ಚಿಕ್ಕಮಗಳೂರು:ಅತಿವೃಷ್ಟಿ ಮತ್ತು ರೋಗಕ್ಕೆ ತುತ್ತಾಗಿ ಈರುಳ್ಳಿ ಇಳುವರಿ ಕುಸಿದಿದ್ದು, ಗೋಲಿಗಾತ್ರದ ಗುಲ್ಟಿ ಈರುಳ್ಳಿ ಧಾರಣಿ ಕೆಜಿಗೆ 50 ರೂ. ತಲುಪಿದೆ. ಬೇರೆ ಸಂದರ್ಭಗಳಲ್ಲಿ ಈ ಗೋಲಿ ಗಾತ್ರದ ಈರುಳ್ಳಿಗೆ ಬೇಡಿಕೆಯೇ ಇರುವುದಿಲ್ಲ.
ಗುಣಮಟ್ಟದ ಈರುಳ್ಳಿ ಬೆಲೆ ಕೆಜಿಗೆ 80ರಿಂದ 100 ರೂ. ತಲುಪಿದ್ದು, ಕಳೆದ ಹಲವು ದಶಕಗಳಿಂದ ಕೆಜಿಗೆ 1 ರೂ. ನಂತೆ ಚೀಲಕ್ಕೆ 50 ರೂ. ಕೆಳಗೆ ಇದ್ದ ಗುಲ್ಟಿ ಈರುಳ್ಳಿ ಕೆಜಿಗೆ 50 ರೂ. ನಂತೆ ಮಾರಾಟವಾಗುತ್ತಿದೆ.
ಚಿಕ್ಕಮಗಳೂರು ಮಾರುಕಟ್ಟೆಗೆ ಹುಬ್ಬಳ್ಳಿ ಭಾಗದಿಂದ ಈರುಳ್ಳಿ ಬರುತ್ತಿದ್ದು, ಈ ವರ್ಷ ಅತಿವೃಷ್ಟಿ ಕಾರಣ ಅಲ್ಲಿನ ಈರುಳ್ಳಿ ಬರುತ್ತಿಲ್ಲ. ಈಗ ಮಧ್ಯಪ್ರದೇಶದಿಂದ ಈರುಳ್ಳಿ ಬರುತ್ತಿದೆ.ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಾಗ ಕಾಸರಗೋಡು, ಕೇರಳದವರು ಖರೀದಿಗೆ ಬರುತ್ತಿದ್ದರು. ಈಗ ಇಳುವರಿ ಕಡಿಮೆಯಾಗಿರುವ ಕಾರಣ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ವರ್ತಕರ ಅಭಿಪ್ರಾಯ.
ಈಜಿಪ್ಟ್ ಈರುಳ್ಳಿಗೆ ಬೇಡಿಕೆ ಕಡಿಮೆ: ಇಳುವರಿ ಕಡಿಮೆಯಾಗಿರುವ ಕಾರಣ ಸರ್ಕಾರ ಈಜಿಪ್ಟ್​ನಿಂದ ಈರುಳ್ಳಿ ಆಮದು ಮಾಡಿಕೊಳ್ಳುತ್ತಿದೆ. ಅದರ ಗಾತ್ರ ಚೆನ್ನಾಗಿದ್ದರೂ ಇಲ್ಲಿನ ಈರುಳ್ಳಿ ರುಚಿ ಸಿಗುತ್ತಿಲ್ಲ. 3 ಗೆಡ್ಡೆಗೆ ಒಂದು ಕೆಜಿ ಬರುವುದರಿಂದ ಅದನ್ನು ಖರೀದಿಸುವವರ ಸಂಖ್ಯೆ ಕಡಿಮೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
