ಬೆಂಗಳೂರು:ಸಾರ್ವತ್ರಿಕ ಮೂಲ ಆದಾಯವೆಂಬ ದೊಡ್ಡ ಅರ್ಥ ಬಿಂಬಿಸಿ, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಜನರೊಂದಿಗೆ ಮೋಸದಾಟಕ್ಕೆ ಇಳಿದಿದೆ ಎಂದು ಬಿಜೆಪಿ ಬಲವಾಗಿ ಶಂಕಿಸಿದ್ದು, ಸಂಶಯ ವ್ಯಕ್ತಪಡಿಸಿದರೆ ರಾಜಕೀಯ ಸೋಂಕಿತವಾಗಬಹುದು. ಬಡವರ ಪರ ಯೋಜನೆಗಳನ್ನು ಪ್ರತಿಪಕ್ಷ ಸಹಿಸುತ್ತಿಲ್ಲವೆಂದು ಕಾಂಗ್ರೆಸ್ ಬಿಂಬಿಸಲಿದೆ ಎಂದು ಕಮಲಪಡೆ ಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಳಮಟ್ಟದಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೂತ್​ಮಟ್ಟದ ಸಮಿತಿಗಳು, ಪೇಜ್​ಪ್ರಮುಖರ ಕೈಗೆ ಕೆಲಸ ಕೊಟ್ಟಂತಾಗುತ್ತದೆ. ಕಾರ್ಯಕರ್ತರಲ್ಲಿ ಹುರುಪು ತುಂಬಿ, ಸಂಘಟನೆ ಬಲಪಡಿಸಲು ನೆರವಾಗುತ್ತದೆ ಎನ್ನುವುದು ಚಿಂತನೆಯ ತಿರುಳು.
ಬೆಳಗಾವಿ ಅಧಿವೇಶನದಲ್ಲಿ ಎರಡು ರೀತಿಯ ಹೋರಾಟ ಮಾಡಲು ಮುಂದಾಗಿದ್ದು, ಪೂರಕವಾಗಿ ಗ್ಯಾರಂಟಿಗಳ ಹುಳುಕು, ಅಭಿವೃದ್ಧಿ ಸ್ಥಗಿತದ ಅಡ್ಡ ಪರಿಣಾಮಗಳ ಮೇಲೆ ಬೆಳಕು ಚೆಲ್ಲುವ ಯೋಚನೆ ಪಕ್ಷದ ಹಿರಿಯ ನಾಯಕರದಾಗಿದೆ.
ಜನರ ಮುಂದೆ ಅಂಕಿ-ಅಂಶಗಳ ಮಂಡನೆ:ಬಿಜೆಪಿಯ ಹೊಸ ಸಾರಥಿಗಳಿಬ್ಬರು ಸದನದೊಳಗೆ ಸರ್ಕಾರವನ್ನು ತಿವಿಯಲು ಆಡಳಿತ, ಅಭಿವೃದ್ಧಿ ಹಾಗೂ ರಾಜಕೀಯ ಅಸ್ತ್ರಗಳನ್ನು ಜೋಡಿಸಿಕೊಳ್ಳುತ್ತಿದ್ದು, ತಮ್ಮದೇ ನೆಲೆಯಲ್ಲಿ ಪ್ರಯತ್ನಕ್ಕೆ ಕೈಹಾಕಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜತೆಗೆ ಔಪಚಾರಿಕ ಮಾತುಕತೆ ನಡೆಸಿದ್ದಾರೆ. ಸಂಘಟನಾಬಲವನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಮುಗಿಬೀಳಬೇಕು ಎನ್ನುವುದು ಬಿ.ವೈ.ವಿಜಯೇಂದ್ರ ಆಲೋಚನೆಯಾಗಿದ್ದು, ಕಾರ್ಯತಂತ್ರ ಹೆಣೆಯುತ್ತಿದ್ದಾರೆ.
ತಳಮಟ್ಟದ ಸಮೀಕ್ಷೆ, ಅಧ್ಯಯನ, ಫಲಾನುಭವಿಗಳಿಗೆ ಖುದ್ದು ಭೇಟಿಯಾಗಿ ರ್ಚಚಿಸುವ ಮೂಲಕ ಸಂಗ್ರಹಿಸಿದ ಮಾಹಿತಿ ಹಾಗೂ ಸರ್ಕಾರದ ವಿವರಗಳಿಗೆ ತಾಳೆಹಾಕಿ ನಿಖರ ಅಂಕಿ-ಅಂಶಗಳನ್ನು ಜನರ ಮುಂದಿಡಲು ಯೋಚಿಸಿದೆ. ಸರ್ಕಾರದ ವೈಫಲ್ಯವನ್ನು ಜನರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಂತರ ವಿವಿಧ ಹಂತದ ಹೋರಾಟಗಳ ಮೂಲಕ ಜನಾಭಿಪ್ರಾಯ ರೂಪಿಸುವುದು ಸುಲಭ ಸಾಧ್ಯ ಎಂದು ಪಕ್ಷ ಯೋಚಿಸಿದೆ.
ಸಂಶಯಕ್ಕೆ ಕಾರಣಗಳು:ಅನ್ನಭಾಗ್ಯ ಯೋಜನೆಯಡಿ ಕೇಂದ್ರದ ಅಕ್ಕಿಯನ್ನು ಮಾತ್ರ ವಿತರಿಸುತ್ತಿದ್ದು, ಹೆಚ್ಚುವರಿ 5ಕೆಜಿ ಅಕ್ಕಿ ಬದಲು ತಲಾ 170 ರೂ. ಜಮಾ ಮುಂದುವರಿಸಿದೆ. ಅಕ್ಕಿ ಕೊಟ್ಟರೆ ಮಾಸಿಕ ಹೆಚ್ಚುವರಿ 1,000 ಕೋಟಿ ರೂ. ಹೊರೆ ಬೀಳುತ್ತದೆ ಎಂದು ನಗದು ಪಾವತಿಗೆ ಜೋತುಬಿದ್ದಿದೆ. ಗೃಹಲಕ್ಷ್ಮಿ ಯೋಜನೆಯಡಿ ಬಡ ಕುಟುಂಬದ ಮನೆ ಯಜಮಾನಿಗೆ ಮಾಸಿಕ 2,000 ರೂ. ಭತ್ಯೆ ದೊಡ್ಡ ಖರ್ಚಿನ ಬಾಬ್ತು. ತಾಂತ್ರಿಕ ನೆಪವೊಡ್ಡಿ ಲಕ್ಷಾಂತರ ಫಲಾನುಭವಿಗಳಿಗೆ ತಲುಪಿಸದೆ ಸಾಧ್ಯವಾದಷ್ಟು ಹೊರೆ ತಗ್ಗಿಸಿಕೊಳ್ಳುತ್ತಿದೆ.
ಗೃಹಜ್ಯೋತಿ ಯೋಜನೆಯಡಿ ಬಹಳಷ್ಟು ಗ್ರಾಹಕರು ಒಂದಿಲ್ಲೊಂದು ತಿಂಗಳು ಶೂನ್ಯ ಇಲ್ಲವೇ ಕಡಿಮೆ ಮೊತ್ತದ ಬಿಲ್​ನಿಂದ ವಂಚಿತರಾಗುತ್ತಿದ್ದಾರೆ. ವಿದ್ಯುತ್ ಖರೀದಿ ವೆಚ್ಚ ಸರಿದೂಗಿಸಲು ಇಂಧನ ವೆಚ್ಚ ಹೊಂದಾಣಿಕೆ ಹೆಸರಿನಲ್ಲಿ ವಿದ್ಯುತ್ ದರ ಹೆಚ್ಚಿಸಿದೆ. ಹಿಂದಿನ ಸರ್ಕಾರ ಹೊಸ ಬಸ್ ಖರೀದಿಸಲಿಲ್ಲ, ಹುದ್ದೆಗಳನ್ನು ತುಂಬಿಲ್ಲವೆಂಬ ಕಾರಣ ನೀಡಿ 2,800ಕ್ಕೂ ಹೆಚ್ಚು ಶೆಡ್ಯೂಲ್​ಗಳನ್ನು ಕೈಬಿಟ್ಟಿದೆ. ಶಕ್ತಿ ಯೋಜನೆಯ ಹೆಚ್ಚುವರಿ ವೆಚ್ಚದ ಭಾರ ಇಳಿಸಿಕೊಳ್ಳುವ ತಂತ್ರವೆಂದು ಬಿಜೆಪಿ ಅನುಮಾನಿಸಿದೆ.
ಮೈಸೂರು:ನನಗೀಗ ಸದ್ಯ ರಾಜಕೀಯದ 20-20 ಮ್ಯಾಚ್ ಆಡುವ ಜವಾಬ್ದಾರಿಯನ್ನು ಪಕ್ಷ ವಹಿಸಿದೆ. ಆ ದೃಷ್ಟಿಯಲ್ಲಿ ಎಲ್ಲ ಕಡೆ ಹೋಗಿ ಪಕ್ಷವನ್ನು ಸಂಘಟಿಸುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ನಾನು ರಾಜಕೀಯ ಮಾತನಾಡಲ್ಲ, ನಾಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತೇನೆ ಎಂದರು.ಚಾಮುಂಡಿಬೆಟ್ಟಕ್ಕೆ ತೆರಳಿ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ವಿಜಯೇಂದ್ರ, ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀ ಅವಧೂತ ದತ್ತ ಪೀಠಕ್ಕೆ ತೆರಳಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿರಬಹುದು. ಬಿಜೆಪಿ ರಾಷ್ಟ್ರಿಯ ಪಕ್ಷ. ಎಲ್ಲರೂ ಅಭಿಪ್ರಾಯ ಹೇಳಲು ಸ್ವತಂತ್ರರಿದ್ದಾರೆ. ಅಂತೆಯೆ, ಎಲ್ಲರ ಅಭಿಪ್ರಾಯದ ಮೇರೆಗೆ ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ. ಯಾರ ಸಾಮರ್ಥ್ಯ ಏನೆಂಬುದನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ. ಅದನ್ನು ಆಡಳಿತ ಪಕ್ಷ ಅಥವಾ ಬೇರೆ ಯಾರೂ ನಿರ್ಧಾರ ಮಾಡಲು ಆಗುವುದಿಲ್ಲ.
| ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ವಿರೋಧಿಯಲ್ಲ. ಆದರೆ ಪರಿಪೂರ್ಣ ಅನುಷ್ಠಾನ, ಅರ್ಹ ಎಲ್ಲ ಫಲಾನುಭವಿಗಳಿಗೆ ತಲುಪಿಸುವುದಕ್ಕಿಂತ ಪ್ರಚಾರದ ಅಬ್ಬರವೇ ಜಾಸ್ತಿ. ವಾಸ್ತವಾಂಶವನ್ನು ಜನರಿಗೆ ತಿಳಿಸಿ, ಕಾಂಗ್ರೆಸ್​ನ ನಿಜಬಣ್ಣ ಬಯಲುಗೊಳಿಸುತ್ತೇವೆ.
| ಮಹೇಶ್ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಬೆಂಗಳೂರು:ಗ್ಯಾರಂಟಿಗಳ ಅನುಷ್ಠಾನದ ಗೊಂದಲ ಸರಿಪಡಿಸುವ ಜತೆಗೆ ಸರ್ಕಾರದ ಇಮೇಜ್ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಅಭಿಯಾನ ನಡೆಸಲು ಬಯಸಿದ್ದು, ಯೋಜನೆಗಳು ಜನರಿಗೆ ತಲುಪಿವೆಯೇ ಇಲ್ಲವೇ ಎಂದು ತಿಳಿಯಲು ಪಕ್ಷದ ವತಿಯಿಂದ ಸಮೀಕ್ಷೆ ಮಾಡಲು ಸಮಿತಿ ರಚನೆಗೆ ಮುಂದಾಗಿದೆ.
ಶಕ್ತಿ ಯೋಜನೆ ಹೊರತಾಗಿ ಜಾರಿಯಲ್ಲಿರುವ ಉಳಿದ ಮೂರು ಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಳಮಟ್ಟದಲ್ಲಿ ಒಂದಷ್ಟು ಗೊಂದಲಗಳಿದ್ದು, ಪ್ರತಿಪಕ್ಷಗಳೂ ನಿರಂತರ ವಾಗಿ ಟೀಕಿಸುತ್ತಿವೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಬಳಸಿ ವಾಸ್ತವ ಸಂಗತಿ ಅರಿಯುವ ಜತೆಗೆ ಲೋಕಸಭೆ ಚುನಾವಣೆಗೆ ಒಂದು ಸುತ್ತಿನ ಪ್ರಚಾರ ಮಾಡಲು ಪಕ್ಷ ಉದ್ದೇಶಿಸಿದೆ ಹಾಗೂ ಗ್ಯಾರಂಟಿಗಳ ಸಾಧಕ- ಬಾಧಕಗಳನ್ನು ಖುದ್ದಾಗಿ ತಿಳಿಯುಂತೆ ಸಚಿವರಿಗೆ ಸೂಚನೆ ನೀಡಲಾಗಿದೆ.
ಕಾರ್ಯಕರ್ತರಿಗೆ ಕರೆ:ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನಾಚರಣೆ ಮತ್ತು ಬೆಂಗಳೂರು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ಗೆ ಮತ ಹಾಕಿದರೆ ಗ್ಯಾರಂಟಿ ಯೋಜನೆಗಳನ್ನು ವಾಪಸ್ ತೆಗದುಕೊಳ್ಳುವಂತಹ ಕಾನೂನು ತರುತ್ತಾರೆ. ಈ ವಿಚಾರಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಡಿಸೆಂಬರ್​ನಲ್ಲಿ ಯುವನಿಧಿ ಜಾರಿ:ಪ್ರಧಾನಿ ಮೋದಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಕದ್ದು ಪಂಚರಾಜ್ಯಗಳ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಡಿಸಿಎಂ ಆರೋಪಿಸಿದರು. ಬಿಜೆಪಿ ಮತ್ತು ಜಾ.ಜನತಾದಳದವರು ಗ್ಯಾರಂಟಿಗಳನ್ನು ವಿರೋಧಿಸುವುದನ್ನು ಮತದಾರರಿಗೆ ತಿಳಿಸಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲುಸುವುದಾಗಲಿ, ಕಡಿಮೆ ಮಾಡುವುದಾಗಲಿ ಮಾಡುವುದಿಲ್ಲ ಎಂದು ತಿಳಿಸಿದ ಡಿ.ಕೆ. ಶಿವಕುಮಾರ್, ಡಿಸೆಂಬರ್​ನಲ್ಲಿ 5ನೇ ಗ್ಯಾರಂಟಿ ಯುವನಿಧಿ ಜಾರಿಗೆ ತರಲಾಗುವುದು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಇಲ್ಲವೇ ಎಂದು ಖುದ್ದಾಗಿ ತಿಳಿದುಕೊಳ್ಳುವಂತೆ ಸಚಿವರಿಗೆ ಸೂಚನೆ ನೀಡಲಾಗಿದೆ. ಸಮೀಕ್ಷೆ ಮಾಡಲು ಸಮಿತಿ ರಚನೆ ಮಾಡಲಾಗುವುದು.
| ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ
ವಿಶ್ವಕಪ್​ ಫೈನಲ್ ಪಂದ್ಯಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಕಪಿಲ್ ದೇವ್

ದೀಪಾವಳಿಗೆ ಗಂಡ ತವರು ಮನೆಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಜಗಳ ಆಡುತ್ತ ಪ್ರಾಣ ಕಳ್ಕೊಂಡ್ಲು ಗರ್ಭಿಣಿ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fourteen =
Remember me
