
ಬೆಂಗಳೂರು:ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿಂದ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ದರದಲ್ಲಿ ಸೋಪು, ರವೆ, ಸಕ್ಕರೆ, ಅಡುಗೆ ಎಣ್ಣೆ ಹಾಗೂ ಉಪ್ಪು ಸೇರಿ ಇನ್ನಿತರ ದಿನಸಿ ಪದಾರ್ಥಗಳು ಸಿಗಲಿವೆ. ಆದರೆ, ಯಾವುದೇ ಕಾರಣಕ್ಕೂ ಮಾಲೀಕರು ದಿನಸಿ ಪದಾರ್ಥಗಳನ್ನು ಖರೀದಿಸುವಂತೆ ಕಾರ್ಡ್‌ದಾರರ ಮೇಲೆ ಒತ್ತಡ ಹಾಕುವಂತಿಲ್ಲ. ಒಂದು ವೇಳೆ ಒತ್ತಡ ಹಾಕಿದರೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ನರೇಗಾ ಕೆಲಸದ ದಿನ 100ರಿಂದ 150ಕ್ಕೆ ಹೆಚ್ಚಳ; 15 ದಿನಗಳೊಳಗೆ ವರದಿ ಸಲ್ಲಿಕೆ
ಬಜೆಟ್ ಮಂಡನೆ ಬಳಿಕ ಪಡಿತರ ಜತೆಗೆ ಎಂಆರ್‌ಪಿ ದರದಲ್ಲಿ ಮೈಸೂರು ಸ್ಯಾಂಡಲ್ ಸೋಪು, ಅಡುಗೆ ಎಣ್ಣೆ ಹಾಗೂ ಉಪ್ಪು ಮಾರಾಟಕ್ಕೆ ಈಗಾಗಲೇ ಸರ್ಕಾರ ಅವಕಾಶ ಕಲ್ಪಿಸಿದೆ. ಹಾಗಾಗಿ, ನಾವೇ ಬಂಡವಾಳ ಹಾಕಿ ದಿನಸಿ ಪದಾರ್ಥಗಳನ್ನು ಖರೀದಿಸಿ ಎಂಆರ್‌ಪಿ ದರದಲ್ಲಿ ಅಂಗಡಿಗಳಲ್ಲಿ ಮಾರಾಟ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ:ವಿಮಾನಕ್ಕೇ ಕಾಂಪಿಟೇಶನ್​ ಕೊಡುತ್ತೆ ಈ ರೈಲು! ಒಂದೇ ಗಂಟೆಯಲ್ಲಿ 620 ಕಿಮೀ ಪ್ರಯಾಣ
ರಾಜ್ಯದಲ್ಲಿ 19,906 ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದೇವೆ. ಸರ್ಕಾರದ ವತಿಯಿಂದ ದಿನಸಿ ಪದಾರ್ಥಗಳ ನೀಡಿದರೆ ಅವುಗಳನ್ನೂ ಸಹ ಮಾರಾಟ ಮಾಡಲಾಗುವುದು. ಆದರೆ, ನಿಗದಿತ ಸಮಯದಲ್ಲಿ ಸರ್ಕಾರ ಕಮಿಷನ್ ಹಣ ನೀಡದಿರುವ ಹಿನ್ನೆಲೆಯಲ್ಲಿ ಮಾರಾಟದಿಂದ ಬಂದಿರುವ ಹಣದಲ್ಲಿ ಕಮಿಷನ್ ಕಡಿತ ಮಾಡಿಕೊಂಡು ಉಳಿದ ಹಣವನ್ನು ಸರ್ಕಾರಕ್ಕೆ ಜಮೆ ಮಾಡಲಾಗುವುದು. ಉಚಿತವಾಗಿ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಗೆ ಕನಿಷ್ಠ ದರ ನಿಗದಿಗೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
