ಬೆಂಗಳೂರು:ಸಂಡೇ ಲಾಕ್​ಡೌನ್​ ನಡುವೆಯೂ ಜಾಲಹಳ್ಳಿ‌ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಗನ್​ ಸದ್ದು ಮಾಡಿದೆ.
ಸೊಲದೇವನಹಳ್ಳಿ ಇನ್​ಸ್ಪೆಕ್ಟರ್ ಶಿವಸ್ವಾಮಿ ಗುರಿಯಿಟ್ಟ ಗಂಡೇಟು ಆರೋಪಿಗಳಿಬ್ಬರ ಕಾಲಿಗೆ ಹೊಕ್ಕಿದ್ದು, ಭರತ್ ಅಲಿಯಾಸ್ ಬಾಬು ಮತ್ತು ಅರುಣ್ ಕುಮಾರ್ ಅಲಿಯಾಸ್ ಕೊಳಕ ಎಂಬುವವರನ್ನು ಬಂಧಿಸಲಾಗಿದೆ.
ಇದನ್ನೂ ಓದಿರಿತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!
ಏನೀ ಪ್ರಕರಣ?:ಹೆಸರುಘಟ್ಟ ನಿವಾಸಿ ರಾಜಶೇಖರ್ ಎಂಬುವವರ ಹತ್ಯೆಗೆ ಸ್ಕೆಚ್​ ಹಾಕಿದ್ದ ದುಷ್ಕರ್ಮಿಗಳ ತಂಡ ಜು.23ರಂದು ದಾಳಿ ನಡೆಸಿತ್ತು. ಈ ಪ್ರಕರಣದ ಬೆನ್ನುಹತ್ತಿದ್ದ
ಸೊಲದೇವನಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಲು ಇಂದು ಬೆಳಗ್ಗೆ ಬಂದಿದ್ದರು. ಈ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ಮಾಡಲು ಯತ್ನಿಸಿದರು. ಹಾಗಾಗಿ ಮೊದಲಿಗೆ ಗಾಳಿಯಲ್ಲಿ ‌ಗುಂಡು ಹಾರಿಸಿದ ಪೊಲೀಸರು ಆರೋಪಿಗಳಿಗೆ ವಾರ್ನ್ ಮಾಡಿದರು. ಆದರೂ ಆರೋಪಿಗಳು ಶರಣಾಗದೆ ಹಲ್ಲೆಗೆ ಮುಂದಾದರು. ಆ ವೇಳೆ ಆರೋಪಿಗಳಾದ ಭರತ್ ಅಲಿಯಾಸ್ ಬಾಬು ಮತ್ತು ಅರುಣ್ ಕುಮಾರ್ ಅಲಿಯಾಸ್ ಕೊಳಕ ಎಂಬುವವರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು. ಘಟನೆಯಲ್ಲಿ‌ ಪೊಲೀಸ್ ಸಿಬ್ಬಂದಿ ಶ್ರೀಧರ್ ಮತ್ತು ಸಿದ್ದಲಿಂಗಮೂರ್ತಿ ಗಾಯಗೊಂಡಿದ್ದಾರೆ.
ಭೂ ವಿವಾದಕ್ಕೆ ಸಂಬಂಧಿಸಿ ರಾಜಶೇಖರ್ ಹತ್ಯೆಗೆ ಶ್ರೀನಿವಾಸ ಎಂಬಾತ 10 ಲಕ್ಷಕ್ಕೆ ಸುಪಾರಿ ನೀಡಿದ್ದ. ಈ ಪೈಕಿ ಒಂದು ಲಕ್ಷ ರೂಪಾಯಿಯನ್ನು ಅಡ್ವಾನ್ಸ್ ನೀಡಿದ್ದ. ಸುಪಾರಿ ಪಡೆದಿದ್ದ ಭರತ್ ಹಾಗೂ ಸಹಚರರು ರಾಜಶೇಖರ್ ಮೇಲೆ ಮೂರು ದಿನಗಳ ಹಿಂದಷ್ಟೇ ಅಟ್ಯಾಕ್ ಮಾಡಿದ್ದರು.
ಇನ್ನೂ 30 ವರ್ಷ ಕರೊನಾ ಹೋಗಲ್ಲ; ಬ್ರಹ್ಮಾಂಡ ಗುರೂಜಿ ಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 16 =
Remember me
