ಬೆಂಗಳೂರು:ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ಚರ್ಚಾವಸ್ತುವಾಗಿದೆ. ಖುದ್ದು ಸಿದ್ದರಾಮಯ್ಯ ಅವರೇ ಬಾದಾಮಿಯಿಂದ ಸ್ಪರ್ಧಿಸುವುದಾಗಿ ಹೇಳಿದರೂ ಈ ವಿಷಯಕ್ಕೆ ನಾನಾ ರೆಕ್ಕೆಪುಕ್ಕಗಳು ಬಂದಿವೆ.
ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧಿಸುವ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಜಿ.ಟಿ.ದೇವೇಗೌಡ, ಯಾರು ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂದು ಈಗಲೇ ಹೇಳಲು ಆಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧಿಸ್ತಾರೆ ಅಂತಾ ಯಾರಿಗೆ ಗೊತ್ತಿತ್ತು? ಎಂದು ಪ್ರತಿಕ್ರಿಯಿಸಿದರಲ್ಲದೆ, ಕೆಲವು ಸ್ವಾರಸ್ಯಕರ ಸಂಗತಿಗಳನ್ನೂ ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ಚಾಮರಾಜಪೇಟೆಗೆ ಬಂದಾಗ ಚಾಮರಾಜಪೇಟೆ ಅಳಿಯ, ಮೈಸೂರಿಗೆ ಬಂದಾಗ ಮೈಸೂರು ಮಗ ಎನ್ನುತ್ತಾರೆ. ಜಮೀರ್ ಅಹಮ್ಮದ್ ಅಭಿಮಾನದಿಂದ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ನಾನು ಕೂಡ ಸಿದ್ದರಾಮಯ್ಯ ಜತೆ ಚಾಮರಾಜಪೇಟೆಯ ಅವರ ಮಾವನ ಮನೆಗೆ ಹೋಗುತ್ತಿದ್ದೆ. ಅವರ ಮಾವ ಎಂಜಿನಿಯರ್ ಆಗಿದ್ದರು. ಯಾವಾಗಲೂ ಅವರ ಮನೆಯಲ್ಲಿ ನಾನ್ ವೆಜ್ ಮಾಡುತ್ತಿದ್ದರು. ಬೆಳಗ್ಗೆ ಇಡ್ಲಿ, ರುಚಿಯಾದ ಬೋಟಿ ಮಾಡುತ್ತಿದ್ದರು ಎಂದು ಸಿದ್ದು ಮಾವನ ಮನೆಯ ಭೇಟಿ ಬಗ್ಗೆ ಜಿಟಿಡಿ ಮೆಲುಕು ಹಾಕಿದರು.
ಆ ರೀತಿ ಮಾತನಾಡಬಾರದಿತ್ತು:ಸಂಸದೆ ಸುಮಲತಾ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತ ಪ್ರಶ್ನೆಗೆ, ಕುಮಾರಸ್ವಾಮಿ ಸಂಸದರ ಬಗ್ಗೆ ಆ ರೀತಿಯ ಹೇಳಿಕೆ ಕೊಡಬಾರದಾಗಿತ್ತು. ಎಂಥ ಕಠಿಣ ಸಂದರ್ಭ ಬಂದರೂ ಕುಮಾರಸ್ವಾಮಿ ಎದುರಿಸಿದ್ದಾರೆ. ಒಳ್ಳೆಯದು ಮಾಡುವಾಗಲೂ ಅಪವಾದ ಬರಲಿದೆ. ಆದರೂ ಹೇಳಿಕೆ ನೀಡಬಾರದಾಗಿತ್ತು. ಸಂಸದರು ಕೂಡ ಜಲಾಶಯದ ಬಿರುಕಿನ ಬಗ್ಗೆ ಹೇಳಿಕೆ ನೀಡಬಾರದಾಗಿತ್ತು. ಮಾಹಿತಿ ಕೊರತೆಯಿಂದ ಆ ಹೇಳಿಕೆ ಕೊಟ್ಟಿದ್ದಾರೆ. ಪ್ರತಿಯೊಂದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡಿದ್ದಾರೆ. ಅದಾದ ಬಳಿಕ ಕುಮಾರಸ್ವಾಮಿ ಏನನ್ನೂ ಮಾತನ್ನಾಡಿರಲಿಲ್ಲ. ಈಗ ಯಾಕೆ ಮಾತನ್ನಾಡಿದರೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
‘ಇದು ಯಾವ ರೀತಿಯ ಅಚ್ಛೇ ದಿನ್ ಸ್ವಾಮಿ?’ ರಾಹುಲ್ ಗಾಂಧಿ ಪ್ರಶ್ನೆ

‘ಕೋವಿಶೀಲ್ಡ್ ಪಡೆದ ನಂತರ ದೃಷ್ಟಿ ಬಂತು’ ಮಹಾರಾಷ್ಟ್ರದಲ್ಲೊಂದು ವಿಚಿತ್ರ ಘಟನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × five =
Remember me
