ಕೀರ್ತಿನಾರಾಯಣ ಸಿ.ಬೆಂಗಳೂರು:ಕರ್ನಾಟಕ, ಆಂಧ್ರಪ್ರದೇಶ ಸೇರಿ ಪಂಚರಾಜ್ಯಗಳಲ್ಲಿ ಉದ್ಯೋಗದ ಹೆಸರಲ್ಲಿ ವಂಚಿಸಿದ ದೇಶದ ಅತಿದೊಡ್ಡ ಪ್ರಕರಣವನ್ನು ಒಡಿಶಾ ಪೊಲೀಸರು ಭೇದಿಸಿರುವ ಬೆನ್ನಲ್ಲೇ ನಿರುದ್ಯೋಗ ಯುವಕ-ಯುವತಿಯರಿಗೆ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಹಾಗೂ ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಂಚಿಸುವ ‘ನಕಲಿ ಉದ್ಯೋಗ ಜಾಲ’ಗಳು ದೇಶಾದ್ಯಂತ ಸಕ್ರಿಯವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇವು ಕೆಲಸ ಸಿಕ್ಕಿರುವಂತೆ ನಕಲಿ ಆಫರ್ ಲೆಟರ್​ಗಳನ್ನು ಕೊಟ್ಟು ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿವೆ. ಕರ್ನಾಟಕ ಸೇರಿ ಭಾರತದಾದ್ಯಂತ ವಾರ್ಷಿಕ ಸಾವಿರಾರು ‘420’ ಕೇಸ್​ಗಳು ದಾಖಲಾಗುತ್ತಿವೆ.
ನಕಲಿ ಐಟಿ ಕಂಪನಿಗಳನ್ನು ಸೃಷ್ಟಿಸಿ, ಉದ್ಯೋಗದ ಹೆಸರಲ್ಲಿ ವಿದೇಶಕ್ಕೆ ಕರೆಸಿಕೊಂಡು ಅಕ್ರಮವಾಗಿ ಬಂಧಿಸಿಡುವ ವಿದೇಶಿ ಜಾಲಗಳು ಒಂದೆಡೆಯಾದರೆ, ಭಾರತದಲ್ಲೇ ನೌಕರಿ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡುವ ಆನ್​ಲೈನ್ ಜಾಲಗಳು ಇನ್ನೊಂದೆಡೆ ಸಕ್ರಿಯವಾಗಿವೆ. ಇಂತಹ ಜಾಲಗಳ ಬಗ್ಗೆ ಜಾಗೃತರಾಗುವಂತೆ ಕೇಂದ್ರ ಸರ್ಕಾರ ಹಾಗೂ ಸೈಬರ್ ಕ್ರೖೆಂ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಅದರಲ್ಲೂ ಐಟಿ ವಲಯದವರು ವಿದೇಶದಲ್ಲಿ ಹೆಚ್ಚಿನ ಸಂಬಳದ ಕೆಲಸಕ್ಕಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಇಂತಹವರು ಉದ್ಯೋಗ ದಂಧೆ ಜಾಲಗಳಲ್ಲಿ ಸುಲಭವಾಗಿ ಸಿಲುಕುತ್ತಿದ್ದಾರೆ. ಕಳೆದ 5 ತಿಂಗಳಲ್ಲಿ (2022ರ ಜುಲೈನಿಂದ) ವಿದೇಶಿ ನಕಲಿ ಜಾಲದಲ್ಲಿ ಸಿಲುಕಿದ್ದ 259 ಭಾರತೀಯ ಅಭ್ಯರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.
ಈ ಪೈಕಿ 205 ಜನರನ್ನು ಆಯಾ ರಾಜ್ಯಗಳಿಗೆ ಕಳುಹಿಸಲಾಗಿದೆ. ಉಳಿದವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮುಂದುವರಿದಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ.
ವಿದೇಶದಲ್ಲಿ ಕೆಲಸ ಕೊಡಿಸುವ ಹೆಸರಲ್ಲಿ ವಂಚನೆ ಮಾಡಿರುವ ಆರೋಪದಲ್ಲಿ ಈವರೆಗೆ 2,102 ಏಜೆಂಟ್​ಗಳನ್ನು ಗುರುತಿಸಲಾಗಿದೆ. ಇವರ ಬಗ್ಗೆ ಎಮಿಗ್ರೇಟ್ ಪೋರ್ಟಲ್​ನಲ್ಲಿ ಮಾಹಿತಿ ಕೊಡಲಾಗಿದೆ. ಮೋಸ ಹೋದವರು ಕೊಟ್ಟ ದೂರುಗಳನ್ನು ಆಧರಿಸಿ ನಕಲಿ ಉದ್ಯೋಗ ಜಾಲದಲ್ಲಿರುವ ಏಜೆಂಟ್​ಗಳನ್ನು ಪತ್ತೆಹಚ್ಚಿ ಅವರ ಬಗ್ಗೆ ಕೇಂದ್ರ ಸರ್ಕಾರ, ಎಮಿಗ್ರೇಟ್ ಪೋರ್ಟ್​ಲ್ನಲ್ಲಿ ಅಪ್​ಡೇಟ್ ಮಾಡುತ್ತದೆ. ಉದ್ಯೋಗ ಅರಸಿ ವಿದೇಶಕ್ಕೆ ಹೋಗಿ ಸಿಲುಕಿದ್ದವರಿಂದ 2022ರ ಜುಲೈ ಮೊದಲ ವಾರದಲ್ಲಿ ಭಾರತೀಯ ರಾಯಭಾರ ಕಚೇರಿಗೆ ದೂರುಗಳು ಬಂದಿದ್ದವು. ಅದನ್ನು ಆಧರಿಸಿ ರಕ್ಷಣೆ ಮಾಡಲಾಗಿದೆ.
ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್​ಸಿಆರ್​ಬಿ) ಮಾಹಿತಿ ಪ್ರಕಾರ ಕಳೆದ 3 ವರ್ಷದಲ್ಲಿ 76,255 ವಂಚನೆ (420) ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬಹುತೇಕ ಉದ್ಯೋಗದ ಆಮಿಷಕ್ಕೊಳಗಾಗಿ ಮೋಸ ಹೋದ ಪ್ರಕರಣಗಳೇ ಆಗಿವೆ. 2019ರಲ್ಲಿ 21,252, 2020ರಲ್ಲಿ 24,952 ಹಾಗೂ 2021ರಲ್ಲಿ 30,051 ಕೇಸ್​ಗಳು ವರದಿಯಾಗಿವೆ. ಕರ್ನಾಟಕದಲ್ಲಿ ವಾರ್ಷಿಕ 6 ಸಾವಿರ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ.
ನಿರುದ್ಯೋಗ ಪ್ರಮಾಣ ಎಷ್ಟಿದೆ?
ಕೇಂದ್ರ ಸರ್ಕಾರದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ (ಪಿಎಲ್​ಎಫ್​ಎಸ್) ಪ್ರಕಾರ 2017-18ರಲ್ಲಿ ಶೇ.6.0, 2018-19ರಲ್ಲಿ ಶೇ.5.8, 2019-20ರಲ್ಲಿ ಶೇ.4.8 ಹಾಗೂ 2020-21ರಲ್ಲಿ ಶೇ.4.2ರಷ್ಟು ನಿರುದ್ಯೋಗ ಪ್ರಮಾಣ ಇದೆ. ಒಟ್ಟಾರೆಯಾಗಿ ಗಮನಿಸಿದರೆ ಭಾರತದಲ್ಲಿ ನಿರುದ್ಯೋಗ ಪ್ರಮಾಣವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.
16 ಕಡೆ ಇಡಿ ಶೋಧ
ಪಾರ್ಟ್ ಟೈಂ ಜಾಬ್ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿದ್ದ ಆರೋಪದಲ್ಲಿ ಬೆಂಗಳೂರಿನ ದಕ್ಷಿಣ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನವೆಂಬರ್ 17ರಂದು ಬೆಂಗಳೂರಿನ 16 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. 80ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ, 1 ಕೋಟಿ ರೂ. ಅಧಿಕ ಹಣ ಜಪ್ತಿ ಮಾಡಿದೆ. ಈ ಪ್ರಕರಣದಲ್ಲಿ 50ಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿದ್ದಾರೆ.
ವೆಬ್​ಸೈಟ್ ವಿಳಾಸ ಗಮನಿಸಿ
ವ್ಯಾಕರಣ ದೋಷ ನೋಡಿ
ಹಣ ಪಾವತಿಸಬೇಡಿ
ಆನ್​ಲೈನ್ ಇಂಟರ್​ವ್ಯೂ ಮುನ್ನ
ಉದ್ಯೋಗದಾತರ ಸಮಗ್ರ ಮಾಹಿತಿ
ವಿದೇಶಿ ಜಾಲದಿಂದ ವಂಚನೆ
ಸ್ಥಳೀಯ ಜಾಲಗಳ ಮೋಸ
ಈ ಬಗ್ಗೆ ಎಚ್ಚರ ವಹಿಸಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 7 =
Remember me
