ಬೆಂಗಳೂರು:ನಾನು 1982ರಲ್ಲೇ ಕ್ಯಾಸಿನೋ ನೋಡಿದ್ದೇನೆ. ನನ್ನ ಧರ್ಮಪತ್ನಿ ಮತ್ತು ನಾನು ಮಲೇಶಿಯಾಗೆ ಟೂರ್​ ಹೋಗಿದ್ದೆವು. ಆ ವೇಳೆ ಅಲ್ಲಿನ ಗೈಡ್​ ಕರೆದುಕೊಂಡು ಹೋಗಿದ್ದರು. ಅಲ್ಲಿ ಡ್ರಗ್ಸ್​ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 2014ರಲ್ಲಿ ಪಕ್ಷದ ಸಭೆ ಮಾಡಲು ಶ್ರೀಲಂಕಾಕ್ಕೆ ಹೋಗಿದ್ದೆವು. ಗೋವಾ ಸೇರಿದಂತೆ ಬೇರೆ ಕಡೆಗಿಂತ ಅಲ್ಲಿ ಕಡಿಮೆ ಖರ್ಚು ಬರುತ್ತದೆ ಎಂದು ಸಭೆ ಮಾಡಿದ್ದೆವು. ಆರು ವರ್ಷದ ಹಿಂದಿನ ವಿಚಾರವನ್ನು ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಜಮೀರ್​ ಅಹ್ಮದ್​ರನ್ನೇ ಕೇಳಬೇಕು ಎಂದರು. ಜಮೀರ್​ ಅವರೇ ನಿಮ್ಮನ್ನು ಕೊಲಂಬೋಗೆ ಕರೆದುಕೊಂಡು ಹೋಗಿದ್ದರೆ? ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್​ಡಿಕೆ, ಅವರೇಕೆ ನನ್ನನ್ನು ಕರೆದುಕೊಂಡು ಹೋಗುತ್ತಾರೆ. ನಮಗೇನೂ ಹೋಗಲು ಬರುವುದಿಲ್ಲವೆ? ಎಂದು ಮರು ಪ್ರಶ್ನಿಸಿದರು.
ಇದನ್ನೂ ಓದಿರಿಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​
ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರನ್ನು ಬಳಕೆ ಮಾಡಲಾಗುತ್ತಿದೆ. ಡ್ರಗ್ಸ್​ ಮಾಫಿಯಾದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅದನ್ನು ದಿಕ್ಕು ತಪ್ಪಿಸುವ ಕೆಲಸ ನೆಡೆಯುತ್ತಿದೆ. ತನಿಖೆ ವಿಷಯಾಂತರ ಆಗಬಾರದು ಮತ್ತು ದಾರಿ ತಪ್ಪಬಾರದು ಎಂದ ಎಚ್​ಡಿಕೆ, ಡ್ರಗ್ಸ್​ ದಂಧೆ ಕೇವಲ ಸ್ಯಾಂಡಲ್​ವುಡ್​ ಮಾತ್ರವಲ್ಲ ಎಲ್ಲ ಕಡೆ ಇದೆ. ನಾನು ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದವನು. ಆಗ ನನ್ನ ಗಮನಕ್ಕೆ ಡ್ರಗ್ಸ್​ ವಿಚಾರ ಬಂದಿಲ್ಲ. ಕ್ಯಾಸಿನೋದಲ್ಲೇ ಡ್ರಗ್ಸ್​ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಬೆಂಗಳೂರಿನಲ್ಲಿ ನೈಟ್​ಬಾರ್​ಗಳು ಮತ್ತು ಪಾಟಿರ್ಗಳಲ್ಲೂ ಕಾಣಿಸುತ್ತಿದೆ. ಫೈವ್​ಸ್ಟಾರ್​ ಹೋಟೆಲ್​ಗಳಲ್ಲಿ ಬೆಳಗ್ಗೆ 5 ಗಂಟೆವರೆಗೂ ಮ್ಯೂಸಿಕ್​ ಹಾಕಿಕೊಂಡು ನಡೆಸೋ ಪಾರ್ಟಿಗಳಲ್ಲಿ ಡ್ರಗ್ಸ್​ ಇರುತ್ತದೆ ಎಂಬ ಮಾತು ಕೇಳಿದ್ದೇನೆ ಎಂದರು.
ಐಪಿಎಲ್​, ಕೆಪಿಎಲ್​ ಮತ್ತು ಕೆಲವರು ಅವಾರ್ಡ್​ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿ ನಟರನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕಾರ್ಯಕ್ರಮ ಮಾಡಿ ಅವಾರ್ಡ್​ ಕೊಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳು ಪ್ರಾರಂಭವಾದ ನಂತರ ಡ್ರಗ್ಸ್​ ದಂಧೆ ಪ್ರಾರಂಭವಾಗಿದೆ ಎಂದು ಹೇಳಿದರು.
ಡ್ರಗ್ಸ್​ ಕೇಸ್​ನ ಪ್ರಮುಖ ಆರೋಪಿ ಶೇಖ್​ ಫಾಝಿಲ್​ನ ಜತೆಗೆ ಶಾಸಕ ಜಮೀರ್​ ಅಹ್ಮದ್​ರ ಹೆಸರು ಪ್ರಸ್ತಾಪವಾಗಿದ್ದು, ರಾಜ್ಯರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಜಮೀರ್​, ಈ ಹಿಂದೆ ಜೆಡಿಎಸ್​ನ 26 ಶಾಸಕರು ಎಚ್​.ಡಿ.ಕುಮಾರಸ್ವಾಮಿ ಸಹಿತ ಕೊಲಂಬೋಗೆ ಹೋಗಿದ್ವಿ ಎಂದಿದ್ದರು. ಈ ಹೇಳಿಕೆಗೆ ಕಿಡಿಕಾರಿದ್ದ ಎಚ್​ಡಿಕೆ, ಒಂದಾನೊಂದು ಕಾಲದಲ್ಲಿ ನಮ್ಮ ಪಕ್ಷದಲ್ಲಿದ್ದ ರಾಜಕಾರಣಿಯೊಬ್ಬರು ಜೆಡಿಎಸ್ ಶಾಸಕರು ಮತ್ತು ನಾನು ಕೊಲಂಬೋ ಪ್ರವಾಸ ಕೈಗೊಂಡಿದ್ದಾಗಿ ನೀಡಿರುವ ಹೇಳಿಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತಿದೆ ಎಂದು ಶನಿವಾರ ಟ್ವೀಟ್​ ಮೂಲಕ ಟೀಕಿಸಿದ್ದರು.
ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

‘ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ…’

ಜಮೀರ್ ಹೇಳಿಕೆ ಬೆನ್ನಲ್ಲೇ ಶ್ರೀಲಂಕಾ ಪ್ರವಾಸದ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 19 =
Remember me
