡಿ, ಸಂಸದ ಬಿ.ವೈ. ರಾಘವೇಂದ್ರ ಇನ್ನಿತರರಿದ್ದರು. ನೂತನ ರೈಲು ಶಿವಮೊಗ್ಗದಿಂದ ಪ್ರತಿ ಸೋಮವಾರ ಮತ್ತು ಶುಕ್ರವಾರ ರಾತ್ರಿ 11.55ಕ್ಕೆ ತೆರಳಲಿದ್ದು, ಮಂಗಳವಾರ ಮತ್ತು ಶನಿವಾರ ಬೆಳಗ್ಗೆ 11.45ಕ್ಕೆ ಚೆನ್ನೈ ತಲುಪಲಿದೆ. ಇದೇ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿರುವ ರೈಲು ಪ್ರದರ್ಶನಾ ಜಾಲ, ನಿರೀಕ್ಷಣಾ ಲಾಂಜ್, ಪಲ್ಟ್ ಆಕ್ಟವ್ ಸ್ಟೇಷನ್ ಕಿಯೋಸ್ಕ್, ಸ್ನಾ್ಯಕ್ ಫೀಸ್ಟ್ ಕಿಯೋಸ್ಕ್​ಗಳನ್ನು ಲೋಕಾರ್ಪಣೆ ಮಾಡಲಾಯಿತು.
ರೈಲ್ವೆ ಜಂಕ್ಷನ್ ಮಾಡಿ
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶಿವಮೊಗ್ಗದಲ್ಲಿ ರೈಲ್ವೆ ಜಂಕ್ಷನ್ ಮಾಡಲು ರೈಲ್ವೆ ಇಲಾಖೆ ಮುಂದಾಗಬೇಕು. ಅದಕ್ಕೆ ಪೂರಕವಾಗಿ ಈಗಾಗಲೆ ಶಿವಮೊಗ್ಗದಿಂದ ರಾಣೆಬೆನ್ನೂರು, ಮಂಗಳೂರಿಗೆ ರೈಲು ಸಂಚಾರ ಆರಂಭವಾಗಿದೆ. ಜಂಕ್ಷನ್ ನಿರ್ವಣಕ್ಕೆ ಜಾಗ ಖರೀದಿ ಮಾಡಿ ಯೋಜನೆ ಅನುಷ್ಠಾನಕ್ಕೆ ತರಬೇಕು. ಅಲ್ಲದೆ, ಬೆಂಗಳೂರಿನಿಂದ ಬೀರೂರಿನವರೆಗೆ ಮಾಡಲಾಗಿರುವ ದ್ವಿಪಥವನ್ನು ಶಿವಮೊಗ್ಗವರೆಗೆ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಉಪನಗರ ರೈಲು ಯೋಜನೆ ಜಾರಿ ಕುರಿತು ಘೋಷಿಸಲಾಗಿದೆ. ಅದರ ಜಾರಿಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ನೀಡುವುದು ಬಾಕಿಯಿದ್ದು, ಶೀಘ್ರದಲ್ಲ ಒಪ್ಪಿಗೆ ನೀಡಲಾಗುವುದು. ರಾಜ್ಯ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನ ನಿಗದಿ ಮಾಡಿದರೆ, ಯೋಜನೆ ಅನುಷ್ಠಾನ ಸಾಧ್ಯ.
| ಸುರೇಶ್ ಅಂಗಡಿ ಕೇಂದ್ರ ಸಚಿವ
ಶಿವಮೊಗ್ಗ-ಚೆನ್ನೈ ನಡುವೆ ರೈಲು ಸಂಚರಿಸಬೇಕು ಎಂಬುದು ಜನರ ಬೇಡಿಕೆಯಾಗಿತ್ತು. ರೈಲು ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಇಲಾಖೆಗೆ ಅಗತ್ಯ ನೆರವನ್ನು ನೀಡಲಾಗುತ್ತದೆ.
| ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
