ಉತ್ತರಕನ್ನಡ:ಇಲ್ಲೊಬ್ಬ ಯುವಕ ಬೈಕ್​ ಹೇಗಿದೆ ನೋಡ್ತೀನಿ ಎಂದವನಿಗೆ ಕೀಲಿ ಕೈ ಕೊಟ್ಟು ಬೈಕ್​ ಕಳೆದುಕೊಂಡಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಬಾಳೆಗುಳಿ ಬಳಿ ಈ ಘಟನೆ ನಡೆದಿದೆ.
‘ನಾನೂ ಕೆಟಿಎಂ ಬೈಕ್​ ಖರೀದಿಸಬೇಕು ಅಂತ ಇದ್ದೇನೆ. ಒಂದ್ಸಲ ಬೈಕ್​ ಹೇಗಿದೆ ನೋಡಬಹುದಾ. ಕೀಲಿ ಕೈ ಕೊಡಿ, ಓಡಿಸಿ ನೋಡ್ತೀನಿ. ಒಂದು ರೌಂಡ್​​ ಸವಾರಿ ಮಾಡ್ತೀನಿ. ಬೈಕ್​ ಹೇಗಿದೆ ಅಂತ ಗೊತ್ತಾಗುತ್ತೆ’ ಎಂದು ಈ ಭೂಪ ಕೇಳಿದ್ದಾನೆ. ಇರಬಹುದೇನೋ ಅಂತ ನಂಬಿ ಅರವಿಂದ ತಾಂಡೇಲ್​ ಎನ್ನುವಾತ ತನ್ನ ಬೈಕ್​ ಮತ್ತು ಕೀಯನ್ನು ಕಳ್ಳನ ಕೈಗೊಪ್ಪಿಸಿದ್ದಾನೆ.
ಇದನ್ನೇ ಅವಕಾಶ ಎಂದು ಭಾವಿಸಿದ ಈ ಭೂಪ ಕೆಟಿಎಂ ಚಲಾಯಿಸಿಕೊಂಡು ಫಾಸ್ಟ್​ ಆಗಿ ಪರಾರಿ ಆಗಿದ್ದಾನೆ. ಎಷ್ಟು ಹೊತ್ತಾದರೂ ಬೈಕ್​ ತೆಗೆದುಕೊಂಡು ಹೋದ ವ್ಯಕ್ತಿ ಬಂದಿಲ್ಲ ಎಂದು ಅರವಿಂದ ತಾಂಡೇಲ್​ ಚಿಂತಿತರಾಗಿದ್ದಾರೆ. ಕಡೆಗೆ ಈ ಬೈಕ್​ ಕಾಯುತ್ತಾ ಕುಳಿತರೆ ಹಿಂದಕ್ಕೆ ಬರಲ್ಲ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುರ್ವಿಧಿ ಏನೆಂದರೆ ಕಳೆದ ವಾರವಷ್ಟೇ ಎರಡೂವರೆ ಲಕ್ಷ ಹಣ ನೀಡಿ ಅರವಿಂದ ತಾಂಡೇಲ್​ ಕೆಟಿಎಮ್ ಬೈಕ್ ಖರೀದಿಸಿದ್ದರು.
ಕಳ್ಳ ಬೈಕ್ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಪೊಲೀಸರು ಕಳ್ಳನನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
