ಬೆಳಗಾವಿ:ಕಾಂಗ್ರೆಸ್​ ಸರ್ಕಾರದಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾಜಿ ಸಚಿವ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಎಷ್. ವಿಶ್ವನಾಥ್ ಈಗಾಗಲೇ 7 ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ನಿಮಗೆ ಸಿಎಂ ಸ್ಥಾನ ಬೇಕಾ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ವಿಶ್ವನಾಥ್ ಜಾತ್ಯಾತೀತ ತತ್ವ-ಸಿದ್ದಾಂತಗಳ ಕಾಂಗ್ರೆಸ್​ ಪ್ರತಿನಿಧಿಯಾಗಿರುವ ಶಾಮನೂರು ಶಿವಶಂಕರಪ್ಪನವರು ಜಾತಿ ಆಧಾರಿತ ಪಕ್ಷದ ಸದಸ್ಯರಂತೆ ಮಾತನಾಡುತ್ತಿರುವುದನ್ನು ನಾನು ಖಂಡಿಸುತ್ತೇನೆ. ನಿಮಗೆ ಕಾಂಗ್ರೆಸ್​ನಲ್ಲಿ ಸಾಕಷ್ಟು ಅವಕಾಶ ಸಿಕ್ಕಿವೆ. ಈಗಿದ್ದರೂ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್​ನಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಬೇರೆ ಬೇರೆ ಜಾತಿಯವರಿಗೆ ಎಲ್ಲಿ ಅವಕಾಶ ಮಾಡಿಕೊಡಬೇಕೋ ಅಲ್ಲಿ ಮಾಡಿಕೊಡುತ್ತಾರೆ. ಲಿಂಗಾಯತರಿಗೆ ಏಳು ಮಂತ್ರಿ ಸ್ಥಾನ ಕೊಟ್ಟಿದ್ದೇವೆ. ಇನ್ನೆಷ್ಟು ಸ್ಥಾನ ಕೊಡಬೇಕು, ನಿಮಗೆ ಸಿಎಂ ಸ್ಥಾನ ಬೇಕಿತ್ತು ಅಂದ್ರೆ ನಾಯಕತ್ವ ತಗೊಳ್ಳಿ ನಿಮ್ಮ ಜನಾಂಗದವರಿಗೆ ಹೇಳಿಸಿ ಮತ ಹಾಕಿಸಿ ಗೆದ್ದು ಬಂದು ಮುಖ್ಯಮಂತ್ರಿ ಅಗಿ, ಅದರಲ್ಲಿ ನಿಮ್ಮ ಆಸಕ್ತಿ ತೋರಿಸಿ ಎಂದು ಸವಾಲೆಸೆದಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂ ಎಚ್​ಡಿಕೆ ಅಧಿಕಾರವಿಲ್ಲದ ಅತೃಪ್ತ ಆತ್ಮ: ದಿನೇಶ್​ ಗುಂಡೂರಾವ್
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಜನಾಂಗದವರಿಗೆ ಹೇಳಿ ಎಷ್ಟು ವೋಟ್​ ಹಾಕಿಸಿದ್ದೀರಾ. ಇಲ್ಲಿ ಸಿದ್ದರಾಮಯ್ಯನವರಿಂದ ಎಷ್ಟು ವೋಟ್ ಬಿದ್ದಿದೆ. ನೀವೆಲ್ಲ ಸಿದ್ದರಾಮಯ್ಯನವರಿಂದ ಗೆದ್ದಿದ್ದೀರಿ. ನಾನು ಬಹಳ ಖಾರವಾಗಿ ಹೇಳಬೇಕಾಗುತ್ತೆ. ಹಾಗಾಗಿ ಅನಾವಶ್ಯಕವಾಗಿ ಮಾತಾಡಬೇಡಿ ಎಂದಿದ್ದಾರೆ.
ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ನಮ್ಮ ಕುರುಬ ಸಮುದಾಯದವರು ಹೆಚ್ಚಿನ ಮತ ಹಾಕಿ ಗೆಲ್ಲಿಸಿದ್ದಾರೆ. ಲಿಂಗಾಯರತು ಸೇರಿದಂತೆ ಎಲ್ಲಾ ಸಮುದಾಯದವರು ಕಾಂಗ್ರೆಸ್​ ಪಕ್ಷವನ್ನು ಆಶೀರ್ವದಿಸಿದ್ದಾರೆ. ಒಂದು ವೇಳೆ ಜಾತಿಯ ಆಧಾರದ ಮೇಲೆ ಅಧಿಕಾರ ನೀಡಲಾಗುತ್ತಿದ್ದರೆ ಅದನ್ನು ಸರಿ ಮಾಡಲು ಹೇಳಿ ಅದರು ಬಿಟ್ಟು ಈಗೆ ಬೀದಿ ರಂಪ ಮಾಡುವುದು ಸರಿಯಲ್ಲ.
ಸಿದ್ದರಾಮಯ್ಯನವರಿಗೆ ಬಹಳ ಹತ್ತಿರ ಇದ್ದವರು ನೀವು. ಅದನ್ಯಾಕೆ ಬೀದಿಯಲ್ಲಿ ಬಂದು ದೊಡ್ಡ ರಂಪಾಟ ಮಾಡುತ್ತಿದ್ದೀರಾ. ಅಧಿಕಾರಿ ಶಾಹಿ ಆಡಳಿತವನ್ನು ಬೀದಿಗೆ ತಂದು ಮಾತನಾಡುತ್ತಿದ್ದೀರಾ. ಶಾಮನೂರು ಶಿವಶಂಕರಪ್ಪ ಜಾತಿ ವಿಷಯ ಮಾತಾಡಿದ್ರೆ ಆಡಳಿತ ಕುಸಿಯುತ್ತೆ. ನಿಮಗೆ ಯಾರಿಗೂ ಜವಾಬ್ದಾರಿ ಇಲ್ವಾ, ಜವಾಬ್ದಾರಿ ಇಟ್ಕೊಂಡು ಮಾತಾಡಿ. ಸಣ್ಣ ಪುಟ್ಟ ಜಾತಿಗಳ ಭವಿಷ್ಯ ಇದೆ, ಅದನ್ನ ಗಮನದಲ್ಲಿಟ್ಟುಕೊಂಡು ಮಾತಾಡಿ. ಇದೆಲ್ಲ ಜನಕ್ಕೆ ಅರ್ಥ ಆಗುತ್ತೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಮಾಜಿ ಸಚಿವ, ಎಚ್. ವಿಶ್ವನಾಥ್​ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + fifteen =
Remember me
