ಕಲಬುರಗಿ:ಸೋಂಕಿತ ವ್ಯಕ್ತಿಯ ಸಂಪರ್ಕವಿಲ್ಲದಿದ್ದರೂ ಎರಡು ವರ್ಷದ ಮಗುವಿಗೆ ಕರೊನಾ ಸೋಂಕು ತಗುಲಿರುವುದು ಜಿಲ್ಲೆಯ ವಾಡಿಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಕುಟುಂಬದವರನ್ನು ದಿಕ್ಕು ತೋಚದಂತೆ ಮಾಡಿದೆ.
ಎಂಟು ತಿಂಗಳ ಹಿಂದೆ ವ್ಯಕ್ತಿಯೊಬ್ಬ ದುಡಿಯಲೆಂದು ಪತ್ನಿ ಮತ್ತು ಇಬ್ಬರು ಮಕ್ಕಳ ಜತೆಗೆ ಪಟ್ಟಣಕ್ಕೆ ಬಂದು ಪಿಲಕಮ್ಮ ದೇವಿ ದೇವಸ್ಥಾನ ಬಳಿ ಮನೆ ಮಾಡಿಕೊಂಡಿದ್ದ. ಈತ ತನ್ನ 3 ಮಕ್ಕಳ ಪೈಕಿ ಮಗಳೊಬ್ಬಳನ್ನು ಉತ್ತರಪ್ರದೇಶದಲ್ಲಿರುವ ಅಜ್ಜ-ಅಜ್ಜಿ ಬಳಿ ಬಿಟ್ಟಿದ್ದ. ಇಲ್ಲಿನ ರೈಲು ನಿಲ್ದಾಣದಲ್ಲಿ ಮಕ್ಕಳ ಆಟಿಕೆ, ವಿಸಿಟಿಂಗ್ ಕಾರ್ಡ್, ಕವರ್ ಮತ್ತು ಪ್ಯಾಕೇಟ್​ಗಳನ್ನು ಮಾರುತ್ತ ಜೀವನ ಸಾಗಿಸುತ್ತಿದ್ದ. ಕರೊನಾ ವೈರಸ್ ಎಲ್ಲೆಡೆ ಹರಡುತ್ತಲೇ ಜಿಲ್ಲೆಯನ್ನು ಲಾಕ್​ಡೌನ್ ಮಾಡಿದ ನಂತರ ಈತನ ವ್ಯವಹಾರ ನಿಂತು ಹೋಗಿದೆ. ಕಷ್ಟದಿಂದ ಹೇಗೋ ಪತ್ನಿ ಮತ್ತು ಮಕ್ಕಳಿಬ್ಬರ ಜತೆ ಜೀವನ ಸಾಗಿಸುತ್ತಿದ್ದ.
ಈ ಮಧ್ಯೆ 2 ವರ್ಷದ ಪುತ್ರ ಐದು ದಿನಗಳ ಹಿಂದೆ ಮನೆ ಪಾವಟಿ(ಮೆಟ್ಟಿಲು)ಗೆ ಮೇಲಿಂದ ಬಿದ್ದಿದ್ದರಿಂದ ಬಲಗಾಲು ಮುರಿದಿತ್ತು. ಕಲಬುರಗಿ ಜಿಮ್್ಸ ಆಸ್ಪತ್ರೆಯಲ್ಲಿ ಪ್ಲಾಸ್ಟರ್ ಮಾಡಿದ ಬಳಿಕ ಎರಡು ದಿನದ ಹಿಂದೆ ಮಗುವನ್ನು ಮನೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ವೇಳೆ ರಕ್ತ ಮತ್ತಿತರ ಪರೀಕ್ಷೆ ನಡೆಸಿದ್ದು, ಇದೀಗ ಬಂದ ವರದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಮಗು ಮತ್ತು ಆತನೊಂದಿಗೆ ನೇರ ಸಂಪರ್ಕದಲ್ಲಿರುವ ತಂದೆ-ತಾಯಿ ಹಾಗೂ ಸಹೋದರಿಯನ್ನು ಇಎಸ್​ಐ ಆಸ್ಪತ್ರೆ ಐಸೋಲೇಷನ್ ವಾರ್ಡ್​ಗೆ ದಾಖಲಿಸಲಾಗಿದೆ. ಸದ್ಯದ ವರದಿ ಪ್ರಕಾರ ಈ ಮಗುವಿಗೆ ಯಾವುದೇ ರೀತಿಯ ಟ್ರಾವೆಲ್ ಹಿಸ್ಟರಿ ಇಲ್ಲ. ಮಗು ವಾಸವಿದ್ದ ಪ್ರದೇಶಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಇಎಸ್​ಐ ವಾರ್ಡ್​ನಲ್ಲಿ ಮಗು ಏಕಾಂಗಿ:ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಾಡಿ ಪಟ್ಟಣದ 2 ವರ್ಷದ ಗಂಡು ಮಗುವನ್ನು ಇಎಸ್​ಐ ಐಸೋಲೇಷನ್ ವಾರ್ಡ್​ಗೆ ದಾಖಲಿಸಲಾಗಿದೆ. ಸೋಂಕಿತರ ಸುತ್ತಮುತ್ತ ಯಾರೂ ಇರಬಾರದೆಂಬ ಹಿನ್ನೆಲೆಯಲ್ಲಿ ಮಗು ಏಕಾಂಗಿ ಆಗಿರಬೇಕಾದ ಅನಿವಾರ್ಯತೆ ಬಂದೊದಗಿದೆ. 13ಕ್ಕೆ ಏರಿದ ಪ್ರಕರಣ
ಲಾಕ್​ಡೌನ್​ನಲ್ಲೂ ಮೋಜು-ಮಸ್ತಿ:ಕರೊನಾ ವೈರಾಣು ಸೋಂಕು ಹರಡುವಿಕೆ ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಘೊಷಿಸಲಾಗಿದ್ದು, ಎಲ್ಲರೂ ಚಟá-ವಟಿಕೆ ಸ್ಥಗಿತಗೊಳಿಸಿದ್ದಾರೆ. ಆದರೆ ಇದನ್ನು ಲೆಕ್ಕಿಸದೆ ಪ್ಯಾಡಿಂಗ್​ಟನ್ ರೆಸಾರ್ಟ್​ನಲ್ಲಿ ಕೆಲವರು ಮೋಜು ಮಸ್ತಿಯಲ್ಲಿ ತೊಡಗಿರá-ವುದು ತೀವ್ರ ಟೀಕೆಗೆ ತುತ್ತಾಗಿದೆ.
ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮದಲ್ಲಿರುವ ರೆಸಾರ್ಟ್​ನಲ್ಲಿ ಬೆಂಗಳೂರಿನಿಂದ ಬಂದಿರುವ ಪ್ರವಾಸಿಗರು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಪ್ರವಾಸಿಗರು ಜೀಪು, ಸೈಕಲ್​ನಲ್ಲಿ ಸುತ್ತಾಡುವುದನ್ನು ಸ್ಥಳೀಯರು ಮೊಬೈಲ್​ಫೋನ್​ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ತೋಟದ ಕೆಲಸಕ್ಕೆ, ಅಗತ್ಯ ವಸ್ತು ಖರೀದಿಗೆ ತೆರಳುವ ನಮ್ಮ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ. ಆದರೆ, ರೆಸಾರ್ಟ್​ನಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿರುವವರನ್ನು ಏನೂ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕರೊನಾ ಭೀತಿ ನಡುವೆ ದೊಡ್ಡವರ ಅಟ್ಟಹಾಸ ಮುಂದುವರಿದಿದೆ.
ಮೂರು ದಿನಗಳಿಂದಲೂ ಮೋಜಿನ ಅಬ್ಬರ ನಡೆಯುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ವ್ಯಕ್ತಿಗಳಿಂದ ಕಾನೂನು ಉಲ್ಲಂಘನೆ ನಡೆದಿದೆ. ದಿನವಿಡೀ ಬೈಸಿಕಲ್​ನಲ್ಲಿ ಸಂಚರಿಸುತ್ತಿದ್ದರು, ಚಿಕ್ಲಿ ಹೊಳೆಗೆ ವಿಹಾರಕ್ಕೆ ತೆರಳಿದ್ದರು. ಪೊಲೀಸರಿಗೆ ಮಾಹಿತಿ ಇದ್ದರೂ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಳಿದರೆ ನಾವು ಸ್ಥಳೀಯರು ಎಂದು ಸುಳ್ಳು ಹೇಳá-ತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಲಾಕ್​ಡೌನ್ ನಡುವೆ ಪ್ಯಾಡಿಂಗ್​ಟನ್ ರೆಸಾರ್ಟ್​ನಲ್ಲಿ ಪ್ರವಾಸಿಗರ ವಾಸ್ತವ್ಯದ ವಿಚಾರ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪು ಕಂಡá-ಬಂದರೆ ಪ್ರಕರಣ ದಾಖಲಿಸಲಾಗುವುದು ಮತ್ತು ವ್ಯಾಪಾರ ಪರವಾನಗಿ ರದ್ದು ಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು.| ಅನೀಸ್ ಕಣ್ಮಣಿ ಜಾಯ್ ಜಿಲ್ಲಾಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − three =
Remember me
