ಆನೇಕಲ್:ಎಚ್​​.ಡಿ ಕುಮಾರಸ್ವಾಮಿ ಮೇ13 ನೇ ತಾರೀಖು ಮುಖ್ಯಮಂತ್ರಿ ಆಗುವುದು ಖಚಿತ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಬನ್ನೇರುಘಟ್ಟದಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಹೇಳಿದ್ದಾರೆ.
ಜೆಡಿಎಸ್ ಸಮಾವೇಶದ ಬಳಿಕ ಮಾತನಡಿದ ಅವರು, ಮೋದಿಯವರು ಜನರತ್ತ ಕೈಬೀಸಿದರೆ ಜನರು ಕುಮಾರಣ್ಣ  ಎನ್ನುತ್ತಿದ್ದಾರೆ. ಮುಂದಿನ ತಿಂಗಳ ಎಂಟನೇ ತಾರೀಖಿನವರೆಗೆ ರಾಜ್ಯದ ನಾಲವತ್ತು ಕಡೆ ಪ್ರವಾಸ ಮಾಡುತ್ತೇನೆ. ಬೆಂ.ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜಗೋಪಾಲರೆಡ್ಡಿ ಪರ ಮತಯಾಚನೆ ಮಾಡಲು ಬಂದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಬ್ಯೂಟಿ ಪಾರ್ಲರ್‌ಗೆ ಹೋಗದಂತೆ ಪತಿ ತಡೆದಿದ್ದಕ್ಕೆ ಪ್ರಾಣ ಕಳೆದುಕೊಂಡ ಮಹಿಳೆ
ಯಾವಾಗಲೂ ಕುರ್ಚಿಯ ಮೇಲೆ ಕುಳಿತು ಮಾತನಾಡುತ್ತಿದ್ದೇ. ಆದರೆ ಬೆ.ದಕ್ಷಿಣ ಅಭ್ಯರ್ಥಿ ನಡವಳಿಕೆ, ನೆರೆದಿದ್ದ ಜನರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದು, ನನ್ನನ್ನು ನಿಂತು ಮಾತನಾಡುವಂತೆ ಮಾಡಿತು. ಬೆಂ.ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿಯ ಬೃಹತ್ ಸಮಾವೇಶ ಎಂದು ಕಂಡಿಲ್ಲ. ಜೆಡಿಎಸ್ ಅಭ್ಯರ್ಥಿಯನ್ನ ಇಲ್ಲಿನ ಮತದಾರರು ಗೆಲ್ಲಿಸಿ ಕಳುಹಿಸುತ್ತಾರೆ ಎಂದು ಹೇಳುವ ಮೂಲಕವಾಗಿ ತಮ್ಮ ಪಕ್ಷ ಗೆಲ್ಲುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ:ಹಿರಿಯ ನಟ ದ್ವಾರಕೀಶ್ ನಿಧನ ಎಂದು ಅಪಪ್ರಚಾರ; ನಗುನಗುತ್ತಾ ಗಟ್ಟಿಮುಟ್ಟಾಗಿದ್ದೇನೆ ಸ್ಪಷ್ಟನೆ ನೀಡಿದ ನಟ!
ಕುಮಾರಣ್ಣ ಮೇ13 ನೇ ತಾರೀಖು ಮುಖ್ಯಮಂತ್ರಿ ಆಗುವುದು ಖಚಿತ. 8ನೇ ತಾರೀಖಿನವರೆಗೆ ಪ್ರವಾಸ ಮಾಡುತ್ತೇನೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವು ಉಳಿಯಬೇಕು ಬೆಳೆಯಬೇಕು. ತಮಿಳುನಾಡಿನಲ್ಲಿ ಬಿಜೆಪಿ,ಕಾಂಗ್ರೆಸ್ ಪಕ್ಷಗಳನ್ನ ಬದಿಗೊತ್ತಿ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ನೀಡಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆಂದಿದ್ದಾರೆ.
ನಾವು ಕನ್ನಡಾಂಭೇಯ ಮಕ್ಕಳು ಯಾರಿಗೂ ಕಡಿಮೆ ಇಲ್ಲ. ಪ್ರಾದೇಶಿಕ ಪಕ್ಷವನ್ನ ಉಳಿಸಿ ಬೆಳೆಸಬೇಕು, ನಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕು. ನಮ್ಮ ನೀರನ್ನ ಉಳಿಸಿಕೊಳ್ಳುವುದಕ್ಕೆ ಪ್ರಾದೇಶಿಕ ಪಕ್ಷವನ್ನ ಉಳಿಸಬೇಕು. ನಾವೇನು ಭಿಕ್ಷುಕರಲ್ಲ ನಾವೆಲ್ಲ ಒಟ್ಟಾಗಿ ಹೋರಾಟ ಮಾಡೋಣ ಎಂದಿದ್ದಾರೆ.
VIDEO | ಗಿನ್ನೆಸ್ ದಾಖಲೆ; 50 ಸಾವಿರ ವಜ್ರಗಳಿಂದ ತಯಾರಿಸಿದ ಉಂಗುರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 18 =
Remember me
