ಕೋಲಾರ:ಅಬಕಾರಿ ಸಚಿವ ಸ್ಥಾನಕ್ಕೆ ಎಚ್​. ನಾಗೇಶ್ ರಾಜೀನಾಮೆ ಕೊಡುತ್ತಿದ್ದಂತೆ ಅವರ ಸ್ವಕ್ಷೇತ್ರದಲ್ಲೇ ಕೆಲವರು ಪಟಾಕಿ ಸಿಡಿಸಿ ತೆಂಗಿನ ಕಾಯಿ ಹೊಡೆಯುವ ಮೂಲಕ ಸಂಭ್ರಮಿಸಿದರು.
ಬಿಎಸ್​ವೈ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೆಲವೇ ಕ್ಷಣಗಳು ಬಾಕಿ ಇರುವಾಗಲೇ ಮುಳಬಾಗಿಲು ಕ್ಷೇತ್ರದ ಶಾಸಕ ಎಚ್.ನಾಗೇಶ್ ಅವರಿಗೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಯಿತು. ಅಬಕಾರಿ ಸಚಿವ ಸ್ಥಾನಕ್ಕೆ ನಾಗೇಶ್​ ರಾಜೀನಾಮೆ ನೀಡುವ ವೇಳೆ ಮಾಜಿ ಶಾಸಕ‌ ಕೊತ್ತೂರು ಮಂಜುನಾಥ್ ಅವರ ಬೆಂಬಲಿಗರು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಮುಳಬಾಗಿಲು ನಗರದ ಸೌಂದರ್ಯ ಸರ್ಕಲ್​ನಲ್ಲಿ ಕೊತ್ತೂರು ಮಂಜುನಾಥ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು‌. ಇನ್ನು ಎಚ್.ನಾಗೇಶ್ ಅವರು ಸ್ಥಳೀಯವಾಗಿ ಸಾಕಷ್ಟು ಮುಖಂಡರ ವಿಶ್ವಾಸ ಕಳೆದುಕೊಂಡಿದ್ದರು. ಇನ್ನು ಕೇವಲ ಹದಿನೈದು ದಿನದಲ್ಲಿ ಮುಳಬಾಗಿಲು ಕ್ಷೇತ್ರಕ್ಕೆ ಬಂದು, ಕೊತ್ತೂರು ಮಂಜುನಾಥ್ ಅವರ ಸಹಾಯದಿಂದ ಶಾಸಕರಾಗಿದ್ದ ನಾಗೇಶ್, ಇತ್ತೀಚೆಗೆ ಕೊತ್ತೂರು ಮಂಜುನಾಥ್ ಅವರ ವಿಶ್ವಾಸವನ್ನೂ ಕಳೆದುಕೊಂಡಿದ್ದರು.
ಸಿಎಂ ಮನೆ ಮುಂದೆ ಅಬಕಾರಿ ಸಚಿವ ನಾಗೇಶ್ ಬೆಂಬಲಿಗರ ಗಲಾಟೆ

ಕೊನೆಗೂ ವಿಸ್ತರಣೆಯಾಯ್ತು ರಾಜ್ಯ ಸಚಿವ ಸಂಪುಟ: ಬಿಎಸ್‌ವೈ ಟೀಮ್‌ಗೆ ಏಳು ಹೊಸ ಮಂತ್ರಿಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 4 =
Remember me
