ಆನೇಕಲ್:ಪ್ರತಿಷ್ಠಿತ ಆಹಾರ ತಯಾರಿಕಾ ಕಂಪನಿ ಎಂಟಿಆರ್ 100 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ 123 ಅಡಿ ಉದ್ದದ ದೋಸೆ ತಯಾರಿಸಿ ಗಿನ್ನೆಸ್ ದಾಖಲೆ ಮಾಡಿದೆ. ಬೊಮ್ಮಸಂದ್ರದ ಎಂಟಿಆರ್ ಕಂಪನಿ ಆವರಣದಲ್ಲಿ ಶನಿವಾರ 75ಕ್ಕೂ ಹೆಚ್ಚು ಬಾಣಸಿಗರು ವಿಶ್ವದ ಅತಿ ಉದ್ದನೆಯ ದೋಸೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಸಾಧನೆಯಲ್ಲಿ ಲೋರ್ಮನ್ ಕಿಚನ್ ಸಹಭಾಗಿತ್ವದಲ್ಲಿ ದೋಸೆ ತಯಾರಿಸಲಾಗಿದೆ.
ಎಂಟಿಆರ್ ಹೋಟೆಲ್​ಗಳಲ್ಲಿ ದೋಸೆಯು ವಿಶೇಷ ಖಾದ್ಯವಾಗಿದ್ದು, 100 ವರ್ಷದ ಸಂಭ್ರಮದಲ್ಲಿ ಅತಿಉದ್ದನೆಯ ದೋಸೆ ಮಾಡಲು ನಿರ್ಧರಿಸಿ ತಯಾರು ಮಾಡಲಾಗಿದೆ ಎಂದು ಕಂಪನಿ ಉದ್ಯೋಗಿ ಅಶ್ವಿನಿ ಸಂತಸ ಹಂಚಿಕೊಂಡರು. 100 ಅಡಿ ದೋಸೆಗಾಗಿ ಪ್ರಯತ್ನಿಸುತ್ತಿದ್ದೆವು, ಆದರೆ, ಅದನ್ನು ಮೀರಿ 123 ಅಡಿ ದೋಸೆ ತಯಾರಿಸಿದೆವು. ದೋಸೆ ಮೊದಲಿನಿಂದಲೂ ಎಂಟಿಆರ್ ಪರಂಪರೆಯ ಭಾಗವಾಗಿದ್ದು, ಅತಿ ಉದ್ದದ ದೋಸೆ ವಿಶ್ವ ದಾಖಲೆಯಾಗಿದೆ ಎಂದು ಎಂಟಿಆರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಯ್ ಭಾಸಿನ್ ಹೇಳಿದರು. ಲೋರ್ಮನ್ ಕಿಚನ್ ಎಕ್ವಿಪ್ಮೆಂಟ್ ಪ್ರೖೆ. ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಮೌಳಿ ಮಾತನಾಡಿ, ದೋಸೆಯನ್ನು ವಿಶೇಷವಾಗಿ ನಿರ್ವಿುಸಿದ ಇಂಡಕ್ಷನ್ ಸ್ಟೌನಲ್ಲಿ ಬೇಯಿಸಿದೆವು. ಇದು ಲೋರ್ಮನ್ ನಿರ್ವಿುಸಿದ ಅತೀ ಉದ್ದದ ಸ್ಟೌ ಆಗಿದೆ. ಇದರೊಂದಿಗೆ ಎಂಟಿಆರ್ ಈ ಹಿಂದಿನ ವಿಶ್ವದ ಅತೀ ಉದ್ದದ ದೋಸೆಯ 16.68 ಮೀ (54 ಅಡಿ 8.69 ಇಂಚು) ದಾಖಲೆ ಮುರಿದಿದೆ ಎಂದರು.
ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three − one =
Remember me
