ಹಾಸನ:ಬಹಳ ದಿನಗಳ ಬಳಿಕ ಮಾಜಿ ಸಚಿವ ಎಚ್​.ಡಿ.ರೇವಣ್ಣ ಮತ್ತೊಮ್ಮೆ ಜನರ ಗಮನ ಸೆಳೆಯುತ್ತಿದ್ದು, ಅವರು ಇದೀಗ ತಮ್ಮ ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಹಾಗೇನಾದರೂ ಮಾಡಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಅವರು ಹೇಳಿದ್ದು, ಈ ಹಿಂದಿನ ಹಲವು ವಿಚಾರಗಳನ್ನು ಸ್ಮರಿಸಿಕೊಂಡು ಟೀಕೆಗಳಿಗೆ ಸಮಜಾಯಿಷಿಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಮನೆಗೆ ಹೋಗಿ ಕಡತಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ತಮ್ಮ ಬಗ್ಗೆ ಬಂದಿರುವ ರಾಜಕೀಯ ಆರೋಪದ ಕುರಿತು ಅವರು ಹಾಸನದಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ಯಡಿಯೂರಪ್ಪ ಅವರ ಮನೆ ಬಾಗಿಲಲ್ಲಿ ಧರಣಿ ಮಾಡೋಣ ಎಂದು ಹೋಗುತ್ತಿದ್ದಾಗ, ನೆಲಮಂಗಲ ದಾರಿಯಲ್ಲಿ ಫೋನ್​ ಕರೆ ಬಂತು. ಬಾ ರೇವಣ್ಣ ಏನು ಬೇಕು ಮಾಡೋಣ ಎಂದು ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದರಿಂದ ಅವರ ಮನೆಗೆ ಹೋಗಿ, ನಮ್ಮ ಜನರನ್ನು ಉಳಿಸಿಕೊಡಿ ಎಂದು ಕೋರಿಕೊಂಡೆ. ಸಿಎಂ ಮನೆಗೆ ಕಡತಕ್ಕೆ ಸಹಿ ಹಾಕಿಸಿಕೊಳ್ಳಲು ಹೋಗಿದ್ದೆ ಎಂದು ನಮ್ಮ ಎಮ್​​ಎಲ್​ಸಿ ಗೋಪಾಲಸ್ವಾಮಿ ಹೇಳಿದ್ದು ತಪ್ಪು. ನಾನು ಹಾಗೇನಾದರೂ ಮಾಡಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಇಂದು ಒಂದು ಸೆಕೆಂಡ್​ನಲ್ಲಿ ಹಾಕಿಸಿದ ಲಸಿಕೆ ಎಷ್ಟು ಗೊತ್ತೇ!?
ನಾನ್ಯಾವಾಗ ಸೂಪರ್ ಸಿಎಮ್ ಆಗಿದ್ದೆ?:ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೇವಣ್ಣ ಸೂಪರ್ ಸಿಎಂ ಆಗಿದ್ದರು ಎಂದು ಧ್ರುವನಾರಾಯಣ್ ಮಾಡಿರುವ ಆರೋಪಕ್ಕೂ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾನ್ಯಾವಾಗ ಸೂಪರ್ ಸಿಎಂ ಆಗಿದ್ದೆ ಎಂದು ಪ್ರಶ್ನಿಸಿರುವ ಅವರು, ಸೂಪರ್ ಸಿಎಂ ಆಗಿದ್ದಿದ್ದರೆ ಪವರ್ ಮಿನಿಸ್ಟರ್ ಸ್ಥಾನ ನನಗೆ ಯಾಕೆ ತಪ್ಪುತ್ತಿತ್ತು? ಎಂದೂ ಕೇಳಿದ್ದಾರೆ.
ಮೊದಲು ಧ್ರುವನಾರಾಯಣ್ ಯಾರ ಪರ ಇರುತ್ತಾರೆ ಅಂತ ಹೇಳಲಿ. ಸಿದ್ದರಾಮಯ್ಯ ಇಲ್ಲ ಎಂದರೆ ಧ್ರುವನಾರಾಯಣ್ ಗೆಲ್ಲುತ್ತಾರಾ ಕೇಳಿ? ನಾನು ಕಾಂಗ್ರೆಸ್ ಮನೆ ಒಡೆಯಲು ಹೇಳಿಲ್ಲ. ಅವರು ಗಟ್ಟಿಯಾಗಿ ತಬ್ಕೊಂಡು ಇನ್ನೂ ಗಟ್ಟಿಯಾಗಿರಲಿ ಅಂತ ಹೇಳಿದೆ. ಧ್ರುವನಾರಾಯಣ್ ಯಾವ ಕಡೆಗೆ ಹೋಗಲಿ ಎಂಬ ಯೋಚನೆಯಲ್ಲಿದ್ದಾರೆ, ಅವರು ನನ್ನ ಮುಂದೆ ಬಂದು ಮಾತನಾಡಲಿ ಎಂದಿರುವ ರೇವಣ್ಣ, ಸಿದ್ದರಾಮಯ್ಯ ಹಾಗೂ ತಮ್ಮ ವೈಯಕ್ತಿಕ ವಿಶ್ವಾಸವೇ ಬೇರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಸೂಪರ್ ಸಿಎಂ ವಿಚಾರವಾಗಿ ಮಾತನಾಡಿರುವ ಅವರು, ಕುಮಾರಸ್ವಾಮಿಗೆ ಏನೂ ಕೆಲಸ ಮಾಡಲು ಆಗಿಲ್ಲ. ಕುಮಾರಸ್ವಾಮಿ ನರಕಯಾತನೆ ಅನುಭವಿಸಿದ್ದಾನೆ, ಅವನಾಗಿದ್ದಕ್ಕೆ 14 ತಿಂಗಳು ಪೂರೈಸಿದ ಎಂದು ಹೇಳಿದ್ದಾರೆ.
ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…

ನಾಪತ್ತೆಯಾದ ಹದಿನಾಲ್ಕರ ಹುಡುಗಿ 2 ವರ್ಷಗಳ ಬಳಿಕ 4 ತಿಂಗಳ ಮಗುವಿನೊಂದಿಗೆ ಪತ್ತೆಯಾದಳು!

Sign in to your account
Please enter an answer in digits:five + thirteen =
Remember me
