ಚಾಮರಾಜನಗರ:ಮಹಾಮಾರಿ ಕರೊನಾ ವೈರಸ್​ ನಿಯಂತ್ರಿಸಲು ಜನರು ವಿವಿಧ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ಪೊಲೀಸರು ಸಹ ಹೊರತಾಗಿಲ್ಲ. ಸದ್ಯ ಹೆಚ್ಚು ಪ್ರಚಾರದಲ್ಲಿರುವ ತಂತ್ರವೆಂದರೆ ಅದು ಸ್ಟೀಮ್​.
ಇದೀಗ ಗುಂಡ್ಲುಪೇಟೆ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿದ್ದು, ಆಯುರ್ವೇದಿಕ್​ ಸ್ಟೀಮ್​ ಮೂಲಕ ಕರೊನಾದಿಂದ ರಕ್ಷಣೆ ಪಡೆದುಕೊಳ್ಳಲು ಮುಂದಾಗಿದ್ದಾರೆ.
ಜನರ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮುಂದಾಗಿರುವ ಗುಂಡ್ಲುಪೇಟೆ ಠಾಣಾಧಿಕಾರಿಗಳು ಆಯುರ್ವೇದಿಕ್​ ಸ್ಟೀಮ್​ ಮೊರೆ ಹೋಗಿದ್ದಾರೆ.
ಒಂದು ಕುಕ್ಕರ್​ಗೆ ನೀರು, ಅರಿಶಿನ, ಮೆಣಸು, ಜೀರಿಗೆ ಹಾಕಿ ಕುದಿಸಿ ಸ್ಟೀಮ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಮ್ಮೆಗೆ ನಾಲ್ಕು ಜನ ಪೊಲೀಸರು ಸ್ಟೀಮ್ ತೆಗೆದುಕೊಳ್ಳುವಂತೆ ಪೈಪ್​ಗಳನ್ನು ಅಳವಡಿಸಲಾಗಿದೆ.
ಕರ್ತವ್ಯಕ್ಕೆ ಹಾಜರಾಗುವ ಮೊದಲು ಹಾಗೂ ಕರ್ತವ್ಯ ಮುಗಿಸಿ ಮನೆಗೆ ಹೋಗುವ ಮುನ್ನ ಪೊಲೀಸ್​ ಸಿಬ್ಬಂದಿ ಈ ಆಯುರ್ವೇದಿಕ್ ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ.
ಸಬ್ ಇನ್ಸ್​ಪೆಕ್ಟರ್​ ರಾಜೇಂದ್ರ ಹಾಗೂ ಹೆಡ್ ಕಾನ್ಸ್‌ಟೇಬಲ್ ಸುರೇಶ್ ಅವರ ಯೋಜನೆಗೆ ಪೊಲೀಸ್​ ಸಿಬ್ಬಂದಿ ಫುಲ್​ ಖುಷ್ ಆಗಿದ್ದಾರೆ.(ದಿಗ್ವಿಜಯ ನ್ಯೂಸ್​)

ಯಾರೋ ಬಂದು ಸ್ಫೂರ್ತಿ ತುಂಬಲೆಂದು ಕಾಯಬಾರದು: ಸೆಲೆಬ್ರಿಟಿ ಕಾರ್ನರ್​ನಲ್ಲಿ ತಾರಾ ಅನೂರಾಧಾ

ಕಾಬೂಲ್​ನ ಹೆಣ್ಣುಮಕ್ಕಳ ಶಾಲೆ ಬಳಿ ಬಾಂಬ್​ ಸ್ಫೋಟ: ವಿದ್ಯಾರ್ಥಿನಿಯರು ಸೇರಿ 30 ಮಂದಿ ದುರ್ಮರಣ

ಪಿಎಂ ಕೊಟ್ರೂ ಜನರಿಗೆ ಸಿಗ್ತಿಲ್ಲ!: ಧೂಳು ಹಿಡಿದಿವೆ ಕೇಂದ್ರದಿಂದ ಬಂದ ವೆಂಟಿಲೇಟರ್​ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
