ಬೆಳಗಾವಿ:ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿದ ಗೃಹಜ್ಯೋತಿ ಯೋಜನೆಯ ಪರಿಣಾಮವಾಗಿ, ರಾಜ್ಯದಲ್ಲಿ ತಲಾವಾರು ವಿದ್ಯುತ್ ಬಳಕೆ ಸೂಚಿ ಬದಲಾವಣೆ ಯಾಗಿದೆ. ವಾರ್ಷಿಕ ಸರಾಸರಿ ಬಳಕೆ ಗ್ರಾಹಕ ಸೂಚಿಯನ್ನು ಕೇಂದ್ರೀಯ ವಿದ್ಯುತ್ ಪ್ರಾಧಿಕಾರವು ಆರ್ಥಿಕ ವರ್ಷಾಂತ್ಯಕ್ಕೆ ಪರಿಷ್ಕರಿಸಬಹುದು.
ಕೇವಲ ಮೂರು ತಿಂಗಳಲ್ಲಿ ಒಟ್ಟು 2,126 ಕೋಟಿ ರೂಪಾಯಿಯನ್ನು ಸರ್ಕಾರ ಸರಬರಾಜು ಕಂಪನಿಗಳಿಗೆ ಹಂತ ಹಂತವಾಗಿ ಪಾವತಿಸಲಿದೆ. ರಾಜ್ಯದಲ್ಲಿ ಪ್ರತಿ ಕುಟುಂಬದ ವಾರ್ಷಿಕ ಬಳಕೆ 53.54 ದಶಲಕ್ಷ ಯೂನಿಟ್​ಗಳೆಂದು ಅಂದಾಜಿಸಲಾಗಿದೆ. 200 ಯೂನಿಟ್ ದಾಟಿದವರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಮುಂದಿನ ವರ್ಷಕ್ಕೆ ಅರ್ಹತೆ ವ್ಯಾಪ್ತಿಗೆ ಬರಲು ಅನೇಕ ಮಧ್ಯಮವರ್ಗಗಳು ಪ್ರಯತ್ನಿಸುತ್ತಿವೆ. ಕೆಳ ಮಧ್ಯಮ ವರ್ಗವು ಅಲ್ಪ ಮೊತ್ತದ ಬಿಲ್ ಹೊರೆಯಾಗದು ಎಂದು ಸ್ವಲ್ಪ ಹೆಚ್ಚು ಬಳಸಲಾರಂಭಿಸಿದ್ದರೆ, ಬಡವರು ಶೂನ್ಯ ಬಿಲ್​ಗೆ ಅಧಿಕ ಪ್ರಾಶಸ್ಱ ನೀಡಿರುವುದು ಮಾಪಕ ರೀಡಿಂಗ್ ಅಂಕಿ-ಅಂಶಗಳ ವ್ಯತ್ಯಾಸದಿಂದ ಗೊತ್ತಾ ಗುತ್ತದೆ ಎಂದು ಎಸ್ಕಾಂ ಮೂಲಗಳು ವಿಶ್ಲೇಷಿಸಿವೆ.
ಖರೀದಿ ಹೊರೆ:ಗೃಹಜ್ಯೋತಿ ಜಾರಿಗೊಳಿಸಿ ಗ್ರಾಹಕರನ್ನು ಸಂತುಷ್ಟಗೊಳಿಸಿದ ಸರ್ಕಾರ, ನುಡಿದಂತೆ ನಡೆದಿದ್ದೇವೆ ಎಂದು ಬೀಗಿತು. ಆದರೆ ಬರಗಾಲ ವಿದ್ಯುತ್ ಬೇಡಿಕೆಯ ಹೆಚ್ಚಳದ ಬರೆಯಿಟ್ಟಿತು. ಮುನ್ನೋಟದ ನಿರ್ವಹಣೆಯ ವೈಫಲ್ಯದಿಂದ ಉತ್ಪಾದನೆ ಕುಸಿದು ಖರೀದಿ ಅನಿವಾರ್ಯವಾಗಿದ್ದು, ಮುಂದಿನ ಮಳೆಗಾಲ ತನಕ ವಿದ್ಯುತ್, ಕಲ್ಲಿದ್ದಲು ಖರೀದಿಸುವ ಹೆಚ್ಚುವರಿ ಹೊರೆ ಹೊರಲೇಬೇಕಾಗಿದೆ. ವಿದ್ಯುತ್ ಬವಣೆ ತಟ್ಟಬಾರದು. ಖರೀದಿಯ ಹೊರೆ ಬೀಳಬಾರದೆಂಬ ಲೆಕ್ಕಾಚಾರದ ನಡೆಯಿಟ್ಟು, ಹೆಚ್ಚುವರಿ ವಿದ್ಯುತ್ ಲಭ್ಯವಿರುವ ರಾಜ್ಯಗಳೊಂದಿಗೆ ಮುಂದಿನ ಜೂನ್​ಗೆ ಹಣ ಕೊಡುವುದಾಗಿ ತಿಳಿಸಿ ವಿನಿಮಯ ಮಾಡಿಕೊಂಡಿದ್ದು, ಈ ಪ್ರಸ್ತಾವನೆಯನ್ನು ಉತ್ತರಪ್ರದೇಶ ಹಾಗೂ ಪಂಜಾಬ್ ಒಪ್ಪಿಕೊಂಡಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 8 =
Remember me
