ಮೈಸೂರು:ಎಂಎಲ್‌ಸಿ ಎಚ್.ವಿಶ್ವನಾಥ್ ಅವರ ಈಗಿನ ಅತಂತ್ರಸ್ಥಿತಿಗೆ ಬಿಜೆಪಿಯಲ್ಲಿರುವ ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ಕಾರಣ ಎಂದು ಶಾಸಕ ಸಾ.ರಾ. ಮಹೇಶ್ ಆರೋಪಿಸಿದ್ದಾರೆ. ವಿಶ್ವನಾಥ್ ಅವರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಿದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗಲು ಬಿಜೆಪಿಯ ಆ ಸಚಿವ ಸ್ಥಾನಾಕಾಂಕ್ಷಿ ಶಾಸಕರೇ ಕಾರಣ. ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ವಿಶ್ವನಾಥ್‌ಗೆ ಸಚಿವ ಸ್ಥಾನ ತಪ್ಪಿಸಲು ಈ ರೀತಿ ಮಾಡಿದ್ದು, ಅದರಲ್ಲಿ ಅವರು ಯಶಸ್ಸಿಯಾಗಿದ್ದಾರೆ. ಹೈಕೋರ್ಟ್ ಕೂಡ ವಿಶ್ವನಾಥ್ ಸಚಿವರಾಗಲು ಅರ್ಹರಲ್ಲ ಎಂಬ ತೀರ್ಪು ನೀಡಿದೆ. ಇದರಿಂದ ಬಿಜೆಪಿಯಲ್ಲೇ ಕೆಲವರು ಒಳಗೊಳಗೆ ಖುಷಿ ಪಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.
ವಿಶ್ವನಾಥ್ ಅವರನ್ನು ಮಂತ್ರಿ ಮಾಡುವ ಇರಾದೆ ಬಿಜೆಪಿಯವರಿಗೆ ಇರಲಿಲ್ಲ. ಹೀಗಾಗಿ, ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರೊಂದಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಇವರನ್ನು ನಿಲ್ಲಿಸಿ ಗೆಲ್ಲಿಸುವ ಪ್ರಯತ್ನ ಮಾಡಲಿಲ್ಲ. ಅವರ ಉದ್ದೇಶ ಸ್ಪಷ್ಟವಾಗಿತ್ತು ಎಂಬುದು ಈಗ ಗೊತ್ತಾಗುತ್ತಿದೆ. ಸಚಿವ ಸ್ಥಾನಕ್ಕೆ ಅನರ್ಹಗೊಂಡಿರುವ ವಿಶ್ವನಾಥ್ ಈಗಿನ ಸ್ಥಿತಿ ಕಂಡರೆ ಅಯ್ಯೋ ಪಾಪ ಅನಿಸುತ್ತಿದೆ. ಇಳಿವಯಸ್ಸಿನಲ್ಲೂ ಅವರಲ್ಲಿರುವ ಅಧಿಕಾರದ ಆಸೆಯೇ ಅವರ ಈಗಿನ ಸ್ಥಿತಿಗೆ ಕಾರಣ ಎಂದು ಲೇವಡಿ ಮಾಡಿದರು.
ಹುಣಸೂರಿನ ಜನರಿಗೆ ಕೈಕೊಟ್ಟು, ರಾಜಕೀಯವಾಗಿ ಮರುಜನ್ಮ ನೀಡಿದ ಜೆಡಿಎಸ್‌ಗೆ ದ್ರೋಹ ಬಗೆದ ವಿಶ್ವನಾಥ್‌ಗೆ ಈಗ ಸರಿಯಾದ ಶಿಕ್ಷೆಯಾಗಿದೆ. ಸುಳ್ಳು ಬಹಳ ಕಾಲ ಇರುವುದಿಲ್ಲ. ಅಂತಿಮವಾಗಿ ಸತ್ಯಕ್ಕೆ ಜಯವಾಗಿದೆ. ಇನ್ನು ಮುಂದೆಯಾದರೂ ಅವರಿಗೆ ಆತ್ಮಸಾಕ್ಷಿ ಇದ್ದರೆ ಜೆಡಿಎಸ್ ಪಕ್ಷವನ್ನು, ನಮ್ಮ ನಾಯಕರನ್ನು ಟೀಕೆ ಮಾಡುವುದನ್ನು ಬಿಡಬೇಕು ಎಂದರು.
ಸಿದ್ದುಗೆ ತಿರುಗೇಟು: ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್‌ಗೆ ನಷ್ಟ ಆಯಿತು ಎಂಬ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಾ.ರಾ.ಮಹೇಶ್ ತಿರುಗೇಟು ನೀಡಿದರು. ‘‘ಮಂಡ್ಯದಲ್ಲಿ ಕಾಂಗ್ರೆಸ್‌ನವರು ಕಳೆದ ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡಿದ್ದರು. ಆಗಲೇ ಇಬ್ಬರ ನಡುವೆ ಬಿರುಕು ಉಂಟಾಯಿತು. ಜೆಡಿಎಸ್ ಇಲ್ಲದೆ ಕಾಂಗ್ರೆಸ್ ಇಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಿ’’ ಎಂದು ಎಚ್ಚರಿಸಿದರು.
‘ಯಾರ ಮರ್ಜಿಯಲ್ಲಿ ಆ ಸ್ಥಾನದಲ್ಲಿ ಕುಳಿತಿದ್ದಾರೆ ಎಂಬುದನ್ನ ಮರೆತಿದ್ದಾರೆ’ ಸಿಎಂ ವಿರುದ್ಧ ವಿಶ್ವನಾಥ್​ ಅಸಮಾಧಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
