ಬೆಂಗಳೂರು:ರಾಜರಾಜೇಶ್ವರಿನಗರದಲ್ಲಿ ನಮ್ಮ ಪಕ್ಷದ ನೆಲೆಗಟ್ಟಿದೆ. ಪಕ್ಷದ ಗೌರವ ಉಳಿಸುವ ಕೆಲಸ ಮಾಡುತ್ತೇನೆ. ಶಿರಾ, ರಾಜರಾಜೇಶ್ವರಿ ನಗರ ಎರಡನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ಮುನಿರತ್ನ ಜೆಡಿಎಸ್ ಸೇರ್ಪಡೆ ಪ್ರಶ್ನೆಯೇ ಬಂದಿಲ್ಲ. ಆ ಬಗ್ಗೆ ಯಾರೂ ನನ್ನ ಜತೆ ಚರ್ಚೆ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಮೂರು ಜನ ಆಕಾಂಕ್ಷಿಗಳಿದ್ದಾರೆ. ಆ ಪೈಕಿ ಒಬ್ಬರನ್ನು ಅಂತಿಮಗೊಳಿಸಿ ಸೋಮವಾರ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಜೆಡಿಎಸ್‌ನಲ್ಲಿ ಲೈಮ್ ಲೈಟ್‌ಗೆ ಬಂದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಲ್ಕೆರೆ ರವಿ ಪತ್ನಿಗೆ 4 ವರ್ಷ ಜಿ.ಪಂ ಅಧ್ಯಕ್ಷೆ ಸ್ಥಾನ ಮಾನ ಕೊಟ್ಟು ಬೆಳೆಸಿದ್ದು ನಾವು. ಈಗ ಅವರು ಕಾಂಗ್ರೆಸ್‌ಗೆ ತಮ್ಮ ಸಾಮರ್ಥ್ಯ ಧಾರೆ ಎರೆಯಲು ಹೋಗಿದ್ದಾರೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:ಹಾವು-ಮುಂಗುಸಿ ಒಂದಾಗಿಸಲು ಡಿಕೆಶಿ ಯತ್ನ ; ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಜತೆ ಮಹತ್ವದ ಚರ್ಚೆ
ಪಕ್ಷ ಬಿಡುವವರಿಗೆ ಸನ್ಮಾನ!:ಎರಡು, ಮೂರು ಬಾರಿ ನಮ್ಮ ಶಾಸಕರಿಗೆ ಬಲೆ ಬಿಸಿದ್ದಾರೆ ಎಂಬುದು ಗೊತ್ತಿದೆ. 3 ಜನ ಪಕ್ಷ ಬಿಟ್ಟು ಹೋದರು. ಪಕ್ಷವೇನು ಮುಳುಗಿ ಹೋಯಿತೆ? ಪಕ್ಷ ಬಿಡುವವರು ಈಗಲೇ ರಾಜೀನಾಮೆ ಕೊಟ್ಟು ಹೋಗಿ. ಬೇಕಿದ್ದರೆ ನಾನೇ ಸನ್ಮಾನ ಮಾಡಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಕಳಿಸಿ ಕೊಡುತ್ತೇನೆ ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರಿಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ:VIDEO| ಆ ಏರಿಯಾ ಪೂರ್ತಿ ಆಕೆಯದ್ದೇ ದರ್ಬಾರ್! ಯಾರಾದ್ರು ಹೋದ್ರೆ ಏನ್​ ಮಾಡ್ತಾಳೆ ಗೊತ್ತಾ?
ಅನುಕೂಲಕ್ಕಾಗಿ ಜಾತಿ ರಾಜಕಾರಣ :ರಾಜರಾಜೇಶ್ವರಿನಗರದಲ್ಲಿ ಹಿಂದೆ ಒಕ್ಕಲಿಗರನ್ನು ತಗೆದು, ಈಗ ಒಕ್ಕಲಿಗರನ್ನು ಗೆಲ್ಲಿಸಿ ಎಂದು ಹೋಗಿದ್ದಾರೆ. ಯಾರಿಗೆ ಬೇಕಾದರೂ ಇವರು ಟೋಪಿ ಹಾಕುತ್ತಾರೆ. ತಮ್ಮ ಅನುಕೂಲಕ್ಕೆ ಜಾತಿ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು. ನಾನು ಆರಾಮವಾಗಿದ್ದೇನೆ. ಅಶೋಕ ಚಕ್ರವರ್ತಿ, ಚಂದ್ರಗುಪ್ತ ಮತ್ತಿತರ ಧಾರಾವಾಹಿ ನೋಡಿಕೊಂಡಿದ್ದೇನೆ. ಸ್ವಾರ್ಥ ಬಯಸಿ ಹೋಗುವವರನ್ನು ಧರ್ಮ ಕೈ ಹಿಡಿಯುವುದಿಲ್ಲ ಎಂದು ಕೃಷ್ಣ ಪರಮಾತ್ಮನೇ ಹೇಳಿದ್ದಾನಲ್ಲವೆ ಎಂದು ಕುಮಾರಸ್ವಾಮಿ ಕೇಳಿದರು.
ಜೆಡಿಎಸ್ ಬಿಡುವವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
