ಬೆಂಗಳೂರು:ಆನ್​ಲೈನ್ ಶಿಕ್ಷಣದ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದ ನಾಲ್ಕು ತಿಂಗಳ ಬಳಿಕ ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ, ವಯೋಮಾನದ ಆಧಾರದ ಮೇಲೆ ತರಗತಿ ನಡೆಸುವ ಕುರಿತು ಸ್ಪಷ್ಟ ನಿರ್ದೇಶನ ನೀಡಿದೆ. ಹಾಗೆಯೇ ಮಿತಿಮೀರಿದ ಆನ್​ಲೈನ್ ಕಲಿಕೆಯಿಂದ ಮಕ್ಕಳ ಕಣ್ಣಿನ ಮೇಲಾಗುವ ದುಷ್ಪರಿಣಾಮ ಕುರಿತು ಇ-ಪಾಠ, ಕಣ್ಣಿಗೆ ಕಾಟ ತಲೆ ಬರಹದಡಿ ವಿಜಯವಾಣಿ ಪ್ರಕಟಿಸಿದ್ದ ವಿಶೇಷ ವರದಿಗೆ ಸ್ಪಂದಿಸಿ ಕಲಿಕೆ ಸಮಯಕ್ಕೂ ಮಿತಿ ವಿಧಿಸಿದೆ.
ಮಾರ್ಗಸೂಚಿ ಪ್ರಕಾರ ಶಾಲೆಗಳು ನಿಯಮಾನುಸಾರವೇ ಆನ್​ಲೈನ್ ಶಿಕ್ಷಣ ನೀಡಬೇಕು, 2ನೇ ತರಗತಿಯವರೆಗಿನ ಮಕ್ಕಳ ಆನ್​ಲೈನ್ ತರಗತಿಯಲ್ಲಿ ಪಾಲಕರ ಉಪಸ್ಥಿತಿ ಕಡ್ಡಾಯ. ಅವರ ಅನುಮತಿಯ ಮೇರೆಗೆ ವಯಸ್ಕರ ಉಪಸ್ಥಿತಿಯೊಂದಿಗೆ ಬೋಧನೆ ನಡೆಸಬೇಕೆಂದು ಸೂಚನೆ ನೀಡಲಾಗಿದೆ.
ವಯೋಮಾನಕ್ಕನುಗುಣವಾಗಿ ದಿನಕ್ಕೆ 1ರಿಂದ 4 ಗರಿಷ್ಠ ಅಧಿವೇಶನಗಳು, 2ನೇ ತರಗತಿಯವರೆಗೆ ವಾರದಲ್ಲಿ ಪರ್ಯಾಯ ದಿನಗಳ ಬೋಧನೆ, 3 ನೇ ತರಗತಿಯ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ತರಗತಿ ನಡೆಸಲು ಅವಕಾಶವಿದೆ.
ಸಿಂಕ್ರೊನಸ್ (ನೇರ ಪ್ರಸಾರದ ಅಧಿವೇಶನಗಳು) ಮತ್ತು ಅಸಿಂಕ್ರೊನಸ್ (ಪೂರ್ವ-ಮುದ್ರಿತ ಅಧಿವೇಶನಗಳು) ವಿಧಾನಗಳಿಗೆ ಅನುಮತಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪೂರ್ವ ಪ್ರಾಥಮಿಕದಿಂದ 10ನೇ ತರಗತಿವರೆಗಿನ ಆನ್​ಲೈನ್ ಬೋಧನೆಯು ಸಂವಾದ(ಇಂಟರ್ಯಾಕ್ಟಿವ್) ರೀತಿಯಲ್ಲಿ ಇರಬೇಕು. ಪೂರ್ವ ಪ್ರಾಥಮಿಕದಿಂದ 2ನೇ ತರಗತಿವರೆಗಿನ ಮಕ್ಕಳಿಗೆ ಆಟ, ಕಥೆ, ಪ್ರಾಸ ಮತ್ತು ಇತರ ಅನ್ವೇಷಕ ಚಟುವಟಿಕೆಗಷ್ಟೇ ಸೀಮಿತವಾಗಬೇಕು. 3ರಿಂದ 5ನೇ ತರಗತಿ ಮಕ್ಕಳಿಗೆ ಶೇ.25 ಪಠ್ಯಕ್ರಮ, ಶೇ.75 ಸಾಮಾನ್ಯ ವಿಷಯ ಅಥವಾ ಪಠ್ಯಕ್ರಮ, 6ರಿಂದ 8ನೇ ತರಗತಿ ಮಕ್ಕಳಿಗೆ ಶೇ.50 ಪಠ್ಯಕ್ರಮ ಮತ್ತು ಶೇ.50 ಸಾಮಾನ್ಯ ವಿಷಯ ಅಥವಾ ಪಠ್ಯಕ್ರಮ ಹಾಗೂ 9ರಿಂದ 10ನೇ ತರಗತಿ ಮಕ್ಕಳಿಗೆ ಶೇ.75 ಪಠ್ಯಕ್ರಮ ಮತ್ತು ಶೇ.25 ಸಾಮಾನ್ಯ ವಿಷಯ ಅಥವಾ ಪಠ್ಯಕ್ರಮದ ಬೋಧಿಸಬೇಕೆಂದು ನಿರ್ದೇಶನ ನೀಡಿದೆ.
ಶಾಲೆಗಳು ಮಾರ್ಗಸೂಚಿ ಪಾಲಿಸದೆ ಹೆಚ್ಚಿನ ಅವಧಿ ಆನ್​ಲೈನ್ ತರಗತಿ ನಡೆಸುತ್ತಿರುವುದರಿಂದ ಮಕ್ಕಳ ಆರೋಗ್ಯ ಮತ್ತು ದೃಷ್ಟಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ. ಇದನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್​-19ಗೆ ಸಂಭಾವ್ಯ ಚಿಕಿತ್ಸೆ; 25 ಸಾವಿರ ಡಾಲರ್​ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eight =
Remember me
