ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಮಹಾರಾಷ್ಟ್ರ ಹೊರತುಪಡಿಸಿದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ 2023ರ ಆಗಸ್ಟ್ ನಲ್ಲಿ 1,59,069 ಕೋಟಿ ರೂ. ಜಿಎಸ್ಟಿ ಗ್ರಹಿಸಲಾಗಿದೆ. ಇದು ವರ್ಷಕ್ಕೆ ಪರಿಗಣಿಸುವಾಗ ಶೇ.11 ಬೆಳವಣಿಗೆ ಕಾಣಿಸಿದೆ. ಇದೇ ವೇಳೆ ಕರ್ನಾಟಕ ಆಗಸ್ಟ್​ನಲ್ಲಿ 11,116 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಿದೆ.
ಮಹಾರಾಷ್ಟ್ರ ಆರಂಭದಿಂದಲೂ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ನಂತರ ಸ್ಥಾನದಲ್ಲಿ ಕರ್ನಾಟಕವಿದೆ. ಈ ಮುನ್ನ ಗುಜರಾತ್ ಎರಡನೇ ಸ್ಥಾನದಲ್ಲಿತ್ತು. ಜುಲೈ ತಿಂಗಳಿನಲ್ಲಿ ದೇಶದ ಒಟ್ಟು ಜಿಎಸ್ಟಿ ಸಂಗ್ರಹ 1,23,026 ಕೋಟಿ ರೂ. ಆಗಿದ್ದು, 2022ರ ಜುಲೈ ತಿಂಗಳಿಗೆ ಹೋಲಿಸಿದರೆ 16 ಸಾವಿರ ಕೋಟಿ ರೂ. ಹೆಚ್ಚಾಗಿತ್ತು.
2023ರ ಜುಲೈನಲ್ಲಿ ಕರ್ನಾಟಕದ ಜಿಎಸ್ಟಿ ಸಂಗ್ರಹ 11,505 ಕೋಟಿ ರೂ.ಗಳಾಗಿದ್ದರೆ, ಮಹಾರಾಷ್ಟ್ರದ್ದು 26,064 ಕೋಟಿ ರೂ.ಗಳಾಗಿತ್ತು. 2023ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ಜಿಎಸ್ಟಿ ಸಂಗ್ರಹ ಗಮನಿಸುವುದಾದರೆ ಮಾರ್ಚ್‌ನಲ್ಲಿ ಏಪ್ರಿಲ್‌ನಲ್ಲಿ 14,593 ಕೋಟಿ ರೂ., ಮೇನಲ್ಲಿ 10,317 ಕೋಟಿ ರೂ., ಜೂನ್‌ನಲ್ಲಿ 11,193 ಕೋಟಿ ರೂ., ಜುಲೈನಲ್ಲಿ 11,505 ಕೋಟಿ ರೂ. ಸೇರಿ ನಾಲ್ಕು ತಿಂಗಳಲ್ಲಿ 47,608 ಕೋಟಿ ರೂ. ಸಂಗ್ರಹವಾಗಿತ್ತು. ಆಗಸ್ಟ್​ನಲ್ಲಿ 11,116 ಕೋಟಿ ಸಂಗ್ರಹವಾಗುವ ಮೂಲಕ ಅರ್ಧ ಶತಕದ ಗಡಿ ದಾಟಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 5 =
Remember me
