ಧಾರವಾಡ:ದೇಶದ್ರೋಹಿ ಚಟುವಟಿಕೆಗಳ ಹಿಂದೆ ಗುಪ್ಕರ್ ಗ್ಯಾಂಗ್ ಕುಮ್ಮಕ್ಕಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಪುನರ್​ಸ್ಥಾಪಿಸುವ ಉದ್ದೇಶ ಹೊಂದಿರುವ ಗುಪ್ಕರ್ ಒಕ್ಕೂಟಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಸಂವಿಧಾನದ 370ನೇ ವಿಧಿ ತೀವ್ರ ಅಡ್ಡಿಯಾಗಿತ್ತು. ನರೇಂದ್ರ ಮೋದಿ ಸರ್ಕಾರ ಈ ವಿಧಿಯನ್ನು ರದ್ದುಗೊಳಿಸಿ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ 2 ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿದೆ. 370ನೇ ವಿಧಿಯ ನೆರಳಿನಲ್ಲಿ ಜಮ್ಮು ಕಾಶ್ಮೀರವನ್ನು ಅಲ್ಲಿಯ ಕೆಲ ಪಟ್ಟಭದ್ರ ಹಿತಾಸಕ್ತಿಯ ಕುಟುಂಬಗಳು ಅಧೋಗತಿಗೆ ತಂದಿದ್ದವು. ವಿಧಿ ರದ್ದತಿ ನಂತರ ಈ ಕುಟುಂಬಗಳ ಆಟ ನಿಂತಿದೆ ಎಂದರು.
ಗೃಹ ಬಂಧನದಿಂದ ಹೊರ ಬಂದ ನಂತರ ಪಿಡಿಪಿಯ ಮೆಹಬೂಬಾ ಮುಫ್ತಿ, ಎನ್​ಸಿಪಿಯ ಫಾರೂಕ್ ಅಬ್ದುಲ್ಲಾ ಹಾಗೂ ಸಿಪಿಎಂ ಸೇರಿ ಗುಪ್ಕಾರ್ ಒಕ್ಕೂಟ ರಚಿಸಿಕೊಂಡು 370ನೇ ವಿಧಿ ಪುನರ್​ಸ್ಥಾಪಿಸುವುದಾಗಿ ಹೇಳಿವೆ. ಅಲ್ಲದೆ ಈ ಕೆಲಸಕ್ಕೆ ಚೀನಾ ನೆರವನ್ನೂ ಪಡೆಯಲು ಹಿಂಜರಿಯುವುದಿಲ್ಲ ಎಂದು ಹೇಳಿವೆ. ಗುಪ್ಕಾರ್ ಒಕ್ಕೂಟದ ಕೆಲಸಕ್ಕೆ ಬೆಂಬಲ ನೀಡುವುದಾಗಿ ಹೇಳುತ್ತಿರುವುದು ಕಾಂಗ್ರೆಸ್​ನ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಹಾಗಾದರೆ ಕಾಂಗ್ರೆಸ್ ಚೀನಾ ಪರವೇ? ದೇಶದೊ್ರೕಹಿಗಳ ಪರವೇ? ಪ್ರತ್ಯೇಕವಾದಿಗಳ ಪರವೇ ಎಂಬುದನ್ನು ಬಹಿರಂಗಪಡಿಸಲಿ. ರಾಹುಲ್ ಗಾಂಧಿ ಅವರು ಈ ವಿಚಾರದ ಬಗ್ಗೆ ದೇಶದ ಜನತೆ ಮುಂದೆ ತಮ್ಮ ನಿಲುವನ್ನು ಬಹಿರಂಗಪಡಿಸಬೇಕು. ಜಮ್ಮು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಸೌಲಭ್ಯಗಳು ಮನೆಮನೆಗೆ ತಲುಪುತ್ತಿವೆ. ಅಸಹಿಷ್ಣುತೆ ಬಗ್ಗೆ ಮಾತನಾಡಿದವರು ಪ್ರಶಸ್ತಿ ವಾಪಸಿಗಳು ಗುಪ್ಕಾರ್ ಬಗ್ಗೆ ಮಾತನಾಡುತ್ತಿಲ್ಲ. ಆತ್ಮಸಾಕ್ಷಿ ಇದ್ದರೆ ಗುಪ್ಕರ್ ಗ್ಯಾಂಗ್​ಅನ್ನು ಖಂಡಿಸಬೇಕು ಎಂದರು.
ನೀರಾವರಿ ಯೋಜನೆ ಬಗ್ಗೆ ಮಾತುಕತೆ:ಸಚಿವ ರಮೇಶ ಜಾರಕಿಹೊಳಿ ದೆಹಲಿಯಲ್ಲಿ ಓಡಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಜೋಶಿ, ಅವರು ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಲು ಬಂದಿದ್ದರು. ಕೇಂದ್ರ ಸರ್ಕಾರದ ಸಹಾಯ ಕೇಳಲು ಬಂದಿದ್ದರು. ಉಳಿದ ಬೆಳವಣಿಗೆ ಗೊತ್ತಿಲ್ಲ ಎಂದರು.
ರಾಜಕೀಯವಾಗಿ ಮುಗಿಸಿ ಹಾಕುತ್ತೇವೆ:ಮಮತಾ ಬ್ಯಾನರ್ಜಿಯವರನ್ನು ರಾಜಕೀಯವಾಗಿ ಮುಗಿಸಿಹಾಕುತ್ತೇವೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಸಿಪಿಐ(ಎಂ) ರೀತಿಯಲ್ಲೇ ಬೇರೆ ಪಕ್ಷಗಳು ಬೆಳೆಯದಂತೆ ತೃಣಮೂಲ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ 10ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕೊಂದುಹಾಕಲಾಗಿದೆ. ಇದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ. ಮಮತಾ ಬ್ಯಾನರ್ಜಿ ಅವರನ್ನು ಬರುವ ಚುನಾವಣೆಯಲ್ಲಿ ರಾಜಕೀಯವಾಗಿಯೇ ಮುಗಿಸುತ್ತೇವೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fourteen =
Remember me
