ನವದೆಹಲಿ:ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾದ ಹಲವಾರು ವಿಡಿಯೋಗಳಲ್ಲಿ ಬಿಳಿ ಕಾರು ಚೀನಾದ ಶಾಂಘೈ ಹೋಟೆಲ್‌ನ ಗಾಜಿನ ಬಾಗಿಲುಗಳನ್ನು ಒಡೆದು, ಹಿಮ್ಮುಖವಾಗಿ ಲಾಬಿಗೆ ನುಗ್ಗಿ, ಇರುವ ಎಲ್ಲವನ್ನೂ ನಾಶ ಮಾಡುವುದನ್ನು ಕಾಣಬಹುದು.
ಸಿಟ್ಟಾಗಿದ್ದ ಅತಿಥಿಯೊಬ್ಬ ತನ್ನ ಸ್ಪೋರ್ಟ್ಸ್ ಕಾರನ್ನು ಚೈನೀಸ್ ಹೋಟೆಲ್‌ನ ಬಾಗಿಲುಗಳ ಮೂಲಕ ನುಗ್ಗಿಸಿ ಅದರ ಲಾಬಿಯ ಸುತ್ತಲೂ ಹುಚ್ಚುಚ್ಚಾಗಿ ಓಡಿಸಿದ್ದಾನೆ. ಇದಕ್ಕೆ ಕಾರಣ ಇನ್ನೂ ವಿಚಿತ್ರವಾದದ್ದು. ಈತನ ಲ್ಯಾಪ್​ಟಾಪ್​ ಕಾಣೆಯಾಗಿದ್ದು ಈ ಬಗ್ಗೆ ಸಿಬ್ಬಂದಿಜೊತೆಗೆ ವಾದ ಮಾಡಿದ್ದಾನೆ. ಆದರೆ ಲ್ಯಾಪ್​ಟಾಪ್​ ಸಿಗದೇ ಸಮಾಧಾನಗೊಳ್ಳದ ಈತ ಹೋಟೆಲ್​ ಒಳಕ್ಕೆ ಕಾರು ನುಗ್ಗಿಸಿದ್ದಾನೆ. ​
ಈ ಕಾರು ಐಷಾರಾಮಿ ಕನ್ವರ್ಟಿಬಲ್​ ಸ್ಪೋರ್ಟ್ಸ್​ ಕಾರಾಗಿದ್ದು, ಒಳಗೆ ನುಗ್ಗಿದ ಮೇಲೆ ಅಡ್ಡಾದಿಡ್ಡಿಯಾಗಿ ಓಡಾಡಿದೆ. ಇದನ್ನು ಕಂಡು ಭಯಭೀತರಾದ ಸಾರ್ವಜನಿಕರು ಏನಾಗುತ್ತಿದೆ ಎಂದು ಒಬ್ಬರನ್ನೊಬ್ಬರು ಕೇಳಿದ್ದಾರೆ.(ಏಜೆನ್ಸೀಸ್​)
On Jan 10 a car crashed into the lobby of Jinling Purple Mountain Hotel Shanghai (上海金陵紫金山大酒店) in Lujiazui, Pudong after the driver, a guest at the hotel, had a spat with hotel staff over his notebook computer which purportedly went missing in his room.pic.twitter.com/ExOaAPTtJK
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + ten =
Remember me
