ಮೈಸೂರು:ಏ ಮೋದಿ ಏನಪ್ಪಾ ನಿಂದು ಅಂದಾ ದರ್ಬಾರ್! ಸದನದಲ್ಲಿ ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತಿವೆ. ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತಿದ್ದೀರಿ. ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯೇ ಹಾಳಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗುಡುಗಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್​, 2600 ಎಕರೆ ರೈತರ ಜಮೀನು ಹೋಯ್ತು. ಮಂಡ್ಯ ಭಾಗದ ನೂರಾರು ಕುಟುಂಬಗಳು‌ ಬೀದಿಗೆ ಬಂದಿದ್ದಾರೆ. ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದೀರಿ. ಇಲ್ಲಿ ನಾಲ್ಕು ಪಥನೇ ಸಾಕಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ, ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ. ಅಪಘಾತವಾದ್ರೆ ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಎಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಚಾಲಕ ರಹಿತ ಮೆಟ್ರೋ ಸೇವೆ ಮೂಲಕ ಚೆನ್ನೈ ಮೆಟ್ರೋದಿಂದ ಕ್ರಾಂತಿಕಾರಕ ಬದಲಾವಣೆ
ಸಂಸದ ಪ್ರತಾಪ ಸಿಂಹರನ್ನು ಮಿನಿ ಕಂಟ್ರ್ಯಾಕ್ಟರ್ ಎಂದು ಕರೆದು ವಿಶ್ವನಾಥ್​, ನಿನ್ನ ಕೆಲಸ ಏನು? ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು? ರಸ್ತೆಗೆ ಮೆಟಿರೀಯಲ್ ಒದಗಿಸಿದ್ದು ಎಲ್ಲರಿಗೂ ಗೊತ್ತಿದೆ. ದಿನ ಬೆಳಗಾದರೆ ಹೆದ್ದಾರಿಗೆ ಬಂದು ಫೇಸ್ ಬುಕ್ ಲೈವ್ ಬರ್ತಿಯಾ. ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ. ಅವರನ್ನು ಹೋಗಿ ನೋಡಪ್ಪ, ಅಲ್ಲಿಯೂ ಪ್ರೆಸ್ ಮೀಟ್ ಮಾಡಪ್ಪ ಎಂದು ಟೀಕಿಸಿದರು.
ಅವನ್ಯಾರೋ ಶ್ರೀಧರ್ ಅನ್ನೋ ಅಧಿಕಾರಿ ಸರ್ವಿಸ್ ರಸ್ತೆ ಮಾಡವ ಕಾನೂನು ಎಲ್ಲಿದೆ ಅಂತಾ ಕೇಳ್ತಾನೆ. ಏನಪ್ಪ ಮೋದಿ ನಿಮ್ಮ ಸರ್ಕಾರದಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆಯುತ್ತಿದೆಯಾ? ಎನ್ನುವ ಮೂಲಕ ದಶಪಥ ಹೆದ್ದಾರಿ ಯೋಜನಾ ನಿರ್ದೇಶಕ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು.(ದಿಗ್ವಿಜಯ ನ್ಯೂಸ್​)
100ಕ್ಕೂ ಹೆಚ್ಚು ಬಾರಿ ಇರಿದು ಈತನ ಕಥೆ ಮುಗಿಸಿದ್ರು!

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: 25 ಅಡಿ ಆಳಕ್ಕೆ ಬಿದ್ದ ಕಾರು, ಸ್ಥಳದಲ್ಲೇ ದಂಪತಿ ದುರಂತ ಅಂತ್ಯ

ಚಾಲಕ ರಹಿತ ಮೆಟ್ರೋ ಸೇವೆ ಮೂಲಕ ಚೆನ್ನೈ ಮೆಟ್ರೋದಿಂದ ಕ್ರಾಂತಿಕಾರಕ ಬದಲಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
