ಬೆಂಗಳೂರು:ನನ್ನನ್ನ ಯಾವ ನಾಯಕರೂ ಬೆಳೆಸಿಲ್ಲ. ನಮ್ಮ ಅಪ್ಪ ನನ್ನನ್ನು ಬೆಳೆಸಿದ್ದಾರೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಸಹಿಸಲು ಆಗಲ್ಲ. ನನ್ನ ಅಪ್ಪನ ಮಾತೇ ನಾನು ಕೇಳಲ್ಲ. ಪ್ರೀತಿಯಿಂದ ಹೇಳಿದ್ರೆ ಕೇಳ್ತೀನಿ. ಆದ್ರೆ ದೊಡ್ಡವರೇ ನನ್ನ ಬಗ್ಗೆ ಮಾತನಾಡಿದ್ರೆ ಸುಮ್ನೆ ಇರೋದಕ್ಕೆ ಸಾಧ್ಯನಾ? ಎಂದು ಜೆಡಿಎಸ್​ನ ರೆಬಲ್ ಶಾಸಕ ಗುಬ್ಬಿ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ಕರೆದಿದ್ದ ಪಕ್ಷ ಸಂಘಟನಾ ಸಭೆಗೆ ಹೋಗುವ ಮುನ್ನವೇ ಸಿಡಿದೆದ್ದ ಗುಬ್ಬಿ ಶ್ರೀನಿವಾಸ್, ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದರು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಸಹಿಸಲು ಆಗಲ್ಲ. ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಬಹಿರಂಗವಾಗಿ ನಾಯಕರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅವರೇ ನನ್ನ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರನ್ನು ಸೋಲಿಸಿದ್ರು, ಎಂ.ಟಿ. ಕೃಷ್ಣಪ್ಪನನ್ನು ಸೋಲಿಸಿದ್ರು ಎಂದು ಹೇಳ್ತಾರೆ. ಮನುಷ್ಯರಾದವರಿಗೆ ಬೇಜಾರು ಆಗುತ್ತೆ. ಆತ್ಮಸಾಕ್ಷಿ ಇದ್ದವರಿಗೆ ಖಂಡಿತ ಬೇಜಾರು ಆಗುತ್ತೆ. ಸತ್ಯ ಹೇಳೋದೆ ದೊಡ್ಡ ಸಮಸ್ಯೆ ಆಗಿದೆ ಎಂದು ಸುದ್ದಿಗಾರರ ಬಳಿ ಅಸಮಾಧಾನ ಹೊರಹಾಕಿದರು.ಇದನ್ನೂ ಓದಿರಿನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​…: ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲವು ನಾಯಕರನ್ನು ಭೇಟಿ ಮಾಡಿದ್ದೆ. ನನಗೆ ಯಾರ ಮೇಲೂ ಪ್ರೀತಿ-ದ್ವೇಷ ಇಲ್ಲ. ಜೆಡಿಎಸ್​ನಲ್ಲಿ ನನ್ನ ಸ್ವಾಭಿಮಾನಕ್ಕೆ ಈವರೆಗೂ ಧಕ್ಕೆ ಆಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಆದರೆ ಸಹಿಸಲಾರೆ. ಬ್ಯಾಂಕ್​ನಲ್ಲಿ ಲೋನ್ ಕೊಡಿಸುವ ವಿಚಾರಕ್ಕೆ ರಾಜಣ್ಣರ ಮನೆಗೆ ಹೋಗಿದ್ದೆ. ನಾನು ಯಾವ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲೂ ಇಲ್ಲ. ಪ್ರೀತಿಯಿಂದ ಹೇಳಿದ್ರೆ ಮಾತು ಕೇಳುವೆ. ದಬ್ಬಾಳಿಕೆಯಿಂದ ಹೇಳಿದ್ರೆ ಕೇಳಲ್ಲ. ಅದು ನಮ್ಮ ಅಪ್ಪ ಹೇಳಿದರೂ ಅಷ್ಟೇ ಕೇಳಲ್ಲ ಎಂದರು. ಯಾವ್ ಕಾರಣಕ್ಕೆ ಸಭೆ ಕೆರೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸಭೆಯಲ್ಲಿ ನನ್ನ ಅನಿಸಿಕೆ ಹೇಳ್ತೀನಿ ಎಂದರು.
ಜೆಡಿಎಸ್​ ವರಿಷ್ಠ ದೇವೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಸೇರಿದಂತೆ ಶಾಸಕರು ಭಾಗವಹಿಸಿದ್ದಾರೆ.
ಬೆಂಕಿ ಹಚ್ಚಿಕೊಂಡು ಸಾವಿನ ಮನೆಯ ಕದ ತಟ್ಟಿದ 22ರ ಯುವತಿ! ಆ ರಾತ್ರಿ ಏನಾಯ್ತು?

ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

ಕೆಳಗೆ ಬಿದ್ದ ಶಾಸಕಿ ಸೌಮ್ಯರೆಡ್ಡಿ, ತುಳಿದುಕೊಂಡೇ ಮುನ್ನಡೆದ ಕಾರ್ಯಕರ್ತರು! ಕೈ ಪ್ರತಿಭಟನೆ ವೇಳೆ ಅವಘಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 4 =
Remember me
