ಆನೇಕಲ್:ಉತ್ತಮ ಮಳೆಯಾಗುತ್ತಿರುವುದರಿಂದ ತಾಲೂಕಿನ ಮುತ್ಯಾಲಮಡು ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದ್ದರೂ ಮೂಲ ಸೌಲಭ್ಯಗಳ ಕೊರತೆಯಿಂದ ಮೂಲೆಗುಂಪಾಗಿದೆ. ಸುಮಾರು 10 ದಿನದಿಂದ ಮಳೆ ಆಗುತ್ತಿರುವುದರಿಂದ ಇಲ್ಲಿನ ಜಲಪಾತ ಧುಮ್ಮಿಕುತ್ತಿದ್ದು, ಪ್ರವಾಸಿಗರು ನೀರಿನಲ್ಲಿ ಆಟವಾಡಿ ಕಾಲ ಕಳೆಯುತ್ತಿದ್ದಾರೆ. ಜಲಪಾತ ಕಣ್ತುಂಬಿಕೊಳ್ಳಲು ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪ್ರವಾಸಿಗರಿಗೆ ತಕ್ಕಂತೆ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಬೆಂಗಳೂರಿಗೆ ಸಮೀಪವಿರುವ ಜಲಪಾತ ಇದಾಗಿದ್ದು, ಸುಣವಾರ ಗೇಟ್​ನಿಂದ ಮುತ್ಯಾಲಮಡುವರೆಗಿನ ಸುಮಾರು ಎರಡು ಕಿಮೀ ರಸ್ತೆ ಹಾಳಾಗಿದ್ದು, ಸಂಚಾರ ಕಷ್ಟಸಾಧ್ಯ ಎನ್ನುವಂತಾಗಿದೆ.
ಆಹಾರ ರುಚಿಯಾಗಿಲ್ಲ:ಮುತ್ಯಾಲಮಡು ಪ್ರವಾಸಿ ತಾಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹೋಟೆಲ್ ಅಭಿವೃದ್ಧಿಪಡಿಸಲಾಗಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಈ ಹೋಟೆಲ್​ನ ಊಟದ ರುಚಿಗೆ ಬೇಸತ್ತು ಹೋಗಿದ್ದು, ರುಚಿಯಾದ ಆಹಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಮುತ್ಯಾಲಮಡು ಪ್ರವಾಸಿ ತಾಣವನ್ನು ಅಭಿವೃದ್ಧಿ ಮಾಡಲು ಆನೇಕಲ್​ನಲ್ಲಿ ಗೆದ್ದು ಬಂದ ಬಹುತೇಕರು ನಿರ್ಲಕ್ಷ್ಯ ಮಾಡಿದ್ದೇ ಹೆಚ್ಚು, ಇದರಿಂದಾಗಿ ಇರುವ ಒಂದು ಪ್ರವಾಸಿ ತಾಣವೂ ಅಭಿವೃದ್ಧಿ ಕಾಣದೆ ಸೊರಗಿದೆ. ಮುತ್ಯಾಲಮಡುವಿನ ಕಣಿವೆಯ ಮೇಲ್ಭಾಗದಲ್ಲಿ ನಿರ್ವಿುಸಿರುವ ಉದ್ಯಾನ ನಿರ್ವಹಣೆಯಿಲ್ಲದೇ ಹಾಳಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲ್​ಗಳು, ಪ್ಲಾಸ್ಟಿಕ್ ತ್ಯಾಜ್ಯ ಎಸೆಯಲಾಗಿದೆ. ವಾರಾಂತ್ಯದಲ್ಲಿ ನೀರಿನ ಕಾರಂಜಿ ವ್ಯವಸ್ಥೆ ಮಾಡಿದರೆ ಉದ್ಯಾನದಲ್ಲಿ ಕುಳಿತು ನೋಡಲು ಅನುಕೂಲವಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಾಳಜಿ ವಹಿಸಬೇಕು. ಮಳೆಗಾಲದಲ್ಲಿ ಜನರನ್ನು ಆಕರ್ಷಿಸುವ ಮುತ್ಯಾಲಮಡುವು ಬೇಸಿಗೆಕಾಲದಲ್ಲಿ ನೀರಿಲ್ಲದೇ ಬಣಗುಡುತ್ತದೆ. ವರ್ಷಪೂರ್ತಿ ಪ್ರವಾಸಿಗರು ಈ ತಾಣದಲ್ಲಿ ವಿಹರಿಸಲು ಅನುಕೂಲವಾದ ಸೌಲಭ್ಯ ಕಲ್ಪಿಸಿಕೊಡುವ ಅವಶ್ಯಕತೆಯಿದೆ.
ಆನೇಕಲ್ ವಿಧಾನಸಭಾ ಕ್ಷೇತ್ರದ ಪ್ರವಾಸಿತಾಣ ಮುತ್ಯಾಲಮಡುವಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಆಗಬೇಕಾದ ಕಾರ್ಯಗಳ ಬಗ್ಗೆ ಪ್ರಸ್ತಾಪಿಸಿ ಮನವಿ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಸಚಿವರನ್ನು ಭೇಟಿ ಮಾಡಿ ತ್ವರಿತ ಜಾರಿಗೆ ಕ್ರಮ ಕೈಗೊಂಡು ಪ್ರವಾಸಿತಾಣವನ್ನು ಅಭಿವೃದ್ಧಿ ಪಡಿಸಲಾಗುವುದು.
| ಬಿ.ಶಿವಣ್ಣ ಆನೇಕಲ್ ಶಾಸಕ
ಭದ್ರತೆ ಇಲ್ಲ
ಮುತ್ಯಾಲಮಡು ಜಲಪಾತ ನೋಡಲು ಬರುವ ಪ್ರವಾಸಿಗರು ಹಾಗೂ ಪ್ರೇಮಿಗಳಿಗೆ ಆಗಾಗ ಇಲ್ಲಿ ಮದ್ಯವ್ಯಸನಿಗಳು ಕಿರುಕುಳ ನೀಡುವ ಆರೋಪ ಕೇಳುಬರುತ್ತದೆ. ಪೊಲೀಸ್ ವ್ಯವಸ್ಥೆ ಇಲ್ಲದೆ ಮುತ್ಯಾಲಮಡುವಿನಲ್ಲಿ ಯಾರಿಗೂ ಭದ್ರತೆ ಇಲ್ಲದಂತಾಗಿದೆ. ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿರುವ ಮುತ್ತಿನ ಮಡುವು ಸರಿಯಾದ ನಿರ್ವಹಣೆ ಇಲ್ಲದೆ ಸೊರಗಿದೆ, ಪ್ರವಾಸಿ ತಾಣದ ಅಕ್ಕಪಕ್ಕದಲ್ಲಿ ಬಡಾವಣೆಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ಮುತ್ಯಾಲಮಡು ಹೆಸರು ಉಳಿಯುತ್ತದೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಎದುರಾಗುತ್ತಿದೆ.
ನಾಚಿಕೆಯಾಗಬೇಕು ನಿಮಗೆ… ಶಾಹೀನ್ ಅಫ್ರಿದಿ ವರ್ತನೆಗೆ ಛೀಮಾರಿ ಹಾಕಿದ ಕ್ರಿಕೆಟ್ ಅಭಿಮಾನಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 13 =
Remember me
