ಹುಬ್ಬಳ್ಳಿ:ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಪಕ್ಷದಲ್ಲಿ ಯಾವುದು ಸರಿಯಿಲ್ಲ. ಈ ಸರ್ಕಾರಕ್ಕೆ ಗ್ಯಾರಂಟಿ‌ಯೇ ಇಲ್ಲ ಎಂದರು.
ಇದನ್ನೂ ಓದಿ:5 ರೂಪಾಯಿಯ ಪೆನ್ನಿ ಸ್ಟಾಕ್​ಗೆ ಡಿಮ್ಯಾಂಡು: ಒಂದೇ ವಾರದಲ್ಲಿ 25% ಏರಿಕೆ
ಡಿ.ಕೆ. ಶಿವಕುಮಾರ್​ ಹಾಗೂ ಸಿದ್ಧರಾಮಯ್ಯ ಕಚ್ಚಾಡುತ್ತಿದ್ದಾರೆ. ಹೆಚ್ಚಿನ‌ ಡಿಸಿಎಂಗಳನ್ನು ಮಾಡಿ‌ ಡಿ.ಕೆ.ಶಿ ಅನ್ನು ಮೂಲೆಗುಂಪು ಮಾಡುವ ತಂತ್ರ ನಡೆದಿದೆ. ಕಾನುನಾತ್ಮಕವಾಗಿಯೂ ಡಿ.ಕೆ. ಶಿವಕುಮಾರ್​ಗೆ ತೊಂದರೆ ಕೊಡುವ ಪ್ಲಾನ್ ಮಾಡಲಾಗಿದೆ.ಅದರಲ್ಲಿ‌ ಸಫಲವಾಗದಿದ್ದರೂ ಪ್ಲಾನ್ ಮಾಡುತ್ತಲೇ ಇದ್ದಾರೆ ಎಂದರು.
ಗ್ಯಾರಂಟಿ‌ ಎಂದು ಹೇಳುವ ರಾಜ್ಯ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ ಎಂದರು. ಇನ್ನು ಮಂಡ್ಯ ಟಿಕೆಟ್ ಗೊಂದಲ‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಮಲತಾ ಅವರ ಜತೆ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದಾರೆ. ಒಂದೆರಡು ದಿನಗಳಲ್ಲಿ‌ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಇದನ್ನೂ ಓದಿ:ಪಶು ಆಸ್ಪತ್ರೆ ಮುಚ್ಚಲು ನಿರ್ಧಾರ: ಹೈನುಗಾರರ ಒತ್ತಾಯ: ಸರ್ಕಾರದ ನಿರ್ಧಾರಕ್ಕೆ ಅಸಾಮಾಧಾನ
ಕನಿಷ್ಠ 20 ಸ್ಥಾನ ಗೆಲ್ಲದಿದ್ದರೆ ಸಿಎಂ‌ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತೆ ಎಂಬ ಶಾಸಕ‌ ಎಸ್.ಆರ್ ಶ್ರೀನಿವಾಸ ಹೇಳಿಕೆಗೆ ಉತ್ತರಿಸಿದ ಪ್ರಲ್ಹಾದ್​ ಜೋಶಿ, 20 ಕ್ಷೇತ್ರ ಅಂತಾ ಯಾಕೆ ಹೇಳುತ್ತಿದ್ದಾರೋ‌ ಗೊತ್ತಿಲ್ಲ. ಐದಕ್ಕಿಂತ ಹೆಚ್ಚು ಗೆಲ್ಲಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ ಸಿದ್ಧರಾಮಯ್ಯ ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದರು.
ಯಾರಿಗೂ ಹೇಳಬೇಡ, ಬೇಗ ಬಾ…. ತನ್ನ ಮದುವೆಗೆ ಎಲ್ಲರ ಕಣ್ತಪ್ಪಿಸಿ ಬರುವಂತೆ ಧೋನಿ ಹೇಳಿದ್ಯಾರಿಗೆ ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
