ಬೆಂಗಳೂರು:ತಮ್ಮ ಕೊಳಲಿನ ನಾದದಿಂದ ಹಿಂದುಸ್ಥಾನಿ ಪರಂಪರೆಯನ್ನು ಸಂಗೀತ ಪ್ರಿಯರಿಗೆ ಹಂಚಿದ್ದ ದಿವಂಗತ ಪಂಡಿತ್ ವೆಂಕಟೇಶ್ ಗೋಡ್ಖಿಂಡಿ ಸ್ಮರಣಾರ್ಥ ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯದ ಸುಮಾರು 200 ವಿದ್ಯಾರ್ಥಿಗಳು ಇದೇ ಶನಿವಾರ (ಆ.10) ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸಂಜೋಗ್ ಸಂಸ್ಥೆ ಹಾಗೂ ಗೋಡ್ಕಿಂಡಿ ಮ್ಯೂಸಿಕ್ ಸಹಯೋಗದಲ್ಲಿ ಶನಿವಾರ ಮಧ್ಯಾಹ್ನ 4 ಗಂಟೆಯಿಂದ ಮಲ್ಲೇಶ್ವರಂನ ವೈಯಾಲಿಕಾವಲ್​ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಎಲ್ಲರಿಗೂ ಪ್ರವೇಶ ಉಚಿತವಾಗಿರಲಿದೆ.
ಈ ವಿಶೇಷ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಹಾಸ್ಯಗಾರರು ಹಾಗೂ ಲೇಖಕರಾದ ಶ್ರೀ ಗಂಗಾವತಿ ಪ್ರಾಣೇಶ್​ ಅವರು ಆಗಮಿಸಲಿದ್ದಾರೆ. ಖ್ಯಾತ ಮೃದಂಗ ವಾದಕರಾದ ವಿದ್ವಾನ್​ ಶ್ರೀ ಆನೂರು ಅನಂತಕೃಷ್ಣ ಶರ್ಮ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಗುರುವಂದನಾ ಸಮಾರಂಭದ ವೇದಿಕೆಯಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ಸಹ ನಡೆಯಲಿದೆ. ಪಂಡಿತ್​ ಯೋಗೇಶ್​ ಸಂಸಿ (ಸಹಕಾರ), ಶ್ರೀ ಯಶವಂತ್​ ವೈಷ್ಣವ್​ (ತಬಲಾ) ಮತ್ತು ಶ್ರೀ ಮಿಲಿಂದ್​ ಕುಲಕರ್ಣಿ (ಹಾರ್ಮೋನಿಯಂ) ತಂಡದಿಂದ ತಬಲಾ ವಾದನ ಕಾರ್ಯಕ್ರಮ ಜರುಗಲಿದೆ. ಅಲ್ಲದೆ, ಡಾ. ಪಂಡಿತ್ ಪ್ರವೀಣ್ ಗೋಡ್ಖಿಂಡಿ, ಪಂಡಿತ್ ಯೋಗೇಶ್ ಸಂಸಿ, ಶ್ರೀ ಷಡಜ್ ಗೋಡ್ಖಿಂಡಿ ಹಾಗೂ ಶ್ರೀ ಯಶವಂತ ವೈಷ್ಣವ್ ಅವರಿಂದ ವಿಶೇಷ ಜುಗಲ್ಬಂದಿ ಕಾರ್ಯಕ್ರಮ ನಡೆಯಲಿದೆ.
ಏನೇನು ಕಾರ್ಯಕ್ರಮಗಳು ನಡೆಯಲಿವೆ?* ಪ್ರಾರ್ಥನೆ• ಬಾನ್ಸುರಿ ಸಮೂಹ ವಾದನ-ರಾಗ ಯಮನ್• ಸಮೂಹ ಗಾಯನ – ರಾಗ ಮಾಲಕೌಂಸ್• ಬಾನ್ಸುರಿ ಸಮೂಹ ವಾದನ – ರಾಗ ಭೂಪಾಲಿ• ಸಮೂಹ ಗಾಯನ – ರಾಗ ದುರ್ಗಾ• ಬಾನ್ಸುರಿ ಸಮೂಹ ವಾದನ – ರಾಗ ನಟ್ ಭೈರವ್• ಜಸರಂಗಿ ಜುಗಲ್ಬಂದಿ – ಸಂಜೋಗ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾಯನ. ಬಾನ್ಸುರಿ ಹಾಗೂ ತಬಲಾ ವಾದನದ ವಿಶೇಷ ಪ್ರಸ್ತುತಿ ಇರಲಿದ್ದು, ಇದಕ್ಕೆ ಡಾ. ಪಂಡಿತ್ ಪ್ರವೀಣ್ ಗೋಡ್ಖಿಂಡಿ ಸಂಗೀತ ನಿರ್ದೇಶನ ಮಾಡಲಿದ್ದಾರೆ.


ಬಾಂಗ್ಲಾ ದಂಗೆಯ ಹಿಂದೆ ಪಾಕ್​-ಚೀನಾ ಕೈವಾಡ? ಭಾರತದ ನೆರೆರಾಷ್ಟ್ರಗಳೇ ಟಾರ್ಗೆಟ್​! ಇದಕ್ಕಿಂತಲೂ ಉದಾಹರಣೆ ಬೇಕಾ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:17 + seven =
Remember me
