ಮೈಸೂರು:ಜೆಡಿಎಸ್​ಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಗಿಂತಲೂ ಮೈಸೂರಿನಲ್ಲಿ ದೊಡ್ಡ ಹೈಕಮಾಂಡ್ ಇದೆ‌ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡುವ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಕುಮಾರಸ್ವಾಮಿ ಮಾತ್ರ ಉಚ್ಛಾಟನೆ ಪದ ಬಳಸಿಲ್ಲ. ಮೈಸೂರಿನ ಹೈಕಮಾಂಡ್ ಕೂಡ ಮೈಸೂರಿನಿಂದಲೇ ಉಚ್ಛಾಟನೆ ಪ್ರಕ್ರಿಯೆ ಶುರುವಾಗುತ್ತೆ ಅಂತ ಹೇಳಿದ್ದಾರೆ‌. ಕುಮಾರಸ್ವಾಮಿಗಿಂತಲೂ ಮೈಸೂರಿನಲ್ಲಿ ದೊಡ್ಡ ಹೈಕಮಾಂಡ್ ಇದೆ ಎಂದು ಶಾಸಕ ಸಾ.ರಾ.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿರಿನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ
ನಾನು ಯಾವುದೇ ಹಂತದಲ್ಲೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮೈಸೂರಿನಲ್ಲಿ ಕೆಲವರು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್‌ನಿಂದ ವೀಕ್ ಕ್ಯಾಂಡೇಟ್ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಬೇರೆ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಒಂದು ವೇಳೆ ಉಚ್ಛಾಟನೆ ಮಾಡುವುದಾದರೆ ಅವರನ್ನು ಮಾಡಬೇಕು ಎಂದು ಮಾತಿನಲ್ಲೇ ತಿವಿದರು.
ದೇವೇಗೌಡರಿಗೆ ಎಲ್ಲವೂ ಗೊತ್ತು. ಪ್ರತಿಯೊಬ್ಬ ಶಾಸಕ, ನಾಯಕರೂ ಏನೇನು ಮಾಡುತ್ತಿದ್ದಾರೆ ಅನ್ನುವುದರ ಇಂಚಿಂಚೂ ಮಾಹಿತಿ ಅವರಿಗೆ ಗೊತ್ತಿದೆ ಎಂದರು.
ನನ್ನನ್ನು ಯಾವ ನಾಯಕರೂ ಬೆಳೆಸಿಲ್ಲ… ಸಭೆಗೂ ಮುನ್ನವೇ ಸಿಡಿದೆದ್ದ ಜೆಡಿಎಸ್​ ರೆಬಲ್​ ಶಾಸಕ ಗುಬ್ಬಿ ಶ್ರೀನಿವಾಸ್!

ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 13 =
Remember me
