ವಿಜಯಪುರ: ಬಡವರ ಕಲ್ಯಾಣಕ್ಕಾಗಿ ಜಾರಿಗೊಂಡ ಗ್ಯಾರಂಟಿ ಯೋಜನೆಗಳು ಶ್ರೀಮಂತರ ಪಾಲಾಗುತ್ತಿವೆ. ಹೀಗಾಗಿ ಪರಿಷ್ಕರಣೆ ಅನಿವಾರ್ಯ. ಹಾಗಂತ ಯೋಜನೆ ನಿಲ್ಲಿಸಬೇಕೆಂದಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಬದಲಾಗಿ ಮಾರ್ಪಾಡು ಮಾಡುವುದು ಸೂಕ್ತ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಶೇ. 82 ರಷ್ಟು ಬಿಪಿಎಲ್ ಕಾರ್ಡ್‌ಗಳಿವೆ. ಇಷ್ಟೊಂದು ಬಡವರು ಇರಲು ಹೇಗೆ ಸಾಧ್ಯ? ಈ ಅಂಕಿ-ಸಂಖ್ಯೆ ಗಮನಿಸಿದರೆ ಮತ್ತು ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಬಡವರ ಯೋಜನೆಗಳು ಶ್ರೀಮಂತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಮಾರ್ಪಾಡು ಮಾಡಿದರೆ ತಪ್ಪೇನಿಲ್ಲ ಎಂಬುದು ನನ್ನ ವೈಯಕ್ತಿಕ ಭಾವನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಆ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿಯೂ ಚರ್ಚೆಯಾಗಿಲ್ಲ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಎರಡನೇ ಹಂತದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ, ಬಿಜೆಪಿಯಲ್ಲಿ ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಬಣಗಳಿವೆ. ಎ ಟು ಝಡ್‌ವರೆಗೆ ಗುಂಪುಗಳಿವೆ. ಹೀಗಾಗಿ ದಿನಕ್ಕೊಂದು ಪಾದಯಾತ್ರೆ ಮಾಡುತ್ತಾರೆ. ಈ ಹಿಂದೆ ವಿಜಯೇಂದ್ರ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ಮಾರಿಷಸ್‌ನಲ್ಲಿ 10 ಸಾವಿರ ಕೋಟಿ ರೂಪಾಯಿ ಇರಿಸಿದ್ದಾರೆಂದು ಹೇಳಿದ್ದರು, ಕರೊನಾ ಸಂದರ್ಭ 2 ಸಾವಿರ ಕೋಟಿ ರೂಪಾಯಿ ಹಗರಣವಾಗಿದೆ ಎಂದಿದ್ದರು ಇನ್ನು ಬಳ್ಳಾರಿಯಲ್ಲಿ ತಮ್ಮದೇ ಪಕ್ಷದ ಮುಖಂಡರು ಗಣಿ ಹಗರಣ ಮಾಡಿದ್ದರು. ಈ ಎಲ್ಲ ವಿಷಯಗಳಿನ್ನಿಟ್ಟುಕೊಂಡು ಯತ್ನಾಳ ಮತ್ತು ಅವರ ಬಣದವರು ಪಾದಯಾತ್ರೆ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಬೆಂಬಲವಿದೆ ಎಂದು ಲೇವಡಿ ಮಾಡಿದರು.
ಮುಡಾ ಹಗರಣದ ಹೆಸರಲ್ಲಿ ಧೀಮಂತ ನಾಯಕ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆದಿದೆ. ದೇವರಾಜ್ ಅರಸು ನಂತರ ಸುಭದ್ರ ಆಡಳಿತ ನೀಡಿದ ಧೀಮಂತ ನಾಯಕ ಸಿದ್ದರಾಮಯ್ಯ. ಇದನ್ನು ಸಹಿಸದ ಕೆಲವರು ಅವರ ಘನತೆಗೆ ಕುಂದು ತರುವ ಪ್ರಯತ್ನ ನಡೆಸಿದ್ದಾರೆಂದು ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಪ್ರಕರಣದಲ್ಲಿ ಘನತೆವೆತ್ತ ರಾಜ್ಯಪಾಲರು ನೋಟಿಸ್ ನೀಡುವುದರ ಹಿಂದೆ ರಾಜಕಾರಣ ಅಡಗಿದೆ ಎಂಬ ಆರೋಪ ಇದೆ. ಬೆಳಗ್ಗೆ 11.30ಕ್ಕೆ ಟಿ.ಜೆ. ಅಬ್ರಾಹಂ ಎಂಬುವರು ಮನವಿ ಕೊಡುತ್ತಾರೆ. ಅದೇ ದಿನ ಸಂಜೆ 6.30ಕ್ಕೆ ಮುಖ್ಯ ಕಾರ್ಯದರ್ಶಿ ರಜನೀಶ ಗೋಯಲ್ ಅವರು ಖುದ್ದಾಗಿ ಚೀಪ್ ಸೆಕ್ರೆಟರಿಗೆ ಭೇಟಿಯಾಗಿ ಮನವರಿಕೆ ಮಾಡಿಕೊಡುತ್ತಾರೆ. ಆದರೂ ರಾತ್ರಿ 10.30ಕ್ಕೆ ರಾಜ್ಯಪಾಲರು ತರಾತುರಿಯಲ್ಲಿ ನೋಟಿಸ್ ಕೊಡುತ್ತಾರೆ. ಹೀಗಾಗಿ ರಾಜ್ಯ ಪಾಲರ ನಡೆ ಬಗ್ಗೆ ಸಹಜವಾಗಿಯೇ ಸಂಶಯ ವ್ಯಕ್ತವಾಗಿದೆ. ನೂರಕ್ಕೆ ನೂರರಷ್ಟು ರಾಜ್ಯಪಾಲರು ತಮ್ಮ ನಡೆ ಬದಲಿಸುವ ವಿಶ್ವಾಸ ಇದೆ. ಹಾಗೊಂದು ವೇಳೆ ಸರ್ಕಾರ ಅಭದ್ರಗೊಳಿಸುವ ತಂತ್ರ ಕಂಡು ಬಂದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
