ಬೆಂಗಳೂರು: ಕರೊನಾ ಭೀತಿಯ ಕಾರಣಕ್ಕೆ ಸುಮಾರು ಒಂದು ತಿಂಗಳು ಕಾರ್ಯಾಚರಣೆ ಸ್ಥಗಿತದ ನಂತರ ಎಚ್​ಎಎಲ್ ಉತ್ಪಾದನೆ ಏ. 28ರಿಂದ ಸಹಜ ಸ್ಥಿತಿಗೆ ಹಿಂದಿರುಗಿದೆ. ದೇಶಾದ್ಯಂತ ಎಲ್ಲ ಘಟಕಗಳಲ್ಲೂ ಸಿಬ್ಬಂದಿಯ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗ ಸೂಚಿಗಳನ್ನು ಪಾಲಿಸುವುದಕ್ಕಷ್ಟೆ ಸೀಮಿತವಾಗದೆ, ಎಚ್​ಎಎಲ್​ನಿಂದಲೇ ಅಭಿವೃದ್ಧಿಪಡಿಸಿದ ಪೆಡಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯಂತಹ ವಿನೂತನ ಕ್ರಮಗಳನ್ನೂ ಅಳವಡಿಸಿಕೊಳ್ಳಲಾಗಿದೆ.
ಇದನ್ನೂ ಓದಿಬೆಂಕಿಯಿಂದ ಬಾಣಲೆಗೆ: ಕೂಲಿಗೆ ಹೋಗುವಂತಿಲ್ಲ, ಬೆಂಗಳೂರು ಬಿಟ್ಟರೂ ಬವಣೆ ತಪ್ಪಿಲ್ಲ
ಸ್ಟ್ಯಾಗರ್ಡ್​  ಶಿಫ್ಟ್, ಬಯೋಮೆಟ್ರಿಕ್ ಹಾಜರಾತಿ ರದ್ದು ಹಾಗೂ ಕೆಲಸದ ಪ್ರದೇಶಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವಂತಹ ಸಾಮಾನ್ಯ ಕಾರ್ಯನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಎಲ್ಲ ಸಿಬ್ಬಂದಿಗೆ ಮುಖಗವಸು ಹಾಗೂ ಕೈಗವಸುಗಳನ್ನು ವಿತರಣೆ ಮಾಡಲಾಗಿದ್ದು, ಕೆಲಸದ ಸ್ಥಳ ದಲ್ಲಿ ಮುಖಗವಸು ಧರಿಸುವಿಕೆಯನ್ನು ಅಭ್ಯಾಸ ಮಾಡಿಕೊಳ್ಳಲಾಗಿದೆ. ಸುರಕ್ಷಿತ ಸೋಂಕುನಿವಾರಕಗಳನ್ನು ಬಳಸಿ ಕಾರ್ಯ ಸ್ಥಳ ಹಾಗೂ ಉಪಕರಣಗಳನ್ನು ಸೋಂಕುರಹಿತಗೊಳಿಸಲಾಗಿದೆ. ಕೆಲಸದ ಸ್ಥಳ ಹಾಗೂ ಕಚೇರಿ ಪ್ರವೇಶ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ನೈರ್ಮಲ್ಯಕಗಳನ್ನು ಇರಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಎಲ್ಲ ಸಿಬ್ಬಂದಿಯ ದೇಹದ ಉಷ್ಣಾಂಶ ತಪಾಸಣೆ ನಡೆಸಲಾಗುತ್ತಿದೆ. ಭೌತಿಕ ಸಂವಹನ ಕಡಿಮೆ ಮಾಡುವ ಸಲುವಾಗಿ ವಿಡಿಯೋ ಕಾನ್ಪರೆನ್ಸಿಂಗ್ ಹಾಗೂ ಆನ್​ಲೈನ್ ಅಪ್ಲಿಕೇಷನ್​ಗಳನ್ನು (ಇ-ಫೈಲಿಂಗ್) ಪರಿಚಯಿಸಲಾಗಿದೆ. ಸಾಮಾನ್ಯ ಆರೋಗ್ಯ ಸೂಚನೆಗಳು ಹಾಗೂ ನೈರ್ಮಲ್ಯ ಅಭ್ಯಾಸಗಳ ಪೋಸ್ಟರ್​ಗಳನ್ನು ಕೆಲಸದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದೆ. ವಿಭಾಗಗಳು ಹಾಗೂ ಕಚೇರಿಗಳಲ್ಲಿ ಕೋವಿಡ್ ಕುರಿತ ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
ಅಮ್ಮಾ.. ಈ ಎರಡಕ್ಷರದಲ್ಲಿ ಎಂತಹ ಶಕ್ತಿ: ಓದುಗರ ಭಾವನೆ ವ್ಯಕ್ತವಾಗಿದೆ ಇಲ್ಲಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eleven =
Remember me
