ಕಲಬುರಗಿ:ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗದ ಎಚ್​.ಓ.ಡಿ. ಮೇಲೆ ಪ್ರೊಫೆಸರ್​ನಿಂದಲೇ ಹಲ್ಲೆಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಸ್ಯಶಾಸ್ತ್ರ ವಿಭಾಗದ ಎಚ್.ಓ.ಡಿ. ಡಾ. ಜಿ.ಎಂ. ವಿದ್ಯಾಸಾಗರ ಹಲ್ಲೆಗೊಳಗಾದವರು. ಈ ಕೃತ್ಯವೆಸಗಿದ್ದು, ಇದೇ ವಿವಿಯ ಮನೋಶಾಸ್ತ್ರ ವಿಭಾಗದ ಹಿರಿಯ ಪ್ರೊ. ಎಸ್.ಪಿ. ಮೇಲಕೇರಿ.
ಇದನ್ನೂ ಓದಿರಿಹಾಲು ಖರೀದಿ ದರ 2 ರೂಪಾಯಿ ಇಳಿಕೆ!
ಡಾ.ವಿದ್ಯಾಸಾಗರ ಅವರ ಕಚೇರಿಗೆ ಪ್ರಾಧ್ಯಾಪಕಿ ಪ್ರತಿಮಾ ಮಠ ಅವರೊಂದಿಗೆ ಮಂಗಳವಾರ ಸಂಜೆ ತೆರಳಿದ ಪ್ರೊ. ಎಸ್.ಪಿ. ಮೇಲಕೇರಿ, ಅವಾಚ್ಯವಾಗಿನಿಂದಿಸಿದ್ದಾರೆ. ಬಳಿಕ ಎಚ್​ಓಡಿ ಕಪಾಳಕ್ಕೆ ಹೊಡೆದಿದ್ದಾರೆ. ಮೇಲಕೇರಿ ಅವರ ಅಣ್ಣನ ಮಗನ ಎಂ.ಫಿಲ್ ವಿಚಾರವಾಗಿ ಈ ಗಲಾಟೆ ನಡೆದಿದೆ. ಎಸ್‌.ಪಿ.ಮೇಲಕೇರಿ ಜೊತೆಗೆ ಪ್ರೊ.ಪ್ರತಿಮಾ ಮಠ ಅವರ ಮೇಲೂ ಡಾ.ಜಿ.ಎಂ.ವಿದ್ಯಾಸಾಗರ್‌ ದೂರು ನೀಡಿದ್ದಾರೆ. ಕಲಬುರಗಿ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಯಲ್ಲಿನ ಕೆಲ ಉಪನ್ಯಾಸಕರ ದರ್ಪಕ್ಕೆ ಈ ಹಲ್ಲೆ ಘಟನೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಕಲಿಸಬೇಕಾದ ಉಪನ್ಯಾಸಕರೇ ಹೊಡೆದಾಟಕ್ಕಿಳಿದರೆ ವಿವಿ ಗತಿಯೇನು? ಇಂತಹ ಕೆಟ್ಟ ಸಂಸ್ಕೃತಿ ನಾಶವಾಗಲು ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವಿದ್ಯಾರ್ಥಿಗಳು ಮತ್ತು ಪಾಲಕರಿಂದ ಕೇಳಿಬಂದಿದೆ.
ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 2 =
Remember me
