ಹಾಸನ:ಮಾಜಿ ಸಚಿವ ಜಮೀರ್ ಅಹಮದ್​ ಒಕ್ಕಲಿಗರ ಕುರಿತಾಗಿ ನೀಡಿರುವ ಹೇಳಿಕೆಯ ಬಿಸಿ ಇನ್ನೂ ಇರುವಾಗಲೇ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದ್ದು, ದಲಿತರನ್ನು ಮುಖ್ಯಮಂತ್ರಿ ರೇಸ್​ಗೆ ಬಿಡುತ್ತಿಲ್ಲ ಎಂದು ಸಂಸದೀಯ ಮಂಡಳಿ ಅಧ್ಯಕ್ಷ ಹೇಳಿರುವುದು ಗಮನ ಸೆಳೆದಿದೆ.
ಸಂಸದೀಯ ಮಂಡಳಿ ಅಧ್ಯಕ್ಷ ,ಸಕಲೇಶಪುರ ಶಾಸಕ ಎಚ್​.ಕೆ. ಕುಮಾರಸ್ವಾಮಿ ಮಾತನಾಡಿ, ದಲಿತರು ಹೆಚ್ಚಾಗಿ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ, ಈಗಲೂ ಬೆಂಬಲಿಸುತ್ತಲೇ ಇದ್ದಾರೆ. ಆದರೆ ನಮ್ಮ ದಲಿತರು ಯಾರೂ ಮುಖ್ಯಮಂತ್ರಿ ರೇಸ್​ನಲ್ಲಿ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ರೇಸ್​ಗೆ ನಮ್ಮನ್ನು ಬಿಡುತ್ತಿಲ್ಲ. ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ 55 ವರ್ಷ ಆಡಳಿತ ಮಾಡಿದೆ. ಖರ್ಗೆಯವರಂತಹ ಘಟಾನುಘಟಿ ಲೀಡರ್ ಇದ್ದರೂ ಅವರಿಗೆ ಅಧಿಕಾರ ಕೊಟ್ಟಿಲ್ಲ. ಖರ್ಗೆಯವರಿಗೆ 80 ವರ್ಷ ಆಗಿದ್ದಕ್ಕಾದರೂ, ಅವರ ಅನುಭವಕ್ಕಾದರೂ ಅವರ ಹೆಸರು ಹೇಳಬೇಡವೇ? ಪ್ರಸ್ತಾಪ ಮಾಡಬಾರದೇ? ಬೇರೆ ಪಕ್ಷದವನಾದರೂ ನಾನು ಹೇಳುತ್ತೇನೆ ಎಂದು ಎಚ್​.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು ತಮ್ಮ ಜೆಡಿಎಸ್​ನಲ್ಲಿ ಸಿಎಂ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಎಚ್​.ಡಿ.ಕುಮಾರಸ್ವಾಮಿಯವರೇ ನಮ್ಮ ಸಿಎಂ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದಾರೆ. ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್​​.ಕೆ.ಕುಮಾರಸ್ವಾಮಿ, ರಾಜಕಾರಣದಲ್ಲಿ ಯಾರೂ ಶತ್ರುವಲ್ಲ, ಮಿತ್ರರೂ ಅಲ್ಲ. ದೇವೇಗೌಡರು ಅವರ ರಾಜಕೀಯ ಗುರು, ಅದು ನೂರಕ್ಕೆ ನೂರು ಸತ್ಯ. ಯಾವ ಸಮುದಾಯವೂ ಹೆಚ್ಚಲ್ಲ, ಕಡಿಮೆ ಅಲ್ಲ, ಎಲ್ಲ ಸಮುದಾಯ ಮತದಾರರಿಗೂ ಸಮಾನ ಗೌರವ ಇದೆ, ಎಲ್ಲ ಜನರ ಗೌರವ ಪಡೆದು ನಡೆಯಬೇಕು ಎಂದು ಹೇಳಿದ್ದಾರೆ.
ಆಸ್ಪತ್ರೇಲಿ ಬಿಸಿನೀರಿಲ್ಲ, ಊಟ ಸರಿ ಇಲ್ಲ ಎಂದು ಹೇಳಿ ವೈದ್ಯಕೀಯ ಪರೀಕ್ಷೆಗೆ ಸಹಕರಿಸದ ನವ್ಯಶ್ರೀ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 4 =
Remember me
