ಧಾರವಾಡ:ಕರ್ನಾಟಕ ವಿವಿ ವಿಶ್ರಾಂತ ಕುಲಪತಿ ಡಾ. ಎಚ್.ಬಿ. ವಾಲೀಕಾರ ಸರಳ ಸೂತ್ರದ ಮೂಲಕ ಗಣಿತ ವಿಷಯವನ್ನು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಡಾ. ವಾಲೀಕಾರ ಗಣಿತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಇದೀಗ ಗಣಿತವನ್ನು ಮಕ್ಕಳು ಸುಲಭವಾಗಿ ಕಲಿಯಲಿ ಎಂಬ ಕಾರಣಕ್ಕೆ ಆನ್​ಲೈನ್ ಮೂಲಕವೇ ಉಚಿತ ತರಗತಿ ಪ್ರಾರಂಭಿಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ರಾಜ್ಯ ಗಣಿತ ಪರಿಷತ್ ಮೂಲಕ ಚಾಲನೆಗೊಳ್ಳುತ್ತಿರುವ ಡಿಡಿಡಿ.ಡಿಚ್ಝಜಿkಚ್ಟಜಚಿ.ಟಞ ವೆಬ್​ಸೈಟ್​ನಲ್ಲಿ ಈಗಾಗಲೇ 300 ವೀಡಿಯೋಗಳನ್ನು ಅಳವಡಿಸಲಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎನ್​ಸಿಇಆರ್​ಟಿ ಪಠ್ಯಕ್ರಮದ ಪಾಠಗಳ ವಿಡಿಯೋಗಳು ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಾಗಲಿವೆ.
ಕಡಿಮೆ ಅವಧಿಯಲ್ಲೇ ಸರಳವಾಗಿ ಇಡೀ ಪಾಠವನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪಾಠಗಳೂ ಈ ವೆಬ್​ಸೈಟ್​ನಲ್ಲಿ ಲಭ್ಯವಿವೆ. ಡಾ. ವಾಲೀಕಾರ ಅವರ ಈ ಪ್ರಯತ್ನವನ್ನು ಶಿಕ್ಷಣ ತಜ್ಞರು ಶ್ಲಾಘಿಸಿದ್ದಾರೆ.
ಪ್ರಲ್ಹಾದ ಜೋಶಿ ಚಾಲನೆ:ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗಣಿತ ಪರಿಷತ್ ಹಾಗೂ ಯುನಿವರ್ಸಿಟಿ ಪಬ್ಲಿಕ್ ಸ್ಕೂಲ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವೆಬ್​ಸೈಟ್ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಜೀವನದಲ್ಲಿ ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಗಣಿತ ವಿಷಯಗಳು ಕಠಿಣ ಎನಿಸಿವೆ. ಆದರೆ ಕಾಲೇಜ್, ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಣ ನೀಡಿದ ವಾಲೀಕಾರ ಅವರು ಯಾವುದೇ ಕೀಳರಿಮೆ ಇಲ್ಲದೆ, ಗಣಿತ ವಿಷಯವನ್ನು ಶುದ್ಧ ಕನ್ನಡದಲ್ಲಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡಿದ್ದಾರೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಡಿಜಿಟಲ್ ಯುಗದಲ್ಲಿ ಸಾಕಷ್ಟು ಅವಕಾಶಗಳಿವೆ. ನಮ್ಮಲ್ಲಿನ ಕೌಶಲ ವೃದ್ಧಿಸಿಕೊಂಡು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಈ ಗಣಿತ ವಿಡಿಯೋಗಳು ಮಾರ್ಗದರ್ಶನವಾಗಲಿ ಎಂದು ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ವಾಲೀಕಾರ ಅವರು ನಿವೃತ್ತಿ ನಂತರವೂ ಮಕ್ಕಳ ಶಿಕ್ಷಣ ದೃಷ್ಟಿಯಿಂದ ಗಣಿತ ಪಠ್ಯದ ವಿಡಿಯೋ ಮಾಡಿದ್ದು ಅಭಿನಂದನಾರ್ಹ ಎಂದರು.
ವಿಶ್ರಾಂತ ಕುಲಪತಿ ಡಾ. ಎಚ್.ಬಿ. ವಾಲೀಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಸಿ ಅಂತರ್ಜಾಲದಲ್ಲಿ ಪಾಠ ಕಲಿಯಲು ಇಂಗ್ಲಿಷ್, ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಸಾಕಷ್ಟು ಅವಕಾಶವಿದೆ. ಆದರೆ ಕನ್ನಡದಲ್ಲಿ ವಿರಳವಾಗಿದ್ದನ್ನು ಕಂಡು ಈ ಕೆಲಸಕ್ಕೆ ಕೈ ಹಾಕಿದೆ. ಇಂತಹ ವಿಡಿಯೋಗಳನ್ನು ಮಾಡುವಲ್ಲಿ ಪ್ರಖ್ಯಾತವಾಗಿರುವ ಅಮೆರಿಕದ ಖಾನ್ ಅಕಾಡೆಮಿಗಿಂತಲೂ ಉತ್ತಮ ತಂತ್ರಜ್ಞಾನ ಬಳಿಸಿ ಈ ವಿಡಿಯೋಗಳನ್ನು ಮಾಡಿದ್ದೇವೆ. ಕನ್ನಡದಲ್ಲಿ ಗಣಿತ ಪಠ್ಯದ ವಿಡಿಯೋಗಳನ್ನು ಮಾಡಲು ಡಾ. ವಿಜಯ ಸಂಕೇಶ್ವರ ಅವರೇ ಕಾರಣ-ಪ್ರೇರಣೆಯಾಗಿದ್ದಾರೆ. ವಿಡಿಯೊ ರಚನೆ, ಎಡಿಟಿಂಗ್ ತಂತ್ರಜ್ಞಾನದ ಬಗ್ಗೆ ಅರಿತುಕೊಳ್ಳಲು ಸಹಾಯ ಮಾಡಿದ್ದಾರೆ. ಗಣಿತ ಪರಿಷತ್ ಪದಾಧಿಕಾರಿಗಳು ಸೇರಿ ಅನೇಕರು ನೆರವಾಗಿದ್ದಾರೆ ಎಂದು ಡಾ. ವಾಲೀಕಾರ ತಿಳಿಸಿದರು.
ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ, ಕರ್ನಾಟಕ ರಾಜ್ಯ ಗಣಿತ ಪರಿಷತ್ ಅಧ್ಯಕ್ಷ ಬಿ.ಎಸ್. ಪಾಟೀಲ, ಪ್ರಧಾನ ಕಾರ್ಯದರ್ಶಿ ಡಾ. ವೀರಣ್ಣ ಬೋಳಿಶೆಟ್ಟಿ, ಆರ್.ಎಸ್. ದೇಶಪಾಂಡೆ, ಡಾ. ಡಿ.ಎಂ. ಹಿರೇಮಠ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ಬಿ. ಗುಡಸಿ ಸ್ವಾಗತಿಸಿದರು.
ಗಣಿತದಷ್ಟು ಕಷ್ಟ ಹಾಗೂ ಸರಳವಾದ ವಿಷಯ ಮತ್ತೊಂದಿಲ್ಲ. ಗಣಿತ ಕೇವಲ ಪರೀಕ್ಷೆಗೆ ಮಾತ್ರವಲ್ಲದೆ, ಇಡೀ ಜೀವನಕ್ಕೆ ಅಗತ್ಯ. ಗಣಿತವನ್ನು ಜೀವನದಲ್ಲಿ ಅಳವಡಿಸಿಕೊಂಡಷ್ಟೂ ಒಳ್ಳೆಯದಾಗುತ್ತದೆ. ವಾಲೀಕಾರ ಅವರು ಸರಳವಾಗಿ ಕನ್ನಡದಲ್ಲಿ ಮಾಡಿರುವ ಈ ವಿಡಿಯೋಗಳು ಬಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗಲಿವೆ. ಸಾಮಾಜಿಕ ದೃಷ್ಟಿಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಕಾರ್ಯ ಮಾಡಿದ್ದು ಮಕ್ಕಳಿಗೆ ಮಾತ್ರವಲ್ಲದೆ ಗಣಿತ ಶಿಕ್ಷಕರಿಗೂ ಅನುಕೂಲವಾಗಲಿದೆ.
| ಡಾ. ವಿಜಯ ಸಂಕೇಶ್ವರ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 4 =
Remember me
