ಚಾಮರಾಜನಗರ:ಸನ್​ಸ್ಟ್ರೊಕ್​ನಿಂದಾಗಿ ಜನತಾ ಪರಿವಾರ ಹಾಗೂ ಕಾಂಗ್ರೆಸ್​ ಹಾಳಾಗಿದೆ. ಇದು ಬಿಜೆಪಿಗೂ ಕಾಲಿಟ್ಟಿದೆ. ಸಿಎಂ ಬಿ.ಎಸ್​.ಯಡಿಯೂರಪ್ಪ ಕೂಡ ಸನ್​ಸ್ಟ್ರೊಕ್​ಗೆ ಒಳಗಾಗಿದ್ದು ಭ್ರಷ್ಟ, ದಲ್ಲಾಳಿ ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಎಚ್​.ವಿಶ್ವನಾಥ ಆಕ್ರೋಶ ಹೊರಹಾಕಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿರುವ ವಿಶ್ವನಾಥ್​, ಬಿಎಸ್​ವೈ ವಿರುದ್ಧ ಟೀಕಾಸ್ತ್ರ ಬಿಡುತ್ತಲೇ ಇದ್ದಾರೆ.
ವಿಶ್ವನಾಥ್​ರ ಈ ನಡೆಯನ್ನು ಆಕ್ಷೇಪಿಸಿರುವ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ್ ಕುಮಾರ್, ‘ನಿಮಗಾಗಿದ್ದ ಪೊಲಿಟಿಕಲ್ ಸ್ಟ್ರೋಕ್​ಗೆ ಟ್ರೀಟ್​ಮೆಂಟ್ ಕೊಟ್ಟು ನಿಮ್ಮನ್ನು ವಿಧಾನ ಪರಿಷತ್ತಿಗೆ ಕಳಿಸಿ ಕೊಟ್ಟವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಇದನ್ನು ಇಷ್ಟು ಬೇಗ ಮರೆತುಬಿಟ್ಟಿರಾ?’ ಎಂದು ಮಾತಿನಲ್ಲೇ ಕೆಣಕಿದ್ದಾರೆ.
‘ಹತಾಶೆ ನಿಮ್ಮನ್ನು ಕಂಗೆಡಿಸಿದೆ. ನಾಲಿಗೆ ಹಳಿತಪ್ಪಿದೆ, ಪ್ರತಿಫಲದ ಸ್ಮರಣೆ ನೀವು ಮರೆತಂತಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕೇಂದ್ರ ಸಮಿತಿಯಿಂದ ಕಳಿಸಿದ ಸಚಿವರುಗಳ ಪಟ್ಟಿಯನ್ನು ಯಾರಾದರೂ ಸರಿ ಸ್ವೀಕರಿಸಲೇಬೇಕು. ತಾಳ್ಮೆ ಇದ್ದರೆ ಎಲ್ಲವನ್ನೂ ಜಯಿಸಬಹುದು’ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಶ್ವನಾಥ್ ವಿರುದ್ಧ ನಿರಂಜನ್ ಕುಮಾರ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಾರಿ ಗವಿಗಂಗಾಧರೇಶ್ವರ ಸ್ವಾಮಿಗಿಲ್ಲ ಸೂರ್ಯರಶ್ಮಿ! ಶಿವಲಿಂಗವನ್ನ ಸ್ಪರ್ಶಿಸದೆ ಪಥ ಬದಲಿಸಿದ ಭಾಸ್ಕರ

ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

‘ಯಡಿಯೂರಪ್ಪನವರೇ ನಿಮ್ಮ ಅಂತ್ಯ ಇಂದಿನಿಂದಲೇ ಆರಂಭ..!’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
