ಹುಬ್ಬಳ್ಳಿ:ಸದ್ಯದಲ್ಲೇ ಈ ಹುಬ್ಬಳ್ಳಿ ಹುಡುಗಿಯ ಹೆಸರನ್ನು ಹಲವರು ‘ಸ್ತುತಿ’ಸಿದರೂ ಅಚ್ಚರಿಯೇನಿಲ್ಲ. ಏಕೆಂದರೆ ಈ ಬಾಲಕಿ ಗಿನ್ನೆಸ್​ ದಾಖಲೆಯ ಪ್ರಯತ್ನವೊಂದನ್ನು ಮಾಡಿದ್ದು, ಸದ್ಯದಲ್ಲೇ ಈಕೆಯ ಹೆಸರು ಗಿನ್ನೆಸ್​ ಬುಕ್​ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗುವ ಸಾಧ್ಯತೆಗಳು ಗೋಚರಿಸಿವೆ.ಹೀಗೆ ದಾಖಲೆ ಪ್ರಯತ್ನವನ್ನು ಮಾಡಿರುವ ಬಾಲಕಿಯ ಹೆಸರು ಸ್ತುತಿ ಕುಲಕರ್ಣಿ. ಈಗೆ ಮೂರು ಹ್ಯೂಲಾ ಹೂಪ್​ ರಿಂಗ್​ಗಳನ್ನು ಹಾಕಿಕೊಂಡು ಸ್ಕೇಟಿಂಗ್ ಮಾಡುವ ಮೂಲಕ ನೂರು ಮೀಟರ್ ದೂರವನ್ನು 23.35 ಸೆಕೆಂಡ್​ನಲ್ಲಿ ಕ್ರಮಿಸಿ ಸೈ ಎನಿಸಿಕೊಂಡಿದ್ದಾಳೆ. ಈ ಮೂಲಕ ಈಕೆ ಗಿನ್ನೆಸ್​ ದಾಖಲೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಏಕೆಂದರೆ ಇಂಥದ್ದೊಂದು ಪ್ರಯತ್ನದಲ್ಲಿ ಆಸ್ಟ್ರೇಲಿಯದ ಮಾರ್ವಾ ಎಂಬಾಕೆ 27 ಸೆಕೆಂಡ್​ನಲ್ಲಿ ಗುರಿ ತಲುಪಿದ್ದು, ಅದನ್ನು ಅದಕ್ಕೂ ಕಡಿಮೆ ಅವಧಿಯಲ್ಲಿ ಸ್ತುತಿ ಮಾಡಿ ಮುಗಿಸಿದ್ದಾಳೆ. ಹೀಗಾಗಿ ಇದು ಗಿನ್ನೆಸ್​ ಬುಕ್​ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಈಕೆಯ ಕೋಚ್ ಅಕ್ಷಯ ಸೂರ್ಯವಂಶಿ.
ಇದನ್ನೂ ಓದಿ:ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?
ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಯ ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಸ್ತುತಿ ಈ ಸಾಧನೆ ಮಾಡಿದ್ದಾಳೆ. ಈ ದಾಖಲೆಯ ವಿವರವನ್ನು ಗಿನ್ನೆಸ್​ ರೆಕಾರ್ಡ್​ಗೆ ಕಳುಹಿಸಲಾಗುವುದು ಎಂದು ಸ್ತುತಿ ಪಾಲಕರಾದ ಕಿಶೋರ ಹಾಗೂ ರಶ್ಮಿ ತಿಳಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
