ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಕರೊನಾ ಸಮಯದಲ್ಲಿ ಸರ್ಕಾರಗಳು ಹೇಳಿರುವ ನಿಯಮ ಪಾಲನೆ ಮಾಡದಿದ್ದರೆ ಎಂಥ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಇಂದಿನ ಗುರುವಾಣಿಯಲ್ಲಿ ಹೇಳಿದ್ದಾರೆ.
ಕೆಲವರಿಗೆ ನಿಯಮ ಪಾಲನೆ ಮಾಡುವುದು ಎಂದರೆ ಆಗುವುದಿಲ್ಲ. ನಾವ್ಯಾಕೆ ಮಾಡಬೇಕು, ನಮಗೇನು ಆಗುವುದಿಲ್ಲ ಎನ್ನುವವರೇ ಹೆಚ್ಚು. ಕರೊನಾ ಸಂದರ್ಭದಲ್ಲಿಯೂ ಇದೇ ಕಾರಣಕ್ಕೆ ಮನೆಯೊಳಕ್ಕೆ ಇರದೆ ಹೊರಕ್ಕೆ ಬಂದು ತಮ್ಮ ಪ್ರಾಣಕ್ಕೆ ಮಾತ್ರವಲ್ಲದೇ, ಕುಟುಂಬದವರ ಪ್ರಾಣಕ್ಕೂ ತೊಂದರೆ ಮಾಡುತ್ತಿದ್ದಾರೆ.
ಹೆಲ್ಮೆಟ್​ ಹಾಕಿ ಕಾರಿನ ಸೀಟಿನ ಬೆಲ್ಟ್​ ಧರಿಸಿ ಎಂದು ಸರ್ಕಾರ, ಪೊಲೀಸರು ಹೇಳಿದರೆ, ನಾನ್ಯಾಕೆ ಮಾಡಬೇಕು, ನಾನು ವಿಐಪಿ, ಎಷ್ಟು ದಂಡ ಬೇಕು ನಿನಗೆ ತೆಗೆದುಕೋ ಎನ್ನುವಂಥ ಮೊಂಡುತನದ ಪ್ರದರ್ಶನ ಕೆಲವರು ಮಾಡುತ್ತಾರೆ. ಇಂಥ ಕಾರಣಕ್ಕಾಗಿಯೇ ಕರೊನಾದಿಂದ ಸಾಯುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತದಲ್ಲಿ ಸಾಯುತ್ತಿದ್ದಾರೆ. ಹೆಲ್ಮೆಟ್​ ಧರಿಸಪ್ಪ ಎಂದರೆ ನಿನ್ನನ್ನು ಟ್ರಾನ್ಸ್​ಫರ್​ ಮಾಡಿಸಿಬಿಡುತ್ತೇನೆ ಎಂದು ಪೊಲೀಸರಿಗೆ ಬೆದರಿಕೆ ಹಾಕುತ್ತಾರೆ, ಆದರೆ ಸ್ವಲ್ಪ ಹೆಚ್ಚೂ ಕಡಿಮೆ ಆದರೆ ಬಾರದ ಲೋಕಕ್ಕೆ ಅವರೇ ಟ್ರಾನ್ಸ್​ಫರ್​ ಆಗುತ್ತಾರೆ. ಇದೆಲ್ಲಾ ಬೇಕಾ?
ಕರೊನಾ ಪ್ರವಾಹದಲ್ಲಿ ಎಲ್ಲರೂ ಕೊಚ್ಚಿಕೊಂಡು ಹೋಗುತ್ತಿದ್ದೇವೆ. ಇಂಥ ಸಮಯದಲ್ಲಿ ಮನೆಯಿಂದ ಹೊರಕ್ಕೆ ಬರದೇ ಮನೆಯೊಳಗೇ ಆರಾಮಾಗಿ ಇರಿ. ಹೆಲ್ಮೆಟ್​ ಹಾಕಿಕೊಳ್ಳದಿದ್ದರೆ ದಂಡ ಕಟ್ಟಬಹುದು, ಆದರೆ ಕರೊನಾವನ್ನು ದೇಹದೊಳಕ್ಕೆ ಹೊಕ್ಕಿಸಿಕೊಂಡರೆ ಪ್ರಾಣದ ದಂಡ ತೆರಬೇಕಾಗುತ್ತದೆ. ಏನು ಮಾಡಬೇಡ ಎಂದು ಬಲ್ಲವರು ಹೇಳುತ್ತಾರೋ, ಅದನ್ನು ಮಾಡಬೇಡಿ. ನಿಮ್ಮ ಪ್ರಾಣದ ಬೆಲೆಯನ್ನು ಅರ್ಥ ಮಾಡಿಕೊಳ್ಳಿ.
ಅವರ ಪ್ರವಚನದ ಪೂರ್ಣಪಾಠಕ್ಕೆ ಕೆಳಗಿನ ವಿಡಿಯೋ ಲಿಂಕ್​ಗಳಲ್ಲಿ ವೀಕ್ಷಿಸಬಹುದು.
https://www.facebook.com/VVani4U/videos/247646223254355/

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:6 − 4 =
Remember me
