ಬೆಂಗಳೂರು:ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬಳಿಗೆ ಆಯುಷ್ ಹಾಗೂ ದಂತ ವೈದ್ಯರೇ ದಂಡೇ ತೆರಳಿದೆ. ಸಂಕಷ್ಟದ ಸಮಯದಲ್ಲಿ ನೆರವಾಗಿದ್ದ ನಮಗೇ ಈಗ ಸಂಕಟ ಎದುರಾಗಿದೆ ಎಂಬುದಾಗಿ ಈ ವೈದ್ಯರು ಮಾಜಿ ಸಿಎಂ ಬಳಿ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ.
ಕೋವಿಡ್​-19 ಸಮಯದಲ್ಲಿ ನಮ್ಮನ್ನು ಬಳಸಿಕೊಂಡು ಈಗ ಸೇವೆಯಿಂದ ಮುಕ್ತಗೊಳಿಸುತ್ತಿದ್ದಾರೆ ಎಂಬ ನೋವನ್ನು ಈ ವೈದ್ಯರು ತೋಡಿಕೊಂಡಿದ್ದಾರೆ. ಅದಕ್ಕೆ ಸ್ಪಂದಿಸಿರುವ ಮಾಜಿ ಸಿಎಂ, ಆಗತ್ಯ ಇದ್ದಾಗ ಕೆಲಸ ಮಾಡಿಸಿಕೊಂಡು, ಅಗತ್ಯ ಇಲ್ಲದಿದ್ದಾಗ ಮನೆಗೆ ಹೋಗಿ ಎನ್ನುವುದು ಯಾವ ನ್ಯಾಯ? ಎಂದು ಸರ್ಕಾರಕ್ಕೆ ಪ್ರಶ್ನೆ ಎಸೆದಿದ್ದಾರೆ.
ಕೋವಿಡ್ 1, 2 ಮತ್ತು 3ನೇ ಅಲೆಯ ತುರ್ತು ಸಂದರ್ಭದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಯುಷ್, ದಂತ ವೈದ್ಯರನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿತ್ತು. ಎರಡು ವರ್ಷ ರಾಜ್ಯಕ್ಕೆ ಕಷ್ಟವಿದ್ದಾಗ ಇವರ ಸೇವೆ ಪಡೆದು, ಈಗ ಎಕಾಏಕಿ ಬೇಡ ಎನ್ನುವುದು ಸರಿಯಲ್ಲ. ಆದಷ್ಟೂ ಇವರ ಸೇವೆಯನ್ನು ಮುಂದುವರಿಸಬೇಕು ಹಾಗೂ ಬಿಬಿಎಂಪಿ ವತಿಯಿಂದ ಬೆಂಗಳೂರಿನ ಎಲ್ಲ ವಾರ್ಡುಗಳಲ್ಲಿ ತೆರೆಯಲಿರುವ ‘ನಮ್ಮ ಕ್ಲಿನಿಕ್​’ಗಳಿಗೆ ಇವರನ್ನು ನಿಯೋಜಿಸಿದರೆ ಉತ್ಸಾಹಿಗಳಾದ ಇವರಿಂದ ಉತಮ್ಮ ಆರೋಗ್ಯ ಸೇವೆ ಲಭಿಸಲಿದೆ. ಅಲ್ಲದೆ 2 ವರ್ಷಗಳ ತುರ್ತು ಸಂದರ್ಭದಲ್ಲಿ ಕೆಲಸ ಮಾಡಿದ ಅನುಭವ ಕೂಡ ಇವರಿಗಿದ್ದು, ಇವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದ್ದಾರೆ.
ಭಗ್ನ ಪ್ರೇಯಸಿ ಉಪನ್ಯಾಸಕಿ; ಪ್ರಿಯಕರನ ಮದುವೆ ದಿನವೇ ಆತ್ಮಹತ್ಯೆ!

ಅಂತಿಮ ದಿನದಂದು ರಕ್ತದೋಕುಳಿ; ಹೋಳಿಯಾಟದ ವೇಳೆ ಚೂರಿ ಇರಿತ, ಕಣ್ಣಿಗೂ ಚುಚ್ಚಿದ್ರು ಚಾಕು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
